ಗುರುವಾರ , ಜನವರಿ 23, 2020
21 °C

ಪೋಸ್ಟಲ್ ಹಾಕಿ: ಮಧ್ಯ ಪ್ರದೇಶಕ್ಕೆ ಮಣಿದ ಪಂಜಾಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಧ್ಯಪ್ರದೇಶ ತಂಡದವರು ಇಲ್ಲಿ ನಡೆಯುತ್ತಿರುವ ಅಖಿಲ ಭಾರತ 25ನೇ ಪೋಸ್ಟಲ್ ಹಾಕಿ ಟೂರ್ನಿಯ ಪಂದ್ಯದಲ್ಲಿ 3-1ಗೋಲುಗಳಿಂದ ಪಂಜಾಬ್ ತಂಡವನ್ನು ಮಣಿಸಿದರು.ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ (ಕೆಎಸ್‌ಎಚ್‌ಎ) ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಸಾಧಿಕ್ ನೂರ್ 38ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ಫೈಜಲ್ ಅಲಿ 40 ಮತ್ತು 43ನೇ ನಿಮಿಷದಲ್ಲಿ ಗೋಲು ಗಳಿಸಿ ಪ್ರಭಾವಿ ಎನಿಸಿದರು.ಪಂಜಾಬ್ ತಂಡದ ಏಕೈಕ ಗೋಲನ್ನು ಧರ್ಮಪಾಲ್ ಮೂರನೇ ನಿಮಿಷದಲ್ಲಿ ತಂದಿಟ್ಟರು.

ಇನ್ನೊಂದು ಪಂದ್ಯದಲ್ಲಿ ತಮಿಳುನಾಡು 6-3ಗೋಲುಗಳಿಂದ ಒಡಿಶಾ ಎದುರು ಗೆಲುವು ಪಡೆಯಿತು.

 ತಮಿಳುನಾಡಿನ ರಾಜಾ 16ನೇ ನಿಮಿಷದಲ್ಲಿ ಒಂದು ಗೋಲು ಗಳಿಸಿದರೆ, ಕಮಲ್ ಕಣ್ಣನ್ ಒಟ್ಟು ಐದು ಗೋಲುಗಳನ್ನು ತಂದಿಟ್ಟು ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಇಂದು ಸೆಮಿಫೈನಲ್: ಕರ್ನಾಟಕ-ಪಂಜಾಬ್ (ಬೆಳಿಗ್ಗೆ 9ಕ್ಕೆ) ಹಾಗೂ ಮಧ್ಯ ಪ್ರದೇಶ-ತಮಿಳುನಾಡು (ಬೆಳಿಗ್ಗೆ 10.30ಕ್ಕೆ) ತಂಡಗಳು ಗುರುವಾರ ನಡೆಯುವ ಸೆಮಿಫೈನಲ್ ಪಂದ್ಯಗಳಲ್ಲಿ ಪೈಪೋಟಿ ನಡೆಸಲಿವೆ.

ಪ್ರತಿಕ್ರಿಯಿಸಿ (+)