ಬುಧವಾರ, ಜನವರಿ 29, 2020
24 °C
ಕೆಜೆಪಿ ಸಂಸ್ಥಾಪಕ ಅಧ್ಯಕ್ಷ

ಪ್ರಸನ್ನಕುಮಾರ್‌ ನಾಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಂಸ್ಥಾಪಕ ಅಧ್ಯಕ್ಷ ಪದ್ಮನಾಭ ಪ್ರಸನ್ನಕುಮಾರ್‌ ಕಾಣೆ­ಯಾಗಿ­ದ್ದು, ಈ ಸಂಬಂಧ ಅವರ ತಂದೆ ನಂಜುಂಡಪ್ಪ ಅವರು ಇಲ್ಲಿನ ಅಶೋಕ­ನಗರ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.‘ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೊನಿ ನಿವಾಸದಲ್ಲಿ ಕರೆ­ದಿರುವ ಸಭೆಗೆ ಹೋಗುವುದಾಗಿ ತಿಳಿಸಿ ಸೋಮವಾರ (ಡಿ.9) ಬೆಳಿಗ್ಗೆ ಮನೆ­ಯಿಂದ ಹೋಗಿದ್ದ ಮಗ ವಾಪಸ್‌ ಬಂದಿ­ಲ್ಲ’ ಎಂದು ನಂಜುಂಡಪ್ಪ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ‘ಮಗ, ಯಡಿಯೂರಪ್ಪ­ನವರ ಸಭೆ ಮುಗಿದ ಬಳಿಕ ಮಧ್ಯಾಹ್ನ ಊಟಕ್ಕೆ ಮನೆ­ಗೆ ಬರುತ್ತೇನೆ ಎಂದು ಹೇಳಿ ಹೋಗಿದ್ದ. ಆತ ಮೊಬೈಲ್‌ ಸಹ ತೆಗೆದುಕೊಂಡು ಹೋಗಿಲ್ಲ’ ಎಂದು ನಂಜುಂಡಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.‘ಇದೇ ರೀತಿ ಆಗಾಗ್ಗೆ ಮನೆಯಿಂದ ಹೊರ ಹೋಗುತ್ತಿದ್ದ ಆತ ಮೂರ್ನಾಲ್ಕು ದಿನಗಳಲ್ಲಿ ವಾಪಸ್‌ ಬರುತ್ತಿದ್ದ. ಆದರೆ, ಈ ಬಾರಿ ಆರು ದಿನವಾದರೂ ವಾಪಸ್‌ ಬಂದಿಲ್ಲ ಮತ್ತು ಕರೆ ಸಹ ಮಾಡಿಲ್ಲ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)