ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡುವುದು ಕೆಟ್ಟ ಚಟವಾಗಿದೆ. ನಿತ್ಯ ಹತ್ತಾರು ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ, ಮುಷ್ಕರ, ಧರಣಿ ಇತ್ಯಾದಿಗಳನ್ನು ಮಾಡುತ್ತಲೇ ಇದ್ದಾರೆ. ಇದರಿಂದ ಶಾಲೆಗೆ ಹೋಗುವ ಮಕ್ಕಳು, ವೃದ್ಧರು, ರೋಗಿಗಳೂ ಹಾಗೂ ಅಮಾಯಕರಿಗೆ ತೊಂದರೆ ಆಗುತ್ತಿದೆ. ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲಿ ನಿತ್ಯ ನಡೆಯುವ ಪ್ರತಿಭಟನೆಗಳಿಂದ ಸಾವಿರಾರು ಜನರಿಗೆ ತೊಂದರೆಯಾಗುತ್ತಿದೆ.

ಯಾರೇ ಪ್ರತಿಭಟನೆ, ಮುಷ್ಕರ ಮಾಡಲಿ ಅದು ಸರ್ಕಾರದ ಅನುಭವಕ್ಕೆ ಬರುವಂತೆ ಇರಬೇಕು. ಅದರಿಂದ ಸಾರ್ವಜನಿಕರ ನೆಮ್ಮದಿ ಹಾಳಾಗಬಾರದು, ತೊಂದರೆಯೂ ಆಗಬಾರದು.

ಈಗ ನಡೆಯುತ್ತಿರುವ ಪ್ರತಿಭಟನೆಗಳು ಅರ್ಥ ಕಳೆದುಕೊಂಡಿವೆ. ಬೀದಿಗೆ ಬಂದು ಜನರಿಗೆ ತೊಂದರೆ ಕೊಡುವಂತಹ ಪ್ರತಿಭಟನೆ, ಮುಷ್ಕರಗಳನ್ನು ಸರ್ಕಾರ ನಿಷೇಧಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.