ಬೆಂಗಳೂರು: ಜಯನಗರ ಮೂರನೇ ಹಂತದ ಆನೆಬಂಡೆ ರಸ್ತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಮಿಸಿರುವ ಮಾದರಿ ಪಾದಚಾರಿ ಮಾರ್ಗವನ್ನು ಸಂಸದ ಅನಂತಕುಮಾರ್ಶುಕ್ರವಾರ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, `ಈ ರೀತಿಯ ಪಾದಚಾರಿ ಮಾರ್ಗಗಳನ್ನು ನಗರದ ಇತರೆ ಬಡಾವಣೆಗಳಲ್ಲೂ ನಿರ್ಮಿಸಬೇಕು.
ಪಾದಚಾರಿ ಮಾರ್ಗದಲ್ಲಿರುವ ಮಳೆ ನೀರು ಸಂಗ್ರಹ ವ್ಯವಸ್ಥೆಯಿಂದ ಮಳೆ ನೀರಿನ ಬಳಕೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಸಹಾಯವಾಗಲಿದೆ' ಎಂದರು.

`ಪಾದಚಾರಿ ಮಾರ್ಗವನ್ನು ್ಙ 23 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಪಾದಚಾರಿ ಮಾರ್ಗದಲ್ಲಿ ಪ್ರತಿ 30 ಅಡಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಪಾದಚಾರಿ ಮಾರ್ಗದ ಅಕ್ಕಪಕ್ಕದಲ್ಲಿ ನಾಲ್ಕು ಸಾವಿರ ಗಿಡಗಳನ್ನು ನೆಡಲಾಗಿದೆ. ಇದರಿಂದ ಪಾದಚಾರಿ ಮಾರ್ಗದ ಅಂದ ಹೆಚ್ಚಿದೆ' ಎಂದು ಯಡಿಯೂರು ವಾರ್ಡ್ನ ಬಿಬಿಎಂಪಿ ಸದಸ್ಯ ಎನ್. ಆರ್.ರಮೇಶ್ ತಿಳಿಸಿದರು.

ನಂತರ ಮಾತನಾಡಿದ ಶಾಸಕ ಆರ್.ಅಶೋಕ, `ಡೀಸೆಲ್ ಬೆಲೆ ಏರಿಕೆಯ ಕಾರಣದಿಂದ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರವನ್ನು ರಾಜ್ಯ ಸರ್ಕಾರ ಶೇ 16ರಷ್ಟು ಹೆಚ್ಚಳ ಮಾಡಿದೆ. ಅವೈಜ್ಞಾನಿಕವಾದ ಈ ಬೆಲೆ ಏರಿಕೆಯಿಂದ ಜನ ಸಾಮಾನ್ಯರಿಗೆ ಅನನುಕೂಲವಾಗುತ್ತಿದೆ. ಆದ ಕಾರಣ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಇಳಿಸುವ ಬಗ್ಗೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.