ಚೆನ್ನೈ (ಪಿಟಿಐ): ಕರ್ನಾಟಕದ ಸಹನಾ ಕುಮಾರಿ ಇಲ್ಲಿ ನಡೆಯುತ್ತಿರುವ 53ನೇ ರಾಷ್ಟ್ರೀಯ ಅಂತರ ರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ನ ಹೈಜಂಪ್ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ತೋರಿದರು.

ಬುಧವಾರ ನಡೆದ ಸ್ಪರ್ಧೆಯಲ್ಲಿ ಒಲಿಂಪಿಯನ್ ಸಹನಾ 1.88 ಮೀಟರ್ ಜಿಗಿಯುವ ಮೂಲಕ ಈ ಸಾಧನೆ ಮಾಡಿದರು. 32 ವರ್ಷ ವಯಸ್ಸಿನ ಅಥ್ಲೀಟ್ 1.92 ಮೀ. ದೂರ ಜಿಗಿದು ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ. ಆದರೆ, ಆ ರೀತಿಯ ಪ್ರದರ್ಶನ ತೋರಲು ಅವರಿಗೆ ಇಲ್ಲಿ ಸಾಧ್ಯವಾಗಲಿಲ್ಲ.

ಬಂಗಾಳದ ಮಲ್ಲಿಕಾ ಮಂಡಲ್ 1.74 ಮೀಟರ್ ಜಿಗಿದು ಹೈಜಂಪ್ ವಿಭಾಗದ ಬೆಳ್ಳಿ ಗೆದ್ದುಕೊಂಡರೆ, ಕೇರಳದ ಎನ್.ಡಿ. ಟಿಂಟು (ಎತ್ತರ: 1.68) ಕಂಚಿಗೆ ತೃಪ್ತಿಪಟ್ಟರು.

ತಮಿಳುನಾಡಿನ ಲಾಂಗ್ಜಂಪ್ ಸ್ಪರ್ಧಿ ಪ್ರೇಮ್ ಕುಮಾರ್ ನೂತನ ಕೂಟ ದಾಖಲೆಯೊಂದಿಗೆ ಚಿನ್ನ ತಮ್ಮದಾಗಿಸಿಕೊಂಡರು. ತಮಿಳುನಾಡಿನ ಪ್ರೇಮ್ ಎಂಟು ಮೀಟರ್ ಜಿಗಿಯುವ ಮೂಲಕ ಈ ಸಾಧನೆಗೆ ಕಾರಣರಾದರು. ಕರ್ನಾಟಕದ ಅರ್ಷದ್ (ದೂರ; 7.85ಮೀ.) ಈ ವಿಭಾಗದ ಬೆಳ್ಳಿ ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗದ 400ಮೀ. ಓಟದ ಸ್ಫರ್ಧೆಯಲ್ಲಿ ಮಿಂಚಿನ ಪ್ರದರ್ಶನ ತೋರಿದ ಕರ್ನಾಟಕದ ಇನ್ನೊಬ್ಬ ಅಥ್ಲೀಟ್ ಪೂವಮ್ಮ 52.85 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದುಕೊಂಡರು. ಲಂಡನ್ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸಿದ್ದ ಕೇರಳದ ಟಿಂಟು ಲುಕಾ (ಕಾಲ: 2:04.01ಸೆ.) ಗುರಿ ಮುಟ್ಟಿ 800ಮೀ. ಓಟದಲ್ಲಿ ಚಿನ್ನ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.