ಮಂಗಳವಾರ, ಏಪ್ರಿಲ್ 13, 2021
31 °C

ಪೈಪ್‌ನಲ್ಲಿ ಕಲುಷಿತ ನೀರು ಪೂರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ಸ್ಥಳೀಯ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರ, ಕರಡಕಲ್ಲ, ಲಿಂಗಸುಗೂರ ಪಟ್ಟಣದ ನಾಗರಿಕರಿಗೆ ಶುದ್ಧ ಹಾಗೂ ಸಮ ರ್ಪಕ ಕುಡಿವ ನೀರು ಪೂರೈಸುವಲ್ಲಿ ಪುರಸಭೆ ಆಡಳಿತ ಮಂಡಳಿ ಮತ್ತು ಅಧಿಕಾರಿಗಳು ಸಂಪೂರ್ಣ ನಿಲಕ್ಷ್ಯ ವಹಿಸಿದೆ. ಕುಡಿವ ನೀರು ಪೂರೈಸುವ ಮುಖ್ಯ ರೇಸಿಂಗ್ ಪೈಪ್‌ಲೈನ್ ಎಲ್ಲೆಂದರಲ್ಲಿ ಸೋರಿಕೆ ಕಾಣಿಸಿಕೊಂಡು ಕಲುಷಿತ ನೀರು ಪೂರೈಕೆಯಾಗುವುದು ನಿದರ್ಶನವಾಗಿದೆ.ಜಲಶುದ್ಧೀಕರಣ ಘಟಕದಿಂದ ಮದರ್ ಟ್ಯಾಂಕ್‌ಗೆ ಅಳವಡಿಸಿದ ಮುಖ್ಯ ಪೈಪ್‌ಲೈನ್ ಮೂರು ಕಡೆ ಗಳಲ್ಲಿ ಸೋರಿಕೆ ಕಾಣಿಸಿಕೊಂಡಿದೆ. ಮದರ್‌ಟ್ಯಾಂಕ್‌ನಿಂದ ಲಿಂಗಸುಗೂರ ಪಟ್ಟಣದ ಕುಡಿಯುವ ನೀರು ಸಂಗ್ರಹಣಾ ಓವರ್ ಹೆಡ್ ಟ್ಯಾಂಕ್‌ನ ರೇಸಿಂಗ್ ಪೈಪ್ ಎರಡು ಕಡೆ ಸೋರಿಕೆ ಕಾಣಿಸಿಕೊಂಡಿದೆ. ಕಸಬಾಲಿಂಗ ಸುಗೂರಗೆ ನೀರು ಪೂರೈಸುವ ರೇಸಿಂಗ್ ಪೈಪ್ ನಾಲ್ಕಾರು ಕಡೆಗಳಲ್ಲಿ ಸೋರಿಕೆ ಕಾಣಿಸಿಕೊಂಡಿದ್ದರು ದುರಸ್ತಿಗೆ ಮುಂದಾಗದಿರುವುದು ಶೋಚನೀಯ.ಮದರ್ ಟ್ಯಾಂಕ್‌ನಿಂದ ಕರಡಕಲ್ಲ ಕುಡಿವ ನೀರು ಸಂಗ್ರಹಣಾ ಟ್ಯಾಂಕ್‌ಗೆ ನೀರು ಪೂರೈಸುವ ರೇಸಿಂಗ್ ಪೈಪ್ ಕೂಡ ಅಲ್ಲಲ್ಲಿ ಸೋರಿಕೆ ಕಾಣಿಸಿಕೊಂಡಿದೆ. ಸೋರಿಕೆ ಕಾಣಿಸಿಕೊಂಡ ಸ್ಥಳಗಳಲ್ಲಿ ಇಟ್ಟಂಗಿ ಸಿದ್ಧಪಡಿಸುವ ಬಟ್ಟಿಗಳನ್ನು ಹಾಕಿಕೊಳ್ಳಲಾಗಿದೆ. ಸಿಮೆಂಟ್ ಬ್ಲಾಕ್ ಮತ್ತು ಇಟ್ಟಂಗಿ ಸಿದ್ಧಪಡಿಸಲು ಅಕ್ರಮವಾಗಿ ಸೋರಿಕೆ ನೀರನ್ನೆ ಬಳಸಿಕೊಳ್ಳುತಿದ್ದರು ಕೂಡ ಪುರಸಭೆ ಸಿಬ್ಬಂದಿ ಕ್ಯಾರೆ ಎನ್ನದಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.ರೇಸಿಂಗ್ ಪೈಪ್‌ಲೈನ್ ಸೋರಿಕೆ ಕಾಣಿಸಿಕೊಂಡ ಸ್ಥಳದಲ್ಲಿ ಆಳೆತ್ತರದ ವಿಶಾಲವಾದ ಹೊಂಡಗಳು ನಿರ್ಮಾಣಗೊಂಡಿವೆ. ಈ ರೀತಿ ನಿರ್ಮಾಣಗೊಂಡ ಸ್ಥಳದಲ್ಲಿ ಹಂದಿ, ನಾಯಿ, ಜಾನುವಾರುಗಳು ಈಜಾ ಡುತ್ತವೆ. ಅಕ್ಕಪಕ್ಕದ ಮಹಿಳೆಯರು ಮಲೀನಗೊಂಡ ಬಟ್ಟೆಗಳನ್ನು ಸೋಪು ಹಚ್ಚಿ ತೊಳೆಯುವುದು ಸಾಮಾನ್ಯ. ಅದೇ ನೀರು ಪೈಪ್‌ಲೈನ್‌ದಲ್ಲಿ ಸೇರ್ಪಡೆಗೊಂಡು ಬಹುತೇಕ ವಾರ್ಡ್ ಗಳಿಗೆ ಕಲುಷಿತ ದುರ್ವಾಸನೆಯುಕ್ತ ನೀರು ಪೂರೈಕೆಯಾಗುತ್ತದೆ ಎಂದು ನಾಗರಾಜ ಆರೋಪಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.