ಶನಿವಾರ, ಮೇ 21, 2022
27 °C

ಪ್ರಣವ್ ಸಂದೇಶ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): `ಹಣಕಾಸು ಸಚಿವನಾಗಿ ಮಂಗಳವಾರ ನನ್ನ ಕೊನೆಯ ಸಂದೇಶ ನೀಡುವೆ~ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ  ತಮ್ಮ ಹುದ್ದೆಗೆ ರಾಜೀನಾಮೆ ನೀಡಲು 24 ಗಂಟೆಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಸೋಮವಾರ ಇಲ್ಲಿ ವರದಿಗಾರರು ಅವರನ್ನು ಸುತ್ತುವರೆದಾಗ ಪ್ರಣವ್ ಮೇಲಿನಂತೆ ಉತ್ತರಿಸಿದರು.

ನಾರ್ಥ್ ಬ್ಲಾಕ್‌ನಲ್ಲಿರುವ ಪ್ರಣವ್ ಅವರ ಕಚೇರಿ ಹೊರಗೆ ಸದಾ ದೇಶದ ಆರ್ಥಿಕ ವಿದ್ಯಮಾನಗಳ ಕುರಿತು ಪ್ರತಿಕ್ರಿಯೆ ಪಡೆಯಲು ನಿಲ್ಲುತ್ತಿದ್ದ ಸುದ್ದಿಗಾರರನ್ನು ಅವರು ಯಾವತ್ತೂ ನಿರಾಶೆ ಗೊಳಿಸುತ್ತಿರಲಿಲ್ಲ. ಆದರೆ, ಸೋಮವಾರ ಬೆಳಿಗ್ಗೆ ಪ್ರತಿಕ್ರಿಯೆಗಾಗಿ ಕಾಯುತ್ತಾ ನಿಂತ ವರದಿಗಾರರು ನಿರಾಶೆ ಅನುಭವಿಸಬೇಕಾಯಿತು.

ಯಾವುದೇ  ಪ್ರಶ್ನೆಗೂ ಉತ್ತರಿಸದ ಪ್ರಣವ್, ಹಣಕಾಸು ಸಚಿವನಾಗಿ ನಾಳೆ ನನ್ನ ಕೊನೆಯ ಸಂದೇಶ ನೀಡುವೆ ಎಂದಷ್ಟೇ ಹೇಳಿ ಹೊರಟುಹೋದರು.

ಕಾಂಗ್ರೆಸ್ ಕಾರ್ಯಕಾರಿಣಿ(ಸಿಡಬ್ಲ್ಯುಸಿ)ಯ ವಿಶೇಷ ಸಭೆ ಮುಗಿಸಿಕೊಂಡು ಮಧ್ಯಾಹ್ನ ಮತ್ತೆ ಕಚೇರಿಗೆ ಅವರು ಮರಳಿದಾಗಲೂ ವರದಿಗಾರರು ಅವರನ್ನು ಆರ್ಥಿಕ  ಸುಧಾರಣಾ ಕ್ರಮಗಳ ಕುರಿತು  ಪ್ರಶ್ನಿಸಿದರು. `ಪ್ರಕಟಣೆ ಇನ್ನೇನು ಹೊರಬೀಳಲಿದೆ~ ಎಂದಷ್ಟೇ ಚುಟುಕಾಗಿ ಪ್ರತಿಕ್ರಿಯಿಸಿದರು. ಆದರೆ, ಸಿಡಬ್ಲ್ಯುಸಿ ಜತೆಗಿನ 32 ವರ್ಷಗಳ ಬಾಂಧವ್ಯವನ್ನು ಪ್ರೀತಿಯಿಂದ ಸ್ಮರಿಸಿದರು. `ಈಗಷ್ಟೇ ಬೀಳ್ಕೊಡುಗೆ ಮುಗಿಸಿಕೊಂಡು ಬಂದೆ~ ಎಂದು ಒಳನಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.