ಮಂಗಳವಾರ, 4-6-1963

ಪೋಪ್ ಜಾನ್ ನಿಧನ
ವಾಟಿಕನ್. ಜೂನ್ 3 - ನಾಲ್ಕು ದಿನಗಳಿಂದ ಸಾವು ಬದುಕಿನ ಹೋರಾಟದಲ್ಲಿ ತುಯ್ದಾಡುತ್ತಿದ್ದ ಪೋಪ್ಜಾನ್ರು ಇಂದು ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಹೊಟ್ಟೆಯಲ್ಲಿ ದುರ್ಮಾಂಸ ಬೆಳವಣಿಗೆಯೊಂದರ ಫಲವಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಅಸ್ವಸ್ಥರಾಗಿದ್ದ ಪೋಪ್ರ ಸ್ಥಿತಿ ಕಳೆದ ಶುಕ್ರವಾರದಿಂದ ಉಲ್ಬಣಗೊಂಡಿತ್ತು.

ವಿಮಾನ ಅಪಘಾತ;29 ಮಂದಿ ಸಾವು
ನವದೆಹಲಿ, ಜೂನ್ 3 - ಪಠಾಣ್ ಕೋಟ್ ಬಳಿ ಇಂದು ಇಂಡಿಯನ್ ಏರ್ಲೈನ್ನ ಕಾರ್ಪೊರೇಷನ್ ವಿಮಾನವೊಂದು ಕೆಳಕ್ಕೆ ಬಿದ್ದು ಅದರಲ್ಲಿದ್ದ 29 ಮಂದಿ ಸಾವಿಗೀಡಾದರು.

ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಗಳ ತಡೆಗೆ ಒತ್ತಾಯ: ದೆಹಲಿಗೆ ಪತ್ರ
ಬೆಂಗಳೂರು, ಜೂನ್ 3 - ರಾಜ್ಯದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಚುನಾವಣೆಗಳನ್ನು ತತ್ಕ್ಷಣ ನಿಲ್ಲಿಸಿ, ನಿಷ್ಪಕ್ಷಪಾತವಾದ ವಿಚಾರಣೆಗೆ ಆಜ್ಞೆ ಮಾಡಬೇಕೆಂದು ರಾಜ್ಯದ ಕೆಲವು ಕಾಂಗ್ರೆಸ್ ಪ್ರಮುಖರು ಎ.ಐ.ಸಿ.ಸಿ.ಗೆ ಪತ್ರ ಬರೆದು ಒತ್ತಾಯ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.