ಗುರುವಾರ , ಮೇ 28, 2020
27 °C

ಪುನರ್‌ಬಳಕೆ ಇಂಧನ; ಸಮಾಲೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದುಬೈ (ಪಿಟಿಐ): ಭಾರತ ಹಾಗೂ ಚೀನಾದಂತಹ ಅಭಿವೃದ್ಧಿಶೀಲ ದೇಶಗಳ ಪುನರ್‌ಬಳಕೆ ಇಂಧನ ಉದ್ಯಮದಲ್ಲಿ ಹೂಡಿಕೆ ಮಾಡುವುದಕ್ಕೆ ಸಂಬಂಧಿಸಿದಂತೆ  ಪುನರ್ ಬಳಕೆ ಇಂಧನ ಸಂಸ್ಥೆಗಳ ಖ್ಯಾತ ಉದ್ಯಮಿಗಳು ಸಮಾಲೋಚನೆ ನಡೆಸಿದರು.ಜಗತ್ತಿನಲ್ಲಿ ಭವಿಷ್ಯದ ಇಂಧನದ ಕುರಿತ ಶೃಂಗಸಭೆಯಲ್ಲಿ ಪಾಲ್ಗೊಂಡ ಉದ್ಯಮಿಗಳು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಅಲ್ಲದೇ, ಈ ಅಧಿವೇಶನದಲ್ಲಿ ಭಾರತ, ಚೀನಾ ಹಾಗೂ ಬ್ರೆಜಿಲ್‌ನಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪುನರ್‌ಬಳಕೆ ಇಂಧನದ ಮೇಲೆ ಹೂಡಿಕೆ ಮಾಡುವ ಗುಣಾತ್ಮಕ ದೃಷ್ಟಿಕೋನ ಕುರಿತು ಚರ್ಚೆಗಳು ನಡೆದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.