ಶುಕ್ರವಾರ, ಜೂನ್ 25, 2021
29 °C

ಪ್ರತಿಭೆಗೆ ತಕ್ಕ ಕೆಲಸ ನೀಡಲಿ

– ವೆಂಕಟೇಶ್ವರ ಸಿ.ಜಿ. ಗೌರಿಬಿದನೂರು Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮುಖ್ಯ­ಮಂತ್ರಿಗಳು ಅಂಗವಿಕಲರಿಗೆ ನಿರುದ್ಯೋಗ ಭತ್ಯೆ ನೀಡುವ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಅಂಗವಿಕಲರಿಗೆ ಮದುವೆಗೆ ಸಹಾಯಧನ ನೀಡಲು ಮುಂದಾಗಿದ್ದಾರೆ. ಆದರೆ ಈ ರೀತಿ ಮಾಡುವ ಬದಲು  ಅವರಲ್ಲಿರುವ ಪ್ರತಿಭೆಗೆ ತಕ್ಕಂತೆ  ಕೆಲಸ ನೀಡಿದರೆ ಅವರಲ್ಲಿರುವ ಕೀಳ­ರಿಮೆ ತೊಲಗಿ ಆತ್ಮವಿಶ್ವಾಸ ಉಂಟಾಗು­ತ್ತದೆ.  ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ.ನಿಜವಾಗಿಯೂ ಇವರ ಬಗ್ಗೆ ಕಾಳಜಿ ಇದ್ದರೆ ‘ಅಂಗವಿಕಲರ ಸಮಾನ ಅವಕಾಶ ಮತ್ತು ಹಕ್ಕುಗಳ ಕಾಯ್ದೆ ೧೯೯೫’ ಇದನ್ನು ಸರಿಯಾಗಿ ಜಾರಿಗೆ ತರಬೇಕು. ಜೊತೆಗೆ ಸರ್ಕಾರಿ ಕೆಲಸ­ದಲ್ಲಿ ಸಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಶೇ ೫ ಮೀಸ­ಲಾತಿ ಮತ್ತು ಎ.ಬಿ. ವೃಂದದ ಹುದ್ದೆ­

ಗ­ಳಿಗೆ ಶೇ ೩ ಮೀಸಲಾತಿ  ಕಡ್ಡಾಯವಾಗಿ  ಜಾರಿಗೆ ತರಬೇಕು. ಆಗ ಮಾತ್ರ ಅವರ ನಿಜವಾದ ಕಲ್ಯಾಣ ಸಾಧ್ಯ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.