ನವದೆಹಲಿ (ಐಎಎನ್ಎಸ್): 2008ರಲ್ಲಿ ಸರ್ಕಾರದ ಪರ ವಿಶ್ವಾಸಮತ ಯಾಚನೆಗಾಗಿ ಸಂಸದರಿಗೆ ಲಂಚ ನೀಡಿದ್ದುದು ವಿಕಿಲೀಕ್ಸ್ ಮಾಹಿತಿಯಿಂದ ದೃಢವಾಗಿರುವುದರಿಂದ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಡಳಿತ ನಡೆಸುವ ಹಕ್ಕು ಕಳೆದುಕೊಂಡಿದ್ದಾರೆ; ಆದ್ದರಿಂದ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎನ್ಡಿಎ ನಾಯಕ ಎಲ್.ಕೆ.ಅಡ್ವಾಣಿ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲ ಅವಧಿಯ ಯುಪಿಎ ಸರ್ಕಾರ ರಾಜಕೀಯ ಪಾಪದ ಬಲದಿಂದ ಬದುಕುಳಿದಿದ್ದು ಈಗಿನ ಸರ್ಕಾರಕ್ಕೆ ಮುಂದುವರಿಯುವ ನೈತಿಕ ಹಕ್ಕಿಲ್ಲ. ಈ ಮಾಹಿತಿ ಸೋರಿಕೆಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕ ಬಂದಿದೆ ಎಂದು ಹೇಳಿದರು.

14ನೇ ಲೋಕಸಭೆಯಲ್ಲಿ ಸಂಸತ್ತಿನ ಹೊರಗೆ ಲಂಚ ನೀಡಿರುವುದರಿಂದ ಅದಕ್ಕೂ ಈಗಿನ 15ನೇ ಲೋಕಸಭೆಗೂ ಸಂಬಂಧವಿಲ್ಲ ಎಂಬ ಪ್ರಣವ್ ಮುಖರ್ಜಿ ಅವರ ಹೇಳಿಕೆಯನ್ನು ಅಡ್ವಾಣಿ ತಳ್ಳಿಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.