ಗಂಗಾವತಿ: ನಗರಸಭೆ ನಿಗದಿ ಪಡಿಸಿದ 35 ಅಡಿಕ್ಕಿಂತಲೂ ಕಡಿಮೆ ಪ್ರಮಾಣ ರಸ್ತೆಯ ಮಧ್ಯ ಭಾಗದಿಂದ ಹಿಂದಕ್ಕೆ ಸರಿದು ನಿಯಮ ಉಲ್ಲಂಘಿಸಿದ `ಫುಡ್ ಬಜಾರ್~ ಪ್ರಕರಣ ಶನಿವಾರ ನಡೆದ ನಗರಸಭಾ ಸದಸ್ಯರ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪವಾಗಿ ಪ್ರತಿಧ್ವನಿಸಿತು.

ನಗರಸಭೆ ವಿಧಿಸಿದ 35ಅಡಿಯ ಬದಲಿಗೆ ಪ್ರಭಾವಿಯೊಬ್ಬರಿಗೆ ಸೇರಿದ `ಫುಡ್ಬಜಾರ~ ಬಹು ವ್ಯಾಪಾರ ಮಳಿಗೆಯ ಮಾಲಿಕ 34ಅಡಿಗೆ ತೆರವು ಸೀಮಿತಗೊಳಿಸಿದ್ದರ ಬಗ್ಗೆ `ಪ್ರಜಾವಾಣಿ~ ಶನಿವಾರ `ಎಲ್ಲರಿಗೊಂದು ಫುಡ್ ಬಜಾರಿಗೊಂದು ಕಾಯ್ದೆ.?~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.

ಸಭೆ ಆರಂಭವಾಗುತ್ತಿದ್ದಂತೆಯೆ ನಗರಸಭೆಯ ವಿರೋಧ ಪಕ್ಷದ ನಾಯಕ ಮನೋಹರ ಹೇರೂರು, `ಫುಡ್ಬಜಾರ~ ಪ್ರಕರಣದ ವಿಷಯ ಪ್ರಸ್ತಾಪಿಸಿದರು. ವಾಸ್ತವವಾಗಿ ಎಲ್ಲ ವರ್ತಕರಿಗೆ ರಸ್ತೆಯಿಂದ ಎಷ್ಟುಅಡಿ ಹಿಂದಕ್ಕೆ ಸರಿಯಲು ಸೂಚಿಸಿದ್ದೀರಿ ತಿಳಿಸಿ ಎಂದು ಪೌರಾಯುಕ್ತರನ್ನು ಒತ್ತಾಯಿಸಿದರು.

ರಸ್ತೆ ವಿಸ್ತರಣೆಯಲ್ಲಿ ನಡೆಯುತ್ತಿರುವ ಪಕ್ಷಪಾತ ಧೋರಣೆ, ನಗರಸಭಾ ಸಿಬ್ಬಂದಿ ಅನುಸರಿಸುತ್ತಿರುವ ಸ್ವಜನ ಪಾತ, ಮೇಲಧಿಕಾರಿಗಳ ನಿರ್ಲಕ್ಷ್ಯ ಜನ ಸಾಮಾನ್ಯರಿಗೆ ಗೊತ್ತಾಗುವಂತಾಗಿದೆ. ಈ ಬಗೆಗಿನ `ಪ್ರಜಾವಾಣಿ~ ವರದಿ ನೋಡಿದ್ದೀರಾ ಎಂದರು.

ಮನೋಹರ ಹೇರೂರು ಅವರ ಪ್ರಶ್ನೆಗೆ ಧ್ವನಿಗೂಡಿಸಿದ ಜೆಡಿಎಸ್ ಸದಸ್ಯ ಕಾಮದೊಡ್ಡಿ ದೇವಪ್ಪ, ರಸ್ತೆ ವಿಸ್ತರಣೆಯಲ್ಲಿ ಗೋಲ್ಮಾಲ್ ನಡೆಯುತ್ತಿರುವ ಬಗ್ಗೆ ಈ ಹಿಂದೆಯೆ ವಾಸನೆ ಬಂದಿತ್ತು. ಪತ್ರಿಕೆಯಲ್ಲಿ ಬಂದ ವರದಿ ಈಗ ಆ ಎಲ್ಲವನ್ನೂ ಬಹಿರಂಗಗೊಳಿಸಿದೆ ಎಂದರು.

40 ಅಡಿಗೆ ಒಡೆಸಿ: ಆಡಳಿತ ಪಕ್ಷದ ಸದಸ್ಯ ಶಾಮಿದ ಮನಿಯಾರ ಮಾತನಾಡಿ, ಮಾರುಕಟ್ಟೆಯಲ್ಲಿರುವ ಏಕೈಕ ಅಲ್ಪಸಂಖ್ಯಾತ ವ್ಯಾಪಾರಿಯ ಕಟ್ಟಡದ ಮೇಲೆ ವಿಪಕ್ಷದವರ ಕಣ್ಣು ಬಿದ್ದಿದೆ. ನೀವೇ ಮುಂದು ನಿಂತು 35 ಅಲ್ಲ, 40-45 ಅಡಿ ಕಟ್ಟಡ ತೆರವು ಮಾಡಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದೆ ನಗರಸಭೆಯಲ್ಲಿ ಚರ್ಚಿಸಿ 40 ಅಡಿ ತೆರವಿಗೆ ಠರಾವು ಪಾಸು ಮಾಡಲಾಗಿತ್ತು. ಆದರೆ ಜಿಲ್ಲಾಧಿಕಾರಿ, ಸಂಸದ, ಶಾಸಕರೆ ಮುಂದೆ ನಿಂತು 40 ಅಡಿಯ ಬದಲಿಗೆ 35 ಅಡಿಗೆ ನಿಗದಿ ಮಾಡಿದರು. ಈಗಲೂ ಆಡಳಿತರೂಢರಿಗೆ ಅವಕಾಶವಿದೆ. 35ರ ಬದಲಿಗೆ 40ಕ್ಕೇ ಏರಿಸಿ ಎಂದರು.

ಜಿಲ್ಲಾಧಿಕಾರಿ ವಿನಾಯ್ತಿ: ಈ ಬಗ್ಗೆ ಸಭೆಗೆ ಸ್ಪಷ್ಟನೆ ನೀಡಿದ ಪೌರಾಯುಕ್ತ ನಿಂಗಣ್ಣ ಎಚ್. ಕುಮ್ಮಣ್ಣನವರ್, ನಗರಸಭೆ 40 ಅಡಿ ನಿಗದಿ ಮಾಡಿತ್ತು. ಆದರೆ ವರ್ತಕ ಮತ್ತು ಜಿಲ್ಲಾಧಿಕಾರಿ ಮಧ್ಯೆ ನಡೆದ ಸಂಧಾನ ಸಭೆಯ ಬಳಿಕ 35 ಅಡಿಗೆ ವಿಸ್ತರಣೆ ಕಾರ್ಯ ಮಿತಿಗೊಳಿಸಲಾಯಿತು.

ಹಾಲಿ ಚಾಲ್ತಿಯಲ್ಲಿರುವ 35 ಅಡಿಯ ಆಚೀಚೆ 4ರಿಂದ 8 ಇಂಚುಗಳ ವ್ಯಾಪ್ತಿಯಲ್ಲಿ ಕಟ್ಟಡದ ಮುಖ್ಯ ಪಿಲ್ಲರ್ ಬಂದಲ್ಲಿ ತೆರವು ಮಾಡದಂತೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ ಎಂದು ಪೌರಾಯುಕ್ತರು ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸದಸ್ಯರು, ಪೌರಾಯುಕ್ತರ ಹೇಳಿಕೆಯನ್ನು ರೆಕಾರ್ಡ್ ಮಾಡಿ ಎಂದು ಒತ್ತಾಯಿಸಿ, ಕಾನೂನು ಹೋರಾಟ ಮಾಡುವುದಾಗಿ ಹೇಳಿದರು. ಪಾಪಣ್ಣ ನಾಯಕ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸುನಿತಾ ಶ್ಯಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.