ಮಂಗಳವಾರ, ಮೇ 24, 2022
31 °C

ಪ್ರತಿಫಲಾಪೇಕ್ಷೆ ಇಲ್ಲದ ದಾನ ಸದ್ವಿನಿಯೋಗ ಆಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಪ್ಪನ್‌ಪೇಟೆ: ಅಂಗವಿಕಲತೆ, ರೋಗ- ರುಜಿನಗಳು, ಅನಾರೋಗ್ಯ, ವೃದ್ಧಾಪ್ಯ ಇವು ಪೂರ್ವಾರ್ಜಿತ ಕರ್ಮಗಳಲ್ಲ. ಸಮಾಜದಲ್ಲಿನ ಅಸಮಾನತೆ ಹಾಗೂ ಆರೋಗ್ಯ ಕುರಿತು ನಿಷ್ಕಾಳಜಿಯೇ ಕಾರಣ.ಅಂಥವರನ್ನು ಸಮಾಜದಿಂದ ಹೊರಗಿಡುವ ಮೂಲಕ ಬೀದಿಪಾಲು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಆಗಿವೆ. ಇದು ಕುಟುಂಬ ಮತ್ತು ಸಮಾಜದ ತಪ್ಪು ನಡತೆ. ಇದರಿಂದ ನಾವು ಎಲ್ಲಾ ಪಟ್ಟಣ ಮತ್ತು ಊರುಗಳಲ್ಲಿ ವಿವಿಧ ಸ್ಥರದ ಜನರನ್ನು ನೋಡುವಂತಾಗಿದೆ ಎಂದು ಉದ್ಯಮಿ ಮಾಲತಿ ನಾಗರಾಜ್ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.ಸಮೀಪದ ಕಲ್ಲಹಳ್ಳ ಗ್ರಾಮದಲ್ಲಿ ಈಚೆಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಜೇನಿ ಗ್ರಾಮದ ಪದ್ಮಶ್ರೀ ಅನಾಥಾಶ್ರಮದ ಸಂಸ್ಥಾಪಕ ಪ್ರಭಾಕರ ಬೆಳ್ಳಿಸರ ಅವರನ್ನು ಸನ್ಮಾನಿಸಿ ಮಾತನಾಡಿದರು.

ಸೇವೆಗೆ ಪೂರಕವಾಗಿ ್ಙ 25 ಸಾವಿರವನ್ನು ಅನಾಥಾಶ್ರಮಕ್ಕೆ ನೀಡಿದರು. ಆನಂದಪುರದ ಮುರುಘ ರಾಜೇಂದ್ರ ಮಠದ ಜಗದ್ಗುರು ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ಪ್ರತಿಫಲಾಪೇಕ್ಷೆ ಇಲ್ಲದ ಬೆಳ್ಳಿಸರ ಪ್ರಭಾಕರ ಅವರ ಕಾರ್ಯ ಸಮಾಜಕ್ಕೆ ಮಾದರಿ ಆಗಿದೆ ಎಂದರು.ಉದ್ಯಮಿ ಎಲ್. ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಗೋಪಾಲಕೃಷ್ಣ ಬೇಳೂರು ಹಾಜರಿದ್ದರು.

ಮಣಿಪಾಲ್ ಕಾರ್ಡ್ ನೋಂದಣಿ ಶಿಬಿರ: ಇಲ್ಲಿನ ಗುಡ್ ಶಫರ್ಡ್ ಚರ್ಚ್ ಆವರಣದಲ್ಲಿ ಜೂನ್ 24ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮಣಿಪಾಲ್ ಆರೋಗ್ಯ ಕಾರ್ಡ್ ನೋಂದಣಿ ಶಿಬಿರವನ್ನು ಏರ್ಪಡಿಸಲಾಗಿದ್ದು, ನಾಗರಿಕರು ಇದರ ಸೌಲಭ್ಯ ಪಡೆಯುವಂತೆ ಮಣಿಪಾಲ್ ಕಾರ್ಡ್ ವಿತರಕ ಪಿ.ಪಿ. ಸಿಜು ತಿಳಿಸಿದ್ದಾರೆ.ಗ್ರಾಮೀಣ ಜನರು ಆರೋಗ್ಯ ಕಾರ್ಡ್ ಸೌಲಭ್ಯದಿಂದ ಮಣಿಪಾಲ, ಮಂಗಳೂರು, ಉಡುಪಿ ಹಾಗೂ  ಕಾರ್ಕಳ ಆಸ್ಪತ್ರೆಗಳಲ್ಲಿ ವೈದ್ಯರ ವೆಚ್ಚದಲ್ಲಿ ಶೇ 50, ಪ್ರಯೋಗಾಲಯದಲ್ಲಿ ಶೇ 20, ಆಸ್ಪತ್ರೆಯ  ಔಷಧಿಯ ವೆಚ್ಚದಲ್ಲಿ ಶೇ 10 ಮತ್ತು ಒಳರೋಗಿಯ ವೆಚ್ಚದಲ್ಲಿ ಶೇ 25ರಷ್ಟು ರಿಯಾಯಿತಿ ದೊರಕಲಿದೆ ಎಂದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.