ಚಿಕ್ಕಬಳ್ಳಾಪುರ: ಗ್ರಾಮ, ಪಟ್ಟಣ ಮತ್ತು ನಗರಪ್ರದೇಶವನ್ನು ಬಯಲು ಶೌಚಾಲಯದಿಂದ ಮುಕ್ತಗೊಳಿಸಬೇಕು, ಸುವ್ಯವಸ್ಥಿತ ಶೌಚಾಲಯ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂಬ ಉದ್ದೇಶದಿಂದ ಕೆಲ ವರ್ಷಗಳ ಹಿಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿತ್ತು. `ಪ್ರತಿಯೊಂದು ಕುಟುಂಬವು ಮನೆಗೊಂದು ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಳ್ಳಬೇಕು ಮತ್ತು ಅದಕ್ಕೆ ಸಹಾಯಧನವನ್ನು ನೀಡಲಾಗುವುದು' ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಘೋಷಿಸಿದ್ದವು. ಆದರೆ ಇತ್ತೀಚಿಗೆ ಶೌಚಾಲಯ ನಿರ್ಮಿಸಿಕೊಳ್ಳುವ ಪ್ರಕ್ರಿಯೆಗೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ನಿರಾಸಕ್ತಿ ವ್ಯಕ್ತವಾಗಿದ್ದು, ಜಾಗೃತಿ ಅಭಿಯಾನಕ್ಕೂ ಹಿನ್ನಡೆಯಾಗಿದೆ. ಬಹುತೇಕ ಗ್ರಾಮಗಳಲ್ಲಿ ಸುವ್ಯವಸ್ಥಿತ ಶೌಚಾಲಯಗಳಿಗಿಂತ ಬಯಲೇ ಹೆಚ್ಚು ಬಳಕೆಯಾಗುತ್ತಿದೆ!

ತೀರ ಹಿಂದುಳಿದಿರುವ ಗ್ರಾಮೀಣ ಪ್ರದೇಶಗಳು ಸೇರಿ ಪಟ್ಟಣ ಪ್ರದೇಶಗಳಲ್ಲಿ ಶೌಚಾಲಯ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲೆಂದೇ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮನೆಗೊಂದು ಪ್ರತ್ಯೇಕ ಶೌಚಾಲಯ ನಿರ್ಮಿಸಿಕೊಂಡಲ್ಲಿ, 3 ಸಾವಿರ ರೂಪಾಯಿ ನೀಡಲಾಗುವುದು ಎಂದು ಸರ್ಕಾರವು ಘೋಷಿಸಿತ್ತು.

ಅದರನ್ವಯ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರು ಶೌಚಾಲಯಗಳನ್ನು ನಿರ್ಮಿಸಿಕೊಂಡರು. ಆದರೆ ಈಗ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ದಿಢೀರ್ ಹಿನ್ನಡೆಯುಂಟಾಗಿದ್ದು, ಗ್ರಾಮೀಣ ಪ್ರದೇಶದ ಕೆಲ ಕುಟುಂಬಗಳು ಈಗಲೂ ಬಯಲನ್ನೇ ಅವಲಂಬಿಸಿವೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಕೆಲ ಕುಟುಂಬಗಳು ಹೊರತುಪಡಿಸಿದರೆ, ಬಡ ಮತ್ತು ನಿರ್ಗತಿಕ ಸ್ಥಿತಿಯಲ್ಲಿರುವ ಕುಟುಂಬಗಳು ಇದುವರೆಗೆ ಶೌಚಾಲಯ ನಿರ್ಮಿಸಿಕೊಂಡಿಲ್ಲ.

ಶೌಚಕ್ಕಾಗಿ ಬಯಲಿಗೆ ಹೋಗುವುದರಿಂದ ಮಾಲಿನ್ಯ ಹೆಚ್ಚುತ್ತದೆ, ಸಾಂಕ್ರಾಮಿಕ ಕಾಯಿಲೆ ಹರಡುವುದಕ್ಕೂ ಕಾರಣವಾಗುತ್ತದೆ ಎಂದು ಸರ್ಕಾರದವರು ಹೇಳಿದ ಕಾರಣ ನಾವೆಲ್ಲ ಶೌಚಾಲಯ ನಿರ್ಮಿಸಿಕೊಂಡೆವು. ಸರ್ಕಾರ ನೀಡುವ 3 ಸಾವಿರ ರೂಪಾಯಿ ಸಹಾಯಧನ ಸಾಲದಿದ್ದರೂ ನಾವೇ ಅಲ್ಲಿ-ಇಲ್ಲಿ ಸಾಲ ಮಾಡಿ ಶೌಚಾಲಯ ನಿರ್ಮಿಸಿದೆವು. ಒಂದು ಶೌಚಾಲಯ ನಿರ್ಮಾಣಕ್ಕೆ 10 ರಿಂದ 15 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಹುತೇಕ ಮಂದಿ ಈವರೆಗೆ ಶೌಚಾಲಯ ನಿರ್ಮಿಸಿಕೊಂಡಿಲ್ಲ. ಕಾರಣ ಕೇಳಿದರೆ ಹಣವಿಲ್ಲ ಎಂಬ ಉತ್ತರ ಸಿಗುತ್ತದೆ. ನೀರೇ ಇಲ್ಲದಿರುವಾಗ ಶೌಚಾಲಯ ಹೇಗೆ ನಿರ್ಮಿಸಿಕೊಳ್ಳುವುದು ಎಂದು ಪ್ರಶ್ನೆ ಕೂಡ ಮಾಡುತ್ತಾರೆ ಎಂದು ಗ್ರಾಮಸ್ಥ ಕೃಷ್ಣಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಗ್ರಾಮಗಳಲ್ಲಿ ಶೇ 50ರಷ್ಟು ಕುಟುಂಬಗಳು ಈಗಲೂ ಬಯಲನ್ನೇ ಶೌಚಕ್ಕಾಗಿ ಅವಲಂಬಿಸಿವೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೊನಿಗಳಲ್ಲಿ ಶೇ 80ರಷ್ಟು ಮಂದಿ ಬಯಲು ಶೌಚಕ್ಕೆ ಹೋಗುತ್ತಿದ್ದಾರೆ. ಬಯಲಿಗೆ ಹೋಗಲು ಮುಜುಗರವಾಗುತ್ತೆಂದೇ ಬಹುತೇಕ ಮಹಿಳೆಯರು ನಸುಕಿನ 4 ರಿಂದ 5 ಗಂಟೆಗೆ ಬಯಲಿಗೆ ಹೋದರೆ, ಇನ್ನೂ ಕೆಲವರು ರಾತ್ರಿ 8 ರಿಂದ 10ರ ಸಮಯದಲ್ಲಿ ಹೋಗುತ್ತಾರೆ. ಅಸುರಕ್ಷಿತ ವಾತಾವರಣವಿದ್ದರೂ ಹುಳಹುಪ್ಪಟೆ ಕಾಟವಿದ್ದರೂ ಮಹಿಳೆಯರು ಬಯಲಿಗೆ ಹೋಗಬೇಕಾದ ಅನಿವಾರ್ಯವಿದೆ. ಪುರುಷರು ಗ್ರಾಮದ ಹೊರವಲಯದಲ್ಲಿ, ಹೊಲಗದ್ದೆಗಳಲ್ಲಿ ಹೋಗುತ್ತಾರೆ. ಈ ಸಮಸ್ಯೆ ಹಲವಾರು ವರ್ಷಗಳಿಂದ ಬಗೆಹರಿದಿಲ್ಲ ಎಂದು ಗ್ರಾಮಸ್ಥೆ ಲಕ್ಷ್ಮಿದೇವಮ್ಮ ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಒಂದು ರೀತಿ ಪರಿಸ್ಥಿತಿಯಿದ್ದರೆ, ಪಟ್ಟಣ ಮತ್ತು ನಗರಪ್ರದೇಶದಲ್ಲಿ ಬೇರೆಯದ್ದೇ ಪರಿಸ್ಥಿತಿಯಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ 2010-11ರ ಅಂಕಿ ಅಂಶಗಳ ಪ್ರಕಾರ, ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲ್ಲೂಕುಗಳಲ್ಲಿ ಸಮುದಾಯ ಶೌಚಾಲಯವನ್ನೇ ನಿರ್ಮಿಸಿಲ್ಲ. ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ತಲಾ ಎರಡು ಸಮುದಾಯ ಶೌಚಾಲಯಗಳನ್ನು ನಿರ್ಮಿಸಲಾಗಿದ್ದರೆ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಒಂದು ಸಮುದಾಯ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಈ ಶೌಚಾಲಯಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಾರೆ.

ಸರ್ಕಾರದಿಂದ 3 ಸಾವಿರ ರೂಪಾಯಿ ಸಹಾಯಧನ ದೊರೆಯುತ್ತದೆ ಮತ್ತು ಉತ್ತಮ ಆರೋಗ್ಯ ರಕ್ಷಿಸಿಕೊಳ್ಳುವ ಉದ್ದೇಶದಿಂದ ಕೆಲ ವರ್ಷಗಳ ಹಿಂದೆ ಬಹುತೇಕ ಮಂದಿ ಶೌಚಾಲಯಗಳನ್ನು ನಿರ್ಮಿಸಿಕೊಂಡರು. ಜನರು ಈಗಲೂ ಶೌಚಾಲಯ ನಿರ್ಮಿಸಿಕೊಳ್ಳಲು ಸಿದ್ಧರಿದ್ದಾರೆ. ಆದರೂ ಸರ್ಕಾರದಿಂದ ಸದ್ಯಕ್ಕೆ ಸಹಾಯಧನ ದೊರೆಯುವ ಸಾಧ್ಯತೆ ಕಡಿಮೆಯಿದೆ. ಸಹಾಯಧನದ ರೂಪದಲ್ಲಿ ಸರ್ಕಾರದ ವತಿಯಿಂದ 9,200 ರೂಪಾಯಿ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಆದರೆ ಈ ನಿರ್ಣಯಕ್ಕೆ ಇನ್ನೂ ಅನುಮೋದನೆ ದೊರೆತಿಲ್ಲವಂತೆ. ಒಂದು ವೇಳೆ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅನುದಾನ ದೊರೆತಲ್ಲಿ, ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬಹುದು ಎಂದು ದೊಡ್ಡಮರಳಿ ಗ್ರಾಮಪಂಚಾಯಿತಿ ಸದಸ್ಯರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.