ನವದೆಹಲಿ: `ಗದಗ ಜಿಲ್ಲೆ ರೈತರು `ಪೋಸ್ಕೊ~ ಉಕ್ಕು ಕಾರ್ಖಾನೆ ಸ್ಥಾಪನೆಗೆ ಅವಕಾಶ ಕೊಡದಿದ್ದರೆ ನೆರೆ ಜಿಲ್ಲೆಗಳಲ್ಲಿ ಭೂಮಿ ಸ್ವಾಧೀನ ಮಾಡಿಕೊಡಲು ಸರ್ಕಾರ ಸಿದ್ಧವಿದ್ದು, ಬಜೆಟ್ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

ರಾಜ್ಯ ಸರ್ಕಾರ ಏರ್ಪಡಿಸಿದ್ದ `ಜಾಗತಿಕ ಹೂಡಿಕೆದಾರರ ಸಭೆ~ಯ ಬಳಿಕ ಗುರುವಾರ ಪತ್ರಕರ್ತರ ಜತೆ ಮಾತನಾಡಿದ ನಿರಾಣಿ, ಪೋಸ್ಕೋಗೆ ಗದಗ ಜಿಲ್ಲೆಯಲ್ಲಿ ಮೂರು ಸಾವಿರ ಎಕರೆ ಜಮೀನು ಗುರುತಿಸಲಾಗಿದೆ. ಭೂಮಿ ಬಿಟ್ಟುಕೊಡಲು ಶೇ 90ರಷ್ಟು ರೈತರು ಒಪ್ಪಿದ್ದಾರೆ. ಅತ್ಯಲ್ಪ ರೈತರು ವಿರೋಧ ಮಾಡುತ್ತಿದ್ದಾರೆ. ಈ ವಿರೋಧದ ಹಿಂದೆ ರಾಜಕೀಯವಿದೆ ಎಂದು ಆರೋಪಿಸಿದರು.

ಉಕ್ಕು ಕಾರ್ಖಾನೆಗೆ ಭೂಮಿ ಬಿಟ್ಟುಕೊಡುವಂತೆ ಮತ್ತೊಮ್ಮೆ ಗದಗ ರೈತರ ಮನವೊಲಿಸಲಾಗುವುದು. ಇದು ಸಾಧ್ಯವಾಗದಿದ್ದರೆ ನೆರೆಯ ರಾಯಚೂರು, ಯಾದಗೀರ್ ಸೇರಿದಂತೆ 5ಜಿಲ್ಲೆಗಳಲ್ಲಿ ಭೂಮಿ ಗುರುತಿಸಲಾಗಿದ್ದು, ಕಂಪೆನಿಗೆ ಸೂಕ್ತವೆನಿಸಿದ ಕಡೆ ಜಮೀನು ನೀಡಲಾಗುವುದು. ಬೇರೆ ಜಿಲ್ಲೆಯಲ್ಲಿ ಜಮೀನು ಪಡೆಯುವುದಕ್ಕೆ ಪೋಸ್ಕೊ ಕೂಡಾ ಆಸಕ್ತಿ ಹೊಂದಿದೆ ಎಂದರು.

ಕೊಪ್ಪಳದಲ್ಲಿ `ಆರ್ಸೆಲ್ಲರ್ ಮಿತ್ತಲ್~ ಕಂಪೆನಿಗೆ ಭೂಮಿ ಮತ್ತು ನೀರು ಕೊಡಲಾಗಿದೆ. ಉಕ್ಕು ಉತ್ಪಾದನೆಗೆ ಅಗತ್ಯವಿರುವ ಅದಿರಿನ ಒಟ್ಟು ಪ್ರಮಾಣದಲ್ಲಿ ಶೇ 50ರಷ್ಟನ್ನು ರಾಜ್ಯ ಸರ್ಕಾರ ಪೂರೈಸಲಿದೆ. ಉಳಿದಿದ್ದನ್ನು ಖಾಸಗಿಯವರಿಂದ ಪಡೆದುಕೊಳ್ಳಬೇಕು. ಗಣಿಗಾರಿಕೆ ಪ್ರಕರಣ ಕುರಿತು ಸುಪ್ರೀಂ ಕೋರ್ಟ್ ತೀರ್ಪು ಬಂದ ತಕ್ಷಣ ಗಣಿ ಗುತ್ತಿಗೆ ಕುರಿತು ನಿರ್ಧರಿಸಲಾಗುವುದು ಎಂದರು.

ಭೂಮಿ ಸ್ವಾಧೀನ: ಕೂಡಗಿ ಬಳಿ ಎನ್ಟಿಪಿಸಿ ಸ್ಥಾಪಿಸುತ್ತಿರುವ ಉಷ್ಣ ವಿದ್ಯುತ್ ಉತ್ಪಾದನಾ ಘಟಕದ ಮೊದಲ ಹಂತಕ್ಕೆ ಅಗತ್ಯವಿರುವ ಎರಡು ಸಾವಿರ ಎಕರೆ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ.

ರೂ. 20 ಸಾವಿರ ಕೋಟಿ ವೆಚ್ಚದಲ್ಲಿ ನಾಲ್ಕು ಸಾವಿರ ಮೆ.ವಾ. ವಿದ್ಯುತ್ ಉತ್ಪಾದಿಸುವ ಉದ್ದೇಶವಿದೆ. ಮೊದಲ ಹಂತದಲ್ಲಿ 2400 ಮತ್ತು ಎರಡನೇ ಹಂತದಲ್ಲಿ 1400 ಮೆ.ವಾ ವಿದ್ಯುತ್ ಉತ್ಪಾದಿಸಲಾಗುವುದು. ಮೊದಲ ಹಂತದ ಯೋಜನೆಗೆ ಬಜೆಟ್ ಬಳಿಕ ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್ಕುಮಾರ್ ಶಿಂಧೆ ಶಂಕುಸ್ಥಾಪನೆ ನೆರವೇರಿಸುವರು ಎಂದು ತಿಳಿಸಿದರು.

ರಾಜ್ಯದಲ್ಲಿ ಬಂಡವಾಳ ಹೂಡಲು ಬರುವ ಕಂಪೆನಿಗಳ ಅನುಕೂಲಕ್ಕಾಗಿ `ಭೂಬ್ಯಾಂಕ್~ ಸ್ಥಾಪಿಸಲಾಗಿದೆ. ಇದಕ್ಕಾಗಿ ಸುಮಾರು 1.20ಲಕ್ಷ ಎಕರೆ ಭೂಮಿ ಗುರುತಿಸಲಾಗಿದ್ದು, 80 ಸಾವಿರ ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. 40 ಸಾವಿರ ಎಕರೆ ಈಗಾಗಲೇ ಭೂ ಬ್ಯಾಂಕಿನಲ್ಲಿದೆ ಎಂದು ನಿರಾಣಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.