ಹಳ್ಳ ದಿಣ್ಣೆಗಳಿಹವು ರಸ್ತೆಯೊಳಗಲ್ಲಲ್ಲಿ /
ಮೇಲೆ ಹಾಯುವ ಹೊತ್ತು ವೇಗವನು ಇಳಿಸಿ//
ಮೆಲ್ಲನೆಯೆ ಹತ್ತಿಳಿದು ಗೊಣಗದೆಯೆ ಸಾಗಿರಲು/
ಉಲ್ಲಾಸ ಚಲನೆಯಲಿ –ನವ್ಯಜೀವಿ//

ಬೆಳಿಗ್ಗೆ ಆರು ಗಂಟೆಗೆಲ್ಲ ಬಾಸಿನಿಂದ ಕರೆ ಬಂದಿದೆ. ಎಂಟು ಗಂಟೆಗೆ ತುರ್ತು ಮೀಟಿಂಗ್ ಕರೆಯಲಾಗಿದೆ. ಕಂಪೆ ನಿಯ ಗ್ರಾಹಕನೊಬ್ಬನ ನೆಟ್ವರ್ಕಿನಲ್ಲಿ ತೊಂದರೆಯಾಗಿ ಆತ ನಿಮ್ಮ ಕಂಪೆನಿ ಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಅವನಿಗೆ ತಂತ್ರಾಂಶವನ್ನು ಒದಗಿಸಿದ ನಿಮ್ಮ ಹಾಗೂ ನಿಮ್ಮ ತಂಡದ ಬಗ್ಗೆ ಈಗಾಗಲೇ ಬಾಸ್ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಇನ್ನು ಮೀಟಿಂಗು ಹೇಗಿರಬಹುದೆಂದು ಹೇಳುವ ಅಗತ್ಯವೇ ಇಲ್ಲ. ಇದೇ ಗುಂಗಿನಲ್ಲಿ ಎದ್ದ ನೀವು ಗೊಣಗುತ್ತಿದ್ದೀರಿ – ‘ಈ ಕೆಲಸವೇ ಇಷ್ಟು. ಎಷ್ಟು ಏಗಿದರೂ ಏಗುತ್ತಲೇ ಇರ ಬೇಕು. ರಾತ್ರಿ ಹನ್ನೊಂದರವರೆಗೆ ಲ್ಯಾಬಿ ನಲ್ಲಿ ದುಡಿದು ಬಂದಿದ್ದೇನೆ. ಆ ಪರಿವೆಯೇ ಇಲ್ಲ. ಈಗ ಮತ್ತೆ ಎಂಟಕ್ಕೆಲ್ಲ ಆಫೀಸಿನಲ್ಲಿರಬೇಕಂತೆ. ಈ ಬಾಸೂ ಸಾಕು. ಈ ಗ್ರಾಹಕರೂ ಸಾಕು’!

ನಿಮ್ಮ ಗೊಣಗಾಟಕ್ಕೆ ನಿದ್ದೆಯಿಂದ ಎದ್ದು ಮಡದಿ ನಿಮ್ಮೊಡನೆ ವಿಷಯ ವಿಚಾರಿಸಿದ್ದೇ ಅವಳ ದೊಡ್ಡ ತಪ್ಪಾಗಿ ಹೋಗಿದೆ. ನಿಮ್ಮ ಕಂಠ ಆಗಸಕ್ಕೇರಿದೆ. ನಿಮ್ಮ ಕಚೇರಿಯ, ಬಾಸಿನ, ಗ್ರಾಹಕರ ಹಾಗೂ ಒಟ್ಟಾರೆ ಜಗತ್ತಿನ ಮೇಲಿರುವ ನಿಮ್ಮ ಆ ಗಳಿಗೆಯ ಕೋಪವೆಲ್ಲ ಕೇಂದ್ರೀ ಕೃತಗೊಂಡು, ಏನೂ ಅರಿಯದ ನಿಮ್ಮ ಮಡದಿಯನ್ನು ಥಳಿಸುತ್ತಿದೆ. ಆಕೆಯೋ ಈಗ ನಿರುತ್ತರಿ! ನಿಮ್ಮ ಕಠೋರವಾದ ಮಾತುಗಳಿಗೆ ಕಿವಿಯಾಗಿ ನೊಂದಿದ್ದಾಳೆ. ‘ಹಾಳಾಗಿ ಹೋಗಿ’ ಎಂದು ಮನಸ್ಸಿನ ಲ್ಲಿಯೇ ಶಪಿಸುತ್ತ ಮತ್ತೆ ಹಾಸಿಗೆಗೆ ಉರುಳಿದ್ದಾಳೆ, ನಿದ್ದೆಗೆ ತೆರಳಿದ್ದಾಳೆ.

ಅಂದು ಮನೆಯಿಂದ ಕಚೇರಿಯವರೆ ಗಿನ ರಸ್ತೆಯಲ್ಲಿ ನೀವು ಪ್ರತಿಯೊಂದನ್ನೂ ಜರಿಯುತ್ತಲೇ ಸಾಗಿದ್ದೀರಿ. ಕೆಂಪಾದ ಸಿಗ್ನಲ್ ನಿಮ್ಮನ್ನು ಮತ್ತಷ್ಟು ಕೆಂಪಾಗಿಸಿದೆ. ಕಾರಿನ ಗಾಜಿಗೆ ಆತುಕೊಂಡು ಚಪ್ಪಾಳೆ ತಟ್ಟುತ್ತ ಹಣ ಕೇಳುವ ಮಂಗಳಮುಖಿಯ ರನ್ನು ಎಂದಿನಂತೆ ನಿರ್ಲಕ್ಷಿಸದೆ, ಇಂದೇಕೋ ಕಾರಿನ ಗಾಜನ್ನು ಕೆಳಗಿಳಿಸಿ ಅವರೊಡನೆ ಜಗಳವಾಡಿದ್ದೀರಿ. ಇನ್ನಾ ರದೋ ಕಾರನ್ನು ತಾಗಿಸಿಕೊಂಡು ಸಂದಿ ಯಲ್ಲಿ ನುಸುಳುತ್ತಿರುವ ಮೋಟಾರು ಬೈಕಿನ ಸವಾರನನ್ನು ಹಾಗೂ ಅವನ ಹಿಂದೆ ಕುಳಿತ ಆ ತರುಣಿಯನ್ನು ಶಪಿಸಿದ್ದೀರಿ. ಕಚೇರಿ ಸೇರುವ ಹೊತ್ತಿಗೆ ಒಟ್ಟಿನಲ್ಲಿ ನೀವು ನೀವಾಗಿರದೆ ಮತ್ತಾರೋ ಆಗಿಬಿಟ್ಟಿದ್ದೀರಿ!

ಈಗ ಯೋಚಿಸಿ ನೋಡಿ. ಮೇಲಿನ ಯಾವ ಯಾವ ಘಟನೆಗಳಲ್ಲಿ ನಿಮ್ಮ ಪಾಲಿದೆ? ನಿಮ್ಮ ಕೈವಾಡವಿದೆ? ಯಾವ ಘಟನೆಗಳು ನಿಮ್ಮದೇ ನೇರ ಸೃಷ್ಟಿ? ಬೆಳಿಗ್ಗೆ ಆರು ಗಂಟೆಗೆ ಬಂದ ಬಾಸಿನ ಕರೆಯನ್ನು ನೀವಾಗಿಯೇ ಏನೂ ತರಿಸಿಕೊಳ್ಳಲಿಲ್ಲ. ನೆಟ್ವರ್ಕಿನಲ್ಲಿ ನಿಮ್ಮ ಉತ್ಪನ್ನದಿಂದ ತೊಂದರೆಯಾದಾಗ ಅದ್ಯಾವ ಗ್ರಾಹಕ ನಿಮ್ಮ ಕಚೇರಿಯೊಡನೆ ಪ್ರೀತಿಯಿಂದ ವರ್ತಿಸಿಯಾನು? ಏನೋ ಬೇಗ ಎದ್ದರಲ್ಲ, ಕಾಫಿ ಮಾಡಿ ವಿಷಯ ವಿಚಾರಿಸೋಣ ಎಂದು ಪ್ರೀತಿಯಿಂದ ಬಂದ ಮಡದಿಯ ತಪ್ಪಾದರೂ ಏನು? ಅವಳನ್ನು ಬೈದದ್ದು ಇಮಾಮ ಸಾಬಿಯಾದರೆ ನಿಮ್ಮ ಬಾಸಿ ನಿಂದ ಬಂದ ಕರೆ ಗೋಕುಲಾಷ್ಟಮಿ ಆಗ ಲಿಲ್ಲವೆ? ಸಿಗ್ನಲ್ಲಿನ ಕೆಂಪು ನಿಮ್ಮ ಮನಸ್ಥಿತಿ ಯನ್ನು ಅರಿತು ಹಸಿರಾಗಿಯೇ ಇದ್ದು ಬಿಡಬೇಕಿತ್ತೇನು? ದೈವವಶಾತ್ ತಂತ್ರ ಜ್ಞಾನ ಇನ್ನೂ ಅಷ್ಟರ ಮಟ್ಟಿಗೆ ಬೆಳೆದಿಲ್ಲ. ಹಾಗೊಮ್ಮೆ ಮುಂದಿರುವ ರಸ್ತೆ ಹೋಕನ ಮನಸ್ಸನ್ನು ಅರಿತುಕೊಂಡು ಅದರಂತೆ ಬಣ್ಣ ಬದಲಿಸುವ ತಂತ್ರಾಂಶ ನಿಯಂತ್ರಕ ಸಿಗ್ನಲ್ಲುಗಳು ಬಂದು ಬಿಟ್ಟರೆ, ದೇವರೆಗತಿ!

ಇನ್ನು ಆ ಪಾಪದ ಮಂಗಳಮುಖಿ ಯರು. ಅವರು ಬಳಿ ಬಂದಾಗ ಅವರತ್ತ ನೋಡದೆ ಸುಮ್ಮನಿದ್ದು ಬಿಟ್ಟರೆ ಅವರೇ ಸುಮ್ಮನಾಗಿ ಹೋಗಿ ಬಿಡುತ್ತಾರೆ. ಅವರ ಲ್ಲಾರೋ ಒಬ್ಬಿಬ್ಬರು ಮಾತ್ರ ಭುಜ ಜಗ್ಗಿಸಿ ಕೆನ್ನೆ ಸವರಬಹುದಷ್ಟೆ. ಆದರೆ ಕಾರಿನಲ್ಲಿ ಕುಳಿತು ಗಾಜನ್ನು ಮುಚ್ಚಿ ತಣ್ಣನೆಯ ಗಾಳಿಯಲ್ಲಿ ಉಸಿರಾಡುತ್ತಿದ್ದ ನಿಮಗೆ ಅದರ ಭಯವೂ ಇರಲಿಲ್ಲ. ಎಲ್ಲೋ ದೂರದಲ್ಲಿ ಕಾರುಗಳೆರಡರ ನಡುವೆ ಇದ್ದ ಸಣ್ಣ ಜಾಗದಲ್ಲೇ ಇಡಿಯ ಬೈಕನ್ನು ಹಾಗೊಮ್ಮೆ ಈಗೊಮ್ಮೆ ವಾಲಿಸಿಕೊಂಡು ಸಾಗಿದ ಆ ಬಡಪಾಯಿ ಸವಾರನೇಕಾ ದರೂ ನಿಮ್ಮ ಗೊಣಗಿದ ಕಾರಣವಾದ ಎಂಬುದು ಅರ್ಥವೇ ಆಗದ ವಿಚಾರ!

ಈ ಯಾವ ಘಟನೆಗಳೂ ನಿಮ್ಮಿಂದ ನೆರವೇರಿದ್ದಲ್ಲ. ಈ ಯಾವುದನ್ನೂ ನೀವು ತಪ್ಪಿಸಲಿಕ್ಕೂ ಸಾಧ್ಯವಿರಲಿಲ್ಲ. ಆದರೂ ಇವುಗಳಿಂದ ನಿಮ್ಮ ಕೋಪವಂತೂ ಮುಗಿಲು ಮುಟ್ಟಿದ್ದು ನಿಜ. ನಿಮಗೆ ನಿಮ್ಮ ಬಗ್ಗೆಯೇ ಅಸಹನೆ ಉಂಟಾದದ್ದು ನಿಜ. ನಿಮ್ಮ ಬಗ್ಗೆ ಭರವಸೆ ಇಟ್ಟಿದ್ದ ಬಾಸನ್ನು ಜರಿದಿರಿ. ನಿಮ್ಮ ಬಗ್ಗೆ ಪ್ರೀತಿ ತೋರಿದ ಮಡದಿಯನ್ನೇ ಆ ಕ್ಷಣಕ್ಕೆ ವಿನಾಕಾರಣ ನೋಯಿಸಿದ್ದೀರಿ. ನಿಮ್ಮ ಸಂಬಳಕ್ಕೆ ಕಾರಣ ವಾದ ನಿಮ್ಮ ಗ್ರಾಹಕರನ್ನೇ ದೂರಿದ್ದೀರಿ. ದಾರಿಯಲ್ಲಿ ಎಲ್ಲರನ್ನೂ ಶಪಿಸಿದ್ದೀರಿ. ಒಟ್ಟಿನಲ್ಲಿ ನಿಮ್ಮ ಮನಸ್ಸನ್ನು ನೀವೇ ಸ್ವತಃ ಕೆಸರಿನಲ್ಲಿ ದೂಡಿ ರಾಡಿಯಾಗಿಸಿದ್ದೀರಿ. ಇವೆಲ್ಲಾ ಬೇಕಿತ್ತಾ? ಎಂಬ ಪ್ರಶ್ನೆ ಈಗಲೂ ನಿಮ್ಮನ್ನು ಕಾಡದಿದ್ದರೆ ಅದು ಖಂಡಿತವಾ ಗಿಯೂ ಶುಭ ಸೂಚಕವಲ್ಲ ಎಂದಷ್ಟೇ ಹೇಳಬಲ್ಲೆ!

ಕಚೇರಿಯಲ್ಲಿನ ನಿಮ್ಮ ದಿನನಿತ್ಯದ ಕೆಲಸ ಕಾರ್ಯಗಳೆಲ್ಲ ಬಹುತೇಕ ಮೇಲಿನ ದೃಷ್ಟಾಂತದಂತೆಯೇ ಎಂದು ಹೇಳಿದರೆ, ಅದು ಪೂರ್ಣ ಸತ್ಯವಲ್ಲದಿದ್ದರೂ ಅದು ಅಷ್ಟೇನೂ ತಪ್ಪು ಅಲ್ಲ. ಹಾಗಾದರೆ ಏನು ಮಾಡಬಹುದಿತ್ತು? ಏನು ಮಾಡಬೇಕು? ಇದು ಮುಖ್ಯ. ಯಾವ ಕ್ರಿಯೆ ನಿಮ್ಮಿಂದ ಜನಿಸಿಲ್ಲವೋ ಹಾಗೂ ಯಾವ ಕ್ರಿಯೆ ಜರುಗುವಿಕೆಯಲ್ಲಿ ನಿಮ್ಮ ಯಾವುದೇ ಹಿಡಿತ ಇಲ್ಲವೋ ಅಂತಹ ಕ್ರಿಯೆಗೆ ಉತ್ತರ ವಾಗಿ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ ಎಂಬುದೇ ಇಲ್ಲಿ ಮುಖ್ಯ. ನಮ್ಮ ಹಿಡಿತ ದಲ್ಲಿಲ್ಲದ ಯಾವುದೇ ಕ್ರಿಯೆಗೂ ಕೂಡ ನಮ್ಮ ಪ್ರತಿಕ್ರಿಯೆಯಂತೂ ನಮ್ಮ ಹಿಡಿತದ ಲ್ಲಿದೆ ಎಂಬುದೇ ಸತ್ಯ. ಇದನ್ನರಿತು ಬಿಟ್ಟರೆ ಬಾಳು ಅಷ್ಟರಮಟ್ಟಿಗೆ ಸರಾಗ.

ನಮ್ಮ ವೇದಾಂತ ಸಾರುವ ಕಾರ್ಯ ಕಾರಣದಂತೆಯೇ ಕ್ರಿಯೆ– ಪ್ರತಿಕ್ರಿ ಯೆಯೂ ಹೌದು. ಬೋರ್ಡ್ ರೂಮಿನ ಸುತ್ತಮುತ್ತಲಿನ ನಿಮ್ಮ ಎಲ್ಲ ಪ್ರತಿಕ್ರಿಯೆ ಗಳಿಗೂ ಮೂಲದಲ್ಲಿ ಕ್ರಿಯೆ ಒಂದುಂಟು. ಬಹುತೇಕ ವೇಳೆಗಳಲ್ಲಿ ಆ ಕ್ರಿಯೆಯ ಸ್ವರೂಪ ಒಂದೇ ತರ. ಅದಕ್ಕೆ ನಿರ್ದಿಷ್ಟ ವಾದ ಆಗಮನವಿದೆ. ಅದು ಒಂದು ಪೂರ್ವನಿಯೋಜಿತ ಸ್ತರದಲ್ಲಿ ಚರ್ಚೆ ಗೊಂಡು ಗುರಿಯೊಂದರ ಸಾಧನೆಯ ಪಥದಲ್ಲಿ ಚಲಿಸುತ್ತದೆ. ಆ ದಾರಿ ಹೆದ್ದಾರಿ ಯಾಗಿರಬಹುದು ಅಥವಾ ಕೆಲವೆಡೆ ಅನಿರೀಕ್ಷಿತವಾಗಿ ಕವಲುಗಳೊಡೆದು ಮತ್ತೆಲ್ಲೋ ಒಂದಾಗಬಹುದು. ಇಲ್ಲಿನ ಯಾವುದೇ ಕ್ರಿಯೆಯೂ ವ್ಯಕ್ತಿಯೊಬ್ಬನದೇ ಸಾಧನೆಯಲ್ಲ. ಅದು ಸಮಮನಸ್ಕ ಗುಂಪೊಂದರ ಪರಾಕಾಷ್ಠೆ.

ಸೋಲು ಅಥವಾ ಗೆಲುವುಗಳೆಂಬ ಲಾಭ – ನಷ್ಟ ಗಳ ಕಡೆಯ ಲೆಕ್ಕಾಚಾರದಲ್ಲಿ ಅದರ ಪೂರ್ಣಾಹುತಿ. ಈ ಯಾವುದೇ ಮಜಲು ಗಳಲ್ಲೂ ನಮ್ಮ ಪ್ರಕ್ರಿಯೆ ಮಿಕ್ಕೆಲ್ಲರ ಪ್ರತಿಕ್ರಿಯೆಗೆ ಹೊಂದಿಕೊಂಡು ಮುಂದಿ ರುವ ಕ್ರಿಯೆಗೆ ಪೂರಕವಾದ ಹಾದಿ ಕ್ರಮಿಸುವುದೊಂದು ಆನಂದದ ಅನುಭವ ವಾದೀತು. ಇಲ್ಲವಾದಲ್ಲಿ ನಮ್ಮ ಪ್ರತಿಕ್ರಿಯೆ ಗಳು ಮತ್ತಷ್ಟು ದಾರಿ ತಪ್ಪಿಸಬಲ್ಲ ಕ್ರಿಯೆ ಗಳಾಗಿ ಹಾಗೂ ಬೇಡದ ಇನ್ನಿತರ ಪ್ರತಿ ಕ್ರಿಯೆಗಳಿಗೆ ಇಂಧನವಾಗುತ್ತ ದಾರಿಯನ್ನು ಕ್ರಮಿಸುವುದು ಅತೀವ ದುಃಖ ಹಾಗೂ ಕಳವಳದ ಭವವಾದೀತು!

ಈ ವಿಚಾರವನ್ನು ಸ್ವಲ್ಪ ವಿಭಿನ್ನವಾಗಿ ಖ್ಯಾತ ಮ್ಯಾನೇಜ್ಮೆಂಟ್ ತಜ್ಞನಾದ ಸ್ಟೀವನ್ ಕವಿ 90/10ರ ಸಿದ್ಧಾಂತವೆಂದು ಕರೆದಿದ್ದಾನೆ. ಇದರ ಅನುಸಾರ, ನಮ್ಮೆ ಲ್ಲರ ಜೀವನದಲ್ಲಿ ಜರುಗುವ ಯಾವುದೇ ಘಟನೆ ಶೇಕಡಾ ಹತ್ತರಷ್ಟು ಪ್ರಾಮುಖ್ಯ ವಾದರೆ ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿ ಸುತ್ತೇವೆ ಎಂಬುದು ಇನ್ನುಳಿದ ಶೇಕಡಾ ತೊಂಬತ್ತರಷ್ಟು ಮಹತ್ವದ್ದು. ಅಂದರೆ ನಮ್ಮ ಜೀವನದ ಯಾವುದೇ ಸನ್ನಿವೇಶ ವನ್ನು ನಾವು ವಿಶ್ಲೇಷಣೆ ಮಾಡಿದರೆ, ಅದರಲ್ಲಿ ನಮ್ಮ ಹಿಡಿತದಲ್ಲಿ ಇರದ ಅಂಶ ಕೇವಲ ಶೇಕಡಾ ಹತ್ತರಷ್ಟಾದರೆ, ನಮ್ಮ ಹಿಡಿತದಲ್ಲಿರುವ ನಿಮ್ಮದೇ ಪ್ರತಿಕ್ರಿಯೆಯ ವತಿಯಿಂದಾಗಿ ಜರುಗಿಸಬಹುದಾದ ಸನ್ನಿ ವೇಶಗಳ ಅಂಶ ಶೇಕಡಾ ತೊಂಬತ್ತು. ಇದನ್ನರಿಯದೆ ನಮ್ಮದೇ ನಿಯಂತ್ರಣೆ ಯಲ್ಲಿರುವ ಶೇಕಡಾ ತೊಂಬತ್ತರಷ್ಟು ಪ್ರಯೋಜನಕಾರಿ ಅಂಶವನ್ನು ಮತ್ತೊಬ್ಬ ರಿಗೆ ಒಪ್ಪಿಸಿ ಬಿಡುತ್ತೇವೆ.

ಲೇಖನದ ಮೊದಲಲ್ಲೇ ಉಲ್ಲೇಖನ ಗೊಂಡಿರುವ ಉದಾಹರಣೆಯಲ್ಲಿ ಯಾವುದೇ ಒಂದು ಘಟನೆಯನ್ನು ತುಲನೆ ಮಾಡಿ. ಬೆಳಿಗ್ಗೆ ಆರಕ್ಕೆ ಬಂದ ಬಾಸಿನ ಕರೆ. ಈ ಕರೆಯ ಹಿನ್ನೆಲೆ ಹಾಗೂ ಅದರ ಆಗಮನ – ಈ ಎರಡೂ ನಿಮ್ಮದಲ್ಲ. ಆ ಕರೆಯನ್ನು ಸ್ವೀಕರಿಸಿ ಕಚೇರಿಯ ಎಂಟರ ಮೀಟಿಂಗಿಗೆ ಸಕಾರಾತ್ಮಕವಾಗಿ ಸಜ್ಜಾಗ ಬೇಕಾದದ್ದು ನಿಮಗೆ ಅನಿವಾರ್ಯ ಹಾಗೂ ಅವಶ್ಯಕ. ಅದನ್ನು ತಪ್ಪಿಸಲಾಗು ವುದಿಲ್ಲ. ಮಾಡಿಯೇ ತೀರಬೇಕು ಇಲ್ಲ ಕೆಲಸ ಬಿಡಬೇಕು!
ಆದರೆ ಇದನ್ನರಿಯದೆ ಅದಕ್ಕೆ ಪ್ರತಿಕ್ರಿ ಯಿಸುತ್ತ ನೀವು ನಿಮ್ಮ ಮಡದಿಯನ್ನು ಹಾಗೂ ನಿಮ್ಮದೇ ಮನಸ್ಸನ್ನು ಅದೆಷ್ಟು ಹಿಂಸಿಸಿದ್ದೀರಿ ನೋಡಿ.

ಬಾಸಿನ ಕರೆ ಹಾಗೂ ಅದಕ್ಕೆ ಹಿನ್ನೆಲೆಯಾದ ಗ್ರಾಹಕನ ನಿಲುವು ಈ ಇಡಿಯ ಸನ್ನಿವೇಶದಲ್ಲಿ ಶೇಕಡಾ ಹತ್ತರಷ್ಟಾದರೆ ಅದರಿಂದ ಸರದಿ ಯಲ್ಲಿ ಏರ್ಪಡುವ ಮಿಕ್ಕೆಲ್ಲ ಘಟನಾವಳಿ ಗಳಿಗೂ ನೀವೇ ಜವಾಬ್ದಾರರು. ನಿಮ್ಮ ಪ್ರತಿಕ್ರಿಯೆಯೇ ಅದಕ್ಕೆ ಮೂಲ ಆಹಾರ. ನಮ್ಮ ನಿತ್ಯ ಜೀವನದಲ್ಲಿ ಹಾಗೂ ಬೋರ್ಡ್ ರೂಮಿನ ಸುತ್ತಮುತ್ತ ಇದೇ ನಮ್ಮೆಲ್ಲರ ನಿಜ ಸ್ವರೂಪ.

ನಿನ್ನೆ ನಿಮ್ಮ ಕಚೇರಿಯಲ್ಲಿ ಜರುಗಿದ ಘಟನಾವಳಿಗಳನ್ನು ಒಮ್ಮೆ ಅವಲೋಕಿಸಿ ಅವುಗಳ ಪಾತ್ರಧಾರಣೆಯಲ್ಲಿ ನಿಮ್ಮ ಪ್ರತಿ ಕ್ರಿಯೆ ಏನಿತ್ತು? ಆ ಪ್ರತಿಕ್ರಿಯೆಗಳಿಂದ ಸಂಭ ವಿಸಿದ (ಅ)ಹಿತಕರ ಘಟನಾವಳಿಗಳೇನು? ನಿಮ್ಮ ಪ್ರತಿಕ್ರಿಯೆ ಸಕಾರಾತ್ಮಕವಾಗಿ ನಿನ್ನೆ ನೀವು ನಡೆದುಕೊಂಡ ರೀತಿಗಿಂತ ವಿಭಿನ್ನ ವಾಗಿದ್ದಲ್ಲಿ ಸನ್ನಿವೇಶ ಹೇಗಿರುತ್ತಿತ್ತು? ಈ ಎಲ್ಲ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಿ ನೋಡಿ. ನಿಮಗೊಂದು ನವ್ಯ ಸತ್ಯದ ಸಾಕ್ಷಾತ್ಕಾರವಾಗುತ್ತದೆ.

ನಿಮ್ಮ ನ್ನೊಳಗೊಂಡ ಎಲ್ಲ ಹಾಗೂ ಮಿಕ್ಕೆಲ್ಲರ ಕ್ರಿಯೆಗಳನ್ನೂ ನಿಯಂತ್ರಿಸಬಲ್ಲ ನಿಮ್ಮದೇ ಪ್ರತಿಕ್ರಿಯೆಯ ಇನ್ನೊಂದು ಮುಖ ಸ್ಪಷ್ಟ ವಾಗುತ್ತದೆ. ಮುಂದೆ ಮೇಜಿನ ಮೇಲೆ ಇರುವ ಗ್ಲಾಸಿನಲ್ಲಿ ಅರ್ಧದಷ್ಟು ಕೆಳಕ್ಕೆ ಚೆಲ್ಲಿ ಹೋದ ನೀರು ಕಂಡೂ ಕಾಣದಂತೆ ಕಾಡದೆ ಗ್ಲಾಸಿನಲ್ಲಿ ಇನ್ನೂ ಉಳಿದಿರುವ ಇನ್ನರ್ಧ ಜೀವಜಲವೇ ಕಣ್ಣುಗಳನ್ನಾ ಶ್ರಯಿಸಿ ಮನಸ್ಸಿಗೆ ಹಾಯ್ ಎನಿಸುತ್ತದೆ. ದಿನವೆಲ್ಲ ನಾವು ಹಾಗೇ ಇದ್ದು ಬಿಡು ವುದಾದರೆ, ರಾತ್ರಿ ದಿಂಬಿಗೆ ತಲೆ ಇಟ್ಟೊ ಡನೆ ನಿದ್ದೆ ಗ್ಯಾರಂಟಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.