ಕಲ್ಲುಗುಡ್ಡೆ (ನರಸಿಂಹರಾಜಪುರ):  ತಾಲ್ಲೂಕಿನ ಮೆಣಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಗುಡ್ಡೆ ಗ್ರಾಮದ ಶಾಲೆಯಲ್ಲಿ ಗುರುವಾರ ನಡೆದ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ಒತ್ತುವರಿ ಸಮಸ್ಯೆಯ ವಿಚಾರ ಚರ್ಚೆಗೆ ಗ್ರಾಸವಾಯಿತು.

ಸಭೆಯಲ್ಲಿ ಅರಣ್ಯ ಇಲಾಖೆಯ ಸರದಿ ಗ್ರಾಮಸ್ಥರು ಒತ್ತುವರಿದಾರರಿಗೆ ನೋಟಿಸ್ ನೀಡಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ಕೇಳಿದರು. ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿ ಸರ್ಕಾರದ ಆದೇಶದಂತೆ ರಾಜ್ಯಅರಣ್ಯ, ಮೀಸಲು ಅರಣ್ಯ ಪ್ರದೇಶದಲ್ಲಿ 10ಎಕರೆ ಒತ್ತುವರಿ ಮಾಡಿರುವವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ ಈ ಬಗ್ಗೆ ಹೆಚ್ಚಿನ ಚರ್ಚೆ ತಾರಕಕ್ಕೇರಿದಾಗ ಈ ವಿಷಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವುದಿಲ್ಲ. ವಿಷಯ ಆಧಾರಿತ ಚರ್ಚೆ ಮಾಡಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಾಥ್ ಚರ್ಚೆಗೆ ಅಂತ್ಯಹಾಡಿದರು.

ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಗ್ಯಾಸ್ ಒಲೆ, ಅಸ್ತ್ರ ಒಲೆ ನೀಡುವ ಯೋಜನೆ ಇದೆ. ಸ್ವಂತ ಹಿಡುವಳಿದಾರರಿಗೆ ಗಿಡ ವಿತರಿಸುವ ಕಾರ್ಯಕ್ರಮವಿದೆ. ಈ ಬಾರಿ ಅರ್ಜಿ ಸಲ್ಲಿಸಿದರೆ ಮುಂದಿನ ವರ್ಷ ಗಿಡ ವಿತರಿಸಲಾಗುವುದು. ಪ್ರತಿ ಗಿಡಕ್ಕೆ 1ನೇ ವರ್ಷ ರೂ.10, 2ನೇ ವರ್ಷ ರೂ.15 ಹಾಗೂ 3ನೇ ವರ್ಷ ರೂ.20 ಒಟ್ಟು ರೂ.40 ಸಹಾಯಧನ ನೀಡಲಾಗುತ್ತದೆ ಎಂದು ತಿಳಿಸಿದರು.

ಭತ್ತದ ಬಿತ್ತನೆ ಬೀಜ ಬಂದಿದ್ದು ಖಾತೆ ಹೊಂದಿದವರಿಗೆ ವಿತರಿಸಲಾಗುತ್ತಿದೆ. ಮುಸುಕಿನ ಜೋಳವನ್ನು ವಿತರಿಸಲಾಗುತ್ತಿದೆ. ಸಹಾಯಧನದಲ್ಲಿ ಸುಣ್ಣ ಮತ್ತು ಟಾರ್ಪಲ್ ವಿತರಿಸಲಾಗುತ್ತಿದೆ ಎಂದು ಕೃಷಿ ಅಧಿಕಾರಿ ಶ್ರೀಧರ್ ಮಾಹಿತಿ ನೀಡಿದರು.

ಪರಿಶಿಷ್ಟಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಐಎಎಸ್, ಕೆಎಎಸ್ ಪರೀಕ್ಷೆ ತೆಗೆದುಕೊಂಡರೆ ಅಂತವರಿಗೆ ಸಮಾಜಕಲ್ಯಾಣ ಇಲಾಖೆಯಿಂದ ಉಚಿತ ತರಬೇತಿ ನೀಡುವ ಸೌಲಭ್ಯವಿದೆ ಎಂದರು.

ಬಿಪಿಎಲ್ ಕುಟುಂಬದವರಿಗೆ ಹೃದಯ, ಕಿಡ್ನಿ ಮುಂತಾದ ಕಾಯಿಲೆಗೆ ಸಂಬಂಧಿಸಿದಂತೆ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ, ಶಸ್ತ್ರಚಿಕಿತ್ಸೆ ಅಗತ್ಯವಿದ್ದವರಿಗೆ ಅದನ್ನು ಉಚಿತವಾಗಿ ಮಾಡಿಸುವ ಸೌಲಭ್ಯ ವಾಜಪೇಯಿ ಆರೋಗ್ಯಶ್ರೀ ಯೋಜನೆಯಲ್ಲಿ ಲಭ್ಯವಿದೆ. ಎಲ್ಲ ಕಡೆ ಡೆಂಗೆಜ್ವರ ಕಾಣಿಸಿಕೊಳ್ಳುತ್ತಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು ಅನುಸರಿಸ ಬೇಕಾದ ಮುಂಜಾಗೃತ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.

ಹಿಂದೆ ಪ್ರತಿ ತಿಂಗಳಿಗೊಮ್ಮೆ ದಾದಿಯರು ಗ್ರಾಮಗಳ ಮನೆ, ಮನೆಗೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಅದು ಪ್ರಸ್ತುತ ಜಾರಿಯಲ್ಲಿ ಇದೆಯೇ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ನಿರ್ಮಲ ಅಭಿಯಾನ ಯೋಜನೆಯಡಿ ಮನೆಕಟ್ಟಿಕೊಟ್ಟು ಶೌಚಾಲಯ ನಿರ್ಮಿಸಿಕೊಳ್ಳದಿರುವವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ನೀಡುವ ಸೌಲಭ್ಯ ಲಭ್ಯವಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಮಾಹಿತಿ ನೀಡಿದರು.
ಮೆಣಸೂರು ಗ್ರಾಮಪಂಚಾಯಿತಿ ಅಧ್ಯಕ್ಷ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವನಜಾಕ್ಷಿ, ಸದಸ್ಯರಾದ ರತ್ನೇಶ್, ಡಯಾನಾ, ರವಿಚಂದ್ರ, ನೋಡಲ್ ಅಧಿಕಾರಿ ಬಿ.ಜಿ.ಮಾಳಮ್ಮನವರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಜೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.