ಶನಿವಾರ, ಮೇ 15, 2021
24 °C

ಪೈಪ್‌ಲೈನ್ ಹಾಕಲು ಶಾಸಕರ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ನಗರದ ವಾರ್ಡ್ ಸಂಖ್ಯೆ 27ರ ವ್ಯಾಪ್ತಿಯ ಮಹೇಶನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದಕ್ಕಾಗಿ ಪೈಪ್‌ಲೈನ್ ಅಳವಡಿಸುವಂತೆ ಶಾಸಕ ರಹೀಮ್‌ಖಾನ್ ಅವರು ನಗರಸಭೆ ಕಾರ್ಯನಿರ್ವಾಹಕ ಎಂಜಿನಿಯರ್ ಅವರಿಗೆ ಸೂಚಿಸಿದರು.ಬುಧವಾರ ಕಾಲೋನಿಗೆ ಭೇಟಿ ನೀಡಿದ ಅವರು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಕಾಲೋನಿಯ ಸಮಸ್ಯೆಗಳ ಕುರಿತು ಗುರುಶಾಂತಪ್ಪ ನಿಂಗದಳ್ಳಿ ಮನವಿ ಪತ್ರ ಸಲ್ಲಿಸಿದರು.ನಳದ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆಗೆ ಒಂದು ತಿಂಗಳಿಂದ ಮನವಿ ಮಾಡುತ್ತ ಬರಲಾಗಿದೆ.ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಲೋನಿಯ ವೀರಮ್ಮ ರಾಜಪ್ಪ, ಶೋಭಾದೇವಿ, ಸರೋಜನಿ ಹುಡದಳ್ಳಿ, ಪಾರ್ವತಿ ಬಚ್ಚಣ್ಣ, ಪ್ರತಿಭಾ ಜೀರ್ಗೆ ಮತ್ತಿತರರು ಅಳಲು ತೋಡಿಕೊಂಡರು.ಕಾಲೋನಿಯಲ್ಲಿ ನಗರಸಭೆಯಿಂದ ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಭೂಮಿ ತಗ್ಗು ಮತ್ತು ಎತ್ತರ ಪ್ರದೇಶದಲ್ಲಿ ಇರುವುದರಿಂದ ಸುಮಾರು 25 ಮನೆಗಳಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದು ಹೇಳಿದರು.ಇದಕ್ಕೆ ಸ್ಪಂದಿಸಿದ ಶಾಸಕರು ಕಾಲೋನಿಯ ಹನುಮಾನ ಮಂದಿರದಿಂದ ವೀರಪ್ಪ ಜೀರ್ಗೆ ಹಾಗೂ ಅನೀತಾ ಯದ್ಲಾಪುರೆ ಅವರ ಮನೆವರೆಗೆ ಕೂಡಲೇ ಪೈಪ್‌ಲೈನ್ ಅಳವಡಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.