ಸೋಮವಾರ, ಮೇ 23, 2022
27 °C

ಪ್ರಾಥಮಿಕ ಶಾಲಾ ಶಿಕ್ಷಕರ ಕೌನ್ಸೆಲಿಂಗ್ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ 2013-14ನೇ ಸಾಲಿನ ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕರ ಘಟಕದ ಒಳಗಿನ ಸಾಮಾನ್ಯ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಯಾವುದೇ ಸಮಸ್ಯೆ, ಗೊಂದಲಗಳಿಲ್ಲದೆ ಸೋಮವಾರ ಆರಂಭವಾಯಿತು.ನಗರದ ಡಿ. ಸುಬ್ಬಯ್ಯ ರಸ್ತೆಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ನಡೆದ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ಶಿಕ್ಷಕರು ಪಾಲ್ಗೊಂಡಿದ್ದರು. ಉಪ ನಿರ್ದೇಶಕ ಬಿ.ಕೆ. ಬಸವರಾಜು ಅವರು ಸ್ಥಳದಲ್ಲಿ ಹಾಜರಿದ್ದು ಶಿಕ್ಷಕರಿಗೆ ಅಗತ್ಯ ಸಲಹೆ, ಸೂಚನೆ ನೀಡಿದರು.ಕ್ರಮ ಸಂಖ್ಯಾನುಸಾರ: ಆದ್ಯತಾ ಪಟ್ಟಿಯಲ್ಲಿರುವ ಶಿಕ್ಷಕರಿಗೆ ನೀಡಿರುವ ಕ್ರಮ ಸಂಖ್ಯೆಗೆ ಅನುಗುಣವಾಗಿ ಮೊದಲ ದಿನ ಕ್ರಮ ಸಂಖ್ಯೆ 1ರಿಂದ 250ರ ವರೆಗಿನ ಶಿಕ್ಷಕರು ಹಾಜರಿದ್ದರು.  24 ಮಂದಿ ವಿಧವೆಯರು, 4 ಮಾಜಿ ಸೈನಿಕರು, 5 ಅಂಗವಿಕಲರು, ವೈದ್ಯ ಕೀಯ ಚಿಕಿತ್ಸೆಗೆ ಒಳಪಟ್ಟಿರುವ 5 ಮಂದಿ ಸೇರಿದಂತೆ 200ಕ್ಕೂ ಹೆಚ್ಚು ಶಿಕ್ಷಕರು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಿದ್ದರು.ತಡವಾಗಿ ಆರಂಭ: ಪ್ರಾಥಮಿಕ ಶಾಲಾ ಸಹಾಯಕ ಶಿಕ್ಷಕರಿಗೆ ಘಟಕದ ಒಳಗಿನ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಬೆಳಿಗ್ಗೆ 10ಗಂಟೆಗೆ ನಿಗದಿ ಯಾಗಿತ್ತು. ಹೀಗಾಗಿ, ವರ್ಗಾವಣೆ ಬಯಸಿದ ಎಲ್ಲಾ ಶಿಕ್ಷಕರು ಕೌನ್ಸೆಲಿಂಗ್ ಕೇಂದ್ರಕ್ಕೆ ಆಗಮಿಸಿದ್ದರು. ಆದರೆ, 10 ಗಂಟೆಗೆ ಆರಂಭವಾಗಬೇಕಿದ್ದ ಪ್ರಕ್ರಿಯೆ ಮಧ್ಯಾಹ್ನ 12 ಗಂಟೆಗೆ ಆರಂಭವಾಯಿ ತು. ಪರಿಣಾಮ ಸಮಯಕ್ಕೆ ಸರಿಯಾಗಿ ಸ್ಥಳದಲ್ಲಿ ಹಾಜರಿದ್ದ ಶಿಕ್ಷಕರು ಅನಗತ್ಯವಾಗಿ 2 ಗಂಟೆಗಳ ಕಾಲ ಕಾಯುವಂತಾಯಿತು.ಕೈಕೊಟ್ಟ ಸರ್ವರ್:  ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಪಾರ ದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಕಳೆದ ವರ್ಷದಿಂದ ಆನ್‌ಲೈನ್ ಕೌನ್ಸೆಲಿಂಗ್ ಪ್ರಕ್ರಿಯೆ ಜಾರಿಗೆ ತರಲಾಗಿದೆ. ಅದರಂತೆ ಈ ಬಾರಿಯೂ ಆನ್‌ಲೈನ್ ಮೂಲಕವೇ ಕೌನ್ಸೆಲಿಂಗ್ ನಡೆಯಿತು. ಆದರೆ, ಮೈಸೂರು ಸೇರಿ ದಂತೆ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಪ್ರಕ್ರಿಯೆ ಆರಂಭ ಗೊಂಡಿದ್ದರಿಂದ ಸರ್ವರ್ ಪದೇ ಪದೇ ಕೈಕೊಟ್ಟಿತು. ಕೌನ್ಸೆಲಿಂಗ್‌ಗೆ ಹಾಜರಾ ಗಿದ್ದ ಶಿಕ್ಷಕರು ಅರ್ಜಿ ಪ್ರತಿ, ಬಿಇಒ ಅವರ ಅನುಮೋದಿತ ಅರ್ಜಿ ಪ್ರತಿ, ವರ್ಗಾವಣೆ ಆದ್ಯತೆಗೆ ಸಂಬಂಧಿಸಿದ ಪ್ರಮಾಣಪತ್ರದ ಮೂಲ ಪ್ರತಿ ಹಾಗೂ ಸೇವಾ ಪ್ರಮಾಣ ಪತ್ರಗಳನ್ನು ಹಾಜರುಪಡಿಸಿದರು.ಜುಲೈ 8ರಿಂದ ಆರಂಭವಾಗಿರುವ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಜುಲೈ 11ರವರೆಗೆ ನಡೆಯಲಿದೆ. ಜುಲೈ 9ರಂದು ಪ್ರೌಢಶಾಲಾ ಮುಖ್ಯ ಶಿಕ್ಷಕರ ವರ್ಗಾವಣೆ (ಘಟಕದ ಹೊರಗೆ), ಜುಲೈ 10ರಂದು ಪ್ರೌಢಶಾಲಾ ಶಿಕ್ಷಕರ (ಘಟಕದ ಒಳಗೆ) ಕೋರಿಕೆ ವರ್ಗಾವಣೆ ಹಾಗೂ ಜುಲೈ 11ರಂದು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರಿಗೆ (ಸಂಗೀತ, ಕಲೆ, ಕ್ರಾಫ್ಟ್ಸ್) ಕೌನ್ಸೆಲಿಂಗ್ ನಡೆಯಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.