ಭಾನುವಾರ, ಫೆಬ್ರವರಿ 28, 2021
23 °C
ಪದೋನ್ನತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನ

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ

ಬಾಗಲಕೋಟೆ: ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಇಲಾಖೆಗೆ ಉತ್ತಮ ಹೆಸರು ತರಬೇಕು ಎಂದು ಡಿವೈಎಸ್‌ಪಿ ವಿಠ್ಠಲ ಜಗಲಿ  ನೀಡಿದರು. ನವನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಪದೋನ್ನತಿ ಹೊಂದಿದ ಅಧಿಕಾರಿಗಳನ್ನು ಸನ್ಮಾನಿಸಿ ಅವರು ಮಾತನಾಡಿದರು.ಪೊಲೀಸ್ ಇಲಾಖೆಯವರು ಸಾರ್ವಜನಿಕರೊಂದಿಗೆ ಒಳ್ಳೆಯ ಸಂಪರ್ಕ ಹೊಂದಿರಬೇಕು. ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದರೆ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು. ಇದಕ್ಕೂ ಮುನ್ನ ಪೊಲೀಸ್ ಪರೇಡ್ ಮೈದಾನದಲ್ಲಿ ಇಲಾಖೆಯ ಸಿಬ್ಬಂದಿ ಆಕರ್ಷಕ ಪಥಸಂಚಲನ ನಡೆಸಿದರು. ಬಳಿಕ ಪದೋನ್ನತಿ ಹೊಂದಿದವರಿಗೆ ಬ್ಯಾಜ್ ನೀಡಿ ಸನ್ಮಾನಿಸಲಾಯಿತು.ಪದೋನ್ನತಿ ಹೊಂದಿದವರು: ನವನಗರ ಪೊಲೀಸ್ ಠಾಣೆಯ ಟಿ.ಎಸ್. ಮಜ್ಜಗಿ, ಬೀಳಗಿಯ ಆರ್.ಎಸ್. ಪಾಟೀಲ, ಬಾಗಲಕೋಟೆ ಶಹರ ಠಾಣೆಯ ಎಸ್.ಬೇತ್, ಮುಧೋಳದ ವಿ.ವಿ. ಸಾಲಗುಂದಿ, ಅಮೀನಗಡದ ಎಂ.ಬಿ. ಗಣಾಚಾರಿ, ಕಲಾದಗಿಯ ವಿ.ಜಿ. ಪೂಜಾರಿ, ಬಾಗಲಕೋಟೆ ಹೆಸ್ಕಾಂ ಘಟಕದ ಡಿ.ಎಸ್. ಮೇತ್ರಿ, ಜಮಖಂಡಿಯ ಎಂ.ವೈ. ಕಲಾದಗಿ ಅವರು ಪದೋನ್ನತಿ ಹೊಂದಿದರು.ಡಿವೈಎಸ್‌ಪಿ ಚಿಟಗುಪ್ಪಿ, ಸಿಪಿಐ ಶಿವಶಂಕರ ಗಣಾಚಾರಿ, ಪಿಎಸ್ಐ ಧೂಳಖೇಡ, ರಮೇಶ ಕಾಂಬಳೆ, ಬಸವರಾಜ ಲಮಾಣಿ, ಚಂದ್ರಶೇಖರ ಮಠಪತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.