ಶನಿವಾರ, ಜನವರಿ 18, 2020
26 °C

ಪ್ರತಿಭೆಗೆ ಕಾಲಮಾನ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: `ಸಾಹಿತ್ಯ ಎಂದೂ ನಿಂತ ನೀರಲ್ಲ. ಅಲ್ಲಿ ಏರಿಳಿತ ಇದ್ದದ್ದೇ. ಇದನ್ನು ನಾವು ಎಲ್ಲ ಸಾಹಿತ್ಯ ಚರಿತ್ರೆಯಲ್ಲಿ ಕಾಣಬಹುದು. ಭಾಷೆ, ಸಾಹಿತ್ಯದ ಬಗೆಗೆ ಆತಂಕ ಇದ್ದಾಗಲೇ ಆ ಕುರಿತು ಕಾಳಜಿ , ಕ್ರಿಯಾಶೀಲತೆ ಸಾಧ್ಯವಾಗುತ್ತದೆ.  ಪ್ರತಿಭೆಗೆ ಕಾಲಮಾನ ಎಂಬುದಿಲ್ಲ. ಪಂಪನಿಂದ ತೊಡಗಿ ಕುವೆಂಪು ಅವರ ವರೆಗೆ ಕನ್ನಡ ಮಹಾನ್ ಪ್ರತಿಭೆಗಳನ್ನು ಕಂಡಿದೆ ಎಂದು ಲೇಖಕ ಡಾ. ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟಿದ್ದಾರೆ.ಅವರು ಮುಂಬೈ ವಿಶ್ವವಿದ್ಯಾಲಯ ಏರ್ಪಡಿಸಿದ ಸಾಹಿತ್ಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. `ಅಸಮಾನತೆಯ ವಿರುದ್ಧ, ಶೋಷಣೆಯ ವಿರುದ್ಧ ಕನ್ನಡ ಸಾಹಿತ್ಯದಲ್ಲಿ ಉದ್ದಕ್ಕೂ ಪ್ರತಿಭಟನೆ ವ್ಯಕ್ತವಾದುದುನ್ನು ನಾವು ಕಾಣಬಹುದು. ವಚನಕಾರರು ಬದುಕು ದೊಡ್ಡದೆಂದು ಭಾವಿಸಿ ಬರೆದರು. ಜನಭಾಷೆಯಲ್ಲಿ ಬರೆದರು.ಆದರೆ ಇಂದು ವಿಜ್ಞಾನಿಗಳು, ವೈದ್ಯರು, ವಿವಿಧ ಕ್ಷೇತ್ರಗಳ ಪರಿಣತರು ಜನಭಾಷೆಯಲ್ಲಿ ಏನನ್ನೂ ಬರೆಯುತ್ತಿಲ್ಲ ಎಂಬುದು ಖೇದದ ಸಂಗತಿ~ ಎಂದರು.

ಪ್ರತಿಕ್ರಿಯಿಸಿ (+)