ಗುರುವಾರ , ಮೇ 6, 2021
31 °C

ಪುಷ್ಕರಣಿಗೆ ಜೀವದಾನ: ಅಭಿವೃದ್ಧಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಟೇಕಲ್ ವೃತ್ತದಲ್ಲಿರುವ ಪುರಾತನ ವೇಣುಗೋಪಾಲಸ್ವಾಮಿ ಪುಷ್ಕರಣಿ ಯನ್ನು ಮುಚ್ಚುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಡೆ ಹಾಕಿದ್ದಾರೆ. ಪುಷ್ಕರಣಿಯಲ್ಲಿ ಯಾರೇ ಆಗಲಿ ಕಸ- ಕಡ್ಡಿ ಹಾಕುವುದು, ಮಣ್ಣನ್ನು ತುಂಬಿಸುವುದನ್ನು ಮಾಡುವಂತಿಲ್ಲ. ಹಾಗೆ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು ಎಂಬ ಫಲಕವನ್ನು ಅಲ್ಲಿ ನೆಡಲಾಗಿದೆ. ತಡವಾಗಿಯಾದರೂ ಜಿಲ್ಲಾಡಳಿತ ಪುಷ್ಕರಣಿ ಉಳಿಸುವ ಕ್ರಮಕ್ಕೆ ಮುಂದಾಗಿದೆ.ನೀರಿಗೆ ತೀವ್ರ ಬರ ಎದುರಿಸುತ್ತಿರುವ ಜಿಲ್ಲೆ ಯಲ್ಲಿ ಶಾಶ್ವತ ನೀರಾವರಿಗಾಗಿ ಜನತೆ ನಿರಂತರ ವಾಗಿ ಆಗ್ರಹಿಸುತ್ತಿದ್ದಾರೆ. ಇದೇ ವೇಳೆ ಕೆರೆ- ಕುಂಟೆ, ರಾಜಕಾಲುವೆಗಳು ಒತ್ತುವರಿ ಯಾಗುತ್ತಿರುವ ಕುರಿತು ದೂರು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲೆ ಪುಷ್ಕರಣಿಯನ್ನು ಮುಚ್ಚ ಲು ವೇಣುಗೋಪಾಲ ಸ್ವಾಮಿ ದೇವಾಲಯ ಟ್ರಸ್ಟ್ ಕಳೆದ ವರ್ಷ ಜುಲೈನಿಂದಲೇ ಪ್ರಯತ್ನ ಆರಂಭಿಸಿತ್ತು.ಕಳೆದ ವರ್ಷದಿಂದ ಕೊಳದ ಸುತ್ತಲೂ ಮಣ್ಣಿನ ರಾಶಿಯನ್ನು ಹಾಕುವ ಪ್ರಯತ್ನ ನಿರಂತರ ನಡೆದ ಪರಿಣಾಮವಾಗಿ, ಈ ಬಾರಿ ಗಣೇಶ ಚತುರ್ಥಿ ಪ್ರಯುಕ್ತ ಸಾಮೂಹಿಕ ಗಣೇಶ ವಿಸರ್ಜನೆ ಕಾರ್ಯಕ್ರಮವೂ ಅಲ್ಲಿ ನಡೆಯಲಿಲ್ಲ. ಈ ಬಾರಿ ಜಿಲ್ಲಾಡಳಿತ ಇಟಿಸಿಎಂ ಆಸ್ಪತ್ರೆ ಎದುರಿನ ಕೋಲಾರಮ್ಮ ಕೆರೆಯಲ್ಲಿ ತೊಟ್ಟಿಯೊಂದನ್ನು ನಿರ್ಮಿಸಿ ಅಲ್ಲಿ ಗಣೇಶ ವಿಸರ್ಜನೆಗೆ ಅನುವು ಮಾಡಿಕೊಟ್ಟಿತ್ತು.ಸುಮಾರು ಶೇ. 25ಕ್ಕೂ ಹೆಚ್ಚು ಪುಷ್ಕರಣಿ ಮಣ್ಣಿನ ರಾಶಿಯಿಂದ ತುಂಬಿದೆ. ಟ್ರಸ್ಟ್‌ಗೆ, ನಗರಸಭೆಗೆ, ಭಕ್ತರಿಗೆ ವರ್ಷಕ್ಕೊಮ್ಮೆ ಗಣೇಶ ಚತುರ್ಥಿಯಂದು ನೆನಪಾಗು ತ್ತಿತ್ತು. ಪುಷ್ಕರಣಿ ನಗರದ ಧಾರ್ಮಿಕ, ಐತಿಹಾಸಿಕ ಪ್ರತೀಕ ಗಳಲ್ಲಿ ಒಂದು. ಅಲ್ಲಿ ನಡೆಯು ತ್ತಿದ್ದ ವೇಣುಗೋಪಾಲ ಸ್ವಾಮಿ ತೆಪ್ಪೋತ್ಸವದ ಧಾರ್ಮಿಕ ಸಂಭ್ರಮವನ್ನು ಇಂದಿಗೂ ಹಲವರು ಸ್ಮರಿಸುತ್ತಾರೆ. ಪುಷ್ಕರಣಿಗೆ ಮಳೆನೀರು ಮಾತ್ರ ಸರಾಗವಾಗಿ ಹರಿದು ಬರುತ್ತಿದ್ದ ಓಣಿಗಳು ಮುಚ್ಚಿರುವುದರಿಂದ, ಚರಂಡಿ ನೀರು ಹರಿದುಬರುತ್ತಿದೆ.ಅಭಿವೃದ್ಧಿ: ವೇಣುಗೋಪಾಲಸ್ವಾಮಿ ಪುಷ್ಕರಣಿ ಹೀನಾಯ ಸ್ಥಿತಿಯಲ್ಲಿದೆ. ಹೀಗಾಗಿ ಮೊದಲಿಗೆ ಅದನ್ನು ಮುಚ್ಚುವ ಪ್ರಯತ್ನಕ್ಕೆ ತಡೆಯೊಡ್ಡ ಬೇಕು ಎಂದು ನಗರಸಭೆಗೆ ಸೂಚನೆ ನೀಡಿದ್ದೆ. ಸದ್ಯಕ್ಕೆ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿರುವೆ. ಪುಷ್ಕರಣಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವಿದೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ  `ಪ್ರಜಾವಾಣಿ~ಗೆ ತಿಳಿಸಿದ್ದಾರೆ.`ಪುಷ್ಕರಣಿ ದೇವಾಲಯ ಟ್ರಸ್ಟ್‌ಗೆ ಸೇರಿದ್ದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಪುಷ್ಕರಣಿ ದೇವಾಲಯ ಆಸ್ತಿಯಾಗಿರುವಂತೆ, ಜಲಸಂಪ ನ್ಮೂಲವೂ ಹೌದು. ಹೀಗಾಗಿ ಅದನ್ನು ರಕ್ಷಿಸುವ ಹೊಣೆ ಜಿಲ್ಲಾಡಳಿತದ ಮೇಲಿದೆ. ಈ ನಿಟ್ಟಿನಲ್ಲಿ ಅದನ್ನು ಮುಚ್ಚುವ ಪ್ರಯತ್ನವನ್ನು ನಿಲ್ಲಿಸಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.`ಪುಷ್ಕರಣಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆಯುವುದಿಲ್ಲ. ಪುರಾತನ ಜಲಸಂಪನ್ಮೂಲ ವನ್ನು ರಕ್ಷಿಸಿ ಮತ್ತೆ ದೇವಾಲಯ ಟ್ರಸ್ಟ್‌ಗೆ ನೀಡಲಾಗುವುದು. ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ~ ಎಂದು ಸ್ಪಷ್ಟಪಡಿಸಿದರು.ಪುಷ್ಕರಣಿಯನ್ನು ಮುಚ್ಚುವ ಪ್ರಯತ್ನವನ್ನು ನಿಲ್ಲಿಸಬೇಕು ಎಂದು ಫಲಕವನ್ನು ಹಾಕಿದ ಬಳಿಕವೂ ಮಣ್ಣು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಪುಷ್ಕರಣಿಯನ್ನು ಸಂರಕ್ಷಿಸುವ ಜಿಲ್ಲಾಡಳಿತದ ಪ್ರಯತ್ನಕ್ಕೆ ನಾಗರಿಕರು, ಸಂಸ್ಥೆಗಳೂ ಸಹಕರಿಸಬೇಕು~ ಎಂದು ಅವರು ಕೋರಿದರು.ಪುಷ್ಕರಣಿ ಮುಚ್ಚುವ ಬಗ್ಗೆ `ಪ್ರಜಾವಾಣಿ~  ಕಳೆದ ಜು. 5ರಂದು ವಿಶ್ವ ಪರಿಸರ ದಿನದ ಅಂಗವಾಗಿ `ಜಲದ ಕಣ್ಣು ಮುಚ್ಚುವ ಸಮಯ~ ವಿಶೇಷ ವರದಿ ಪ್ರಕಟಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.