ಪ್ರಿಯಕರನಿಗೆ ಜನ್ಮದಿನದ ಕಾಣಿಕೆ

7

ಪ್ರಿಯಕರನಿಗೆ ಜನ್ಮದಿನದ ಕಾಣಿಕೆ

Published:
Updated:
ಪ್ರಿಯಕರನಿಗೆ ಜನ್ಮದಿನದ ಕಾಣಿಕೆ

ಪ್ರಿಯಕರ, ಪ್ರೇಯಸಿಯ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುವುದು ಸಹಜ. ನಮ್ಮಿಷ್ಟದವರಿಗೆ ಉಡುಗೊರೆ ನೀಡಿ ಅವರ ಮುಖದಲ್ಲಿ ಮೂಡುವ ಸಂತಸದ ನಗುವನ್ನು ನೋಡುವುದೇ ಚೆಂದ. ಲೇಡಿ ಗಾಗಾ ಕೂಡ ಇದೇ ಸಂಭ್ರಮದಲ್ಲಿದ್ದಾರೆ.

ತನ್ನ ಪ್ರಿಯಕರ ನಟ ಟೇಲರ್ ಕಿನ್ನೆಗಾಗಿ ಹೊಸ ವಿನ್ಯಾಸದ ಬ್ಯಾಗ್‌ವೊಂದನ್ನು (ಬ್ಯಾಕ್‌ಪ್ಯಾಕ್) ತೆಗೆದುಕೊಂಡಿದ್ದಾರಂತೆ. ಈ ಬ್ಯಾಕ್‌ಪ್ಯಾಕ್‌ನ ಬೆಲೆ ಮೂವತ್ತೇಳು ಸಾವಿರ ಪೌಂಡ್.ಜುಲೈ 15ರಂದು ಟೇಲರ್ ಹುಟ್ಟಿದ ಹಬ್ಬ. ಟೇಲರ್‌ಗೆ ಫಾಸ್ಟ್ ಕಾರ್‌ಗಳು, ಸೂಟ್ಸ್, ಬಂಗಲೆಗಳು ಇಷ್ಟವಾಗಲ್ಲ.  ಹಾಗಾಗಿ ಯಾವ ಉಡುಗೊರೆ ನೀಡಲಿ ಎಂಬ ಚಿಂತೆಯಲಿದ್ದರಂತೆ ಗಾಗಾ. ವಿಶೇಷವಾಗಿ ಟೇಲರ್ ಹುಟ್ಟುಹಬ್ಬದ ಸವಿಯನ್ನು ಸವಿಯಬೇಕು ಎಂಬ ಆಸೆಯಿಂದ ಬ್ಯಾಕ್‌ಪ್ಯಾಕ್ ನೀಡಿದ್ದಾರೆ.ಮೊಸಳೆಯ ಚರ್ಮದಿಂದ ತಯಾರಾದ ಈ ಬ್ಯಾಕ್‌ಪ್ಯಾಕ್‌ನಲ್ಲಿ ಪ್ರಸಿದ್ಧ ಕಲಾವಿದ ಡ್ಯಾಮಿನ್ ಹಿಸ್ಟ್ ಹಸ್ತಾಕ್ಷರದ ಜತೆಗೆ ಅವರ ವಿನ್ಯಾಸದ ಚಿತ್ರಗಳು ಇವೆಯಂತೆ.  ಈ ಬ್ಯಾಕ್‌ಪ್ಯಾಕ್‌ನ ಬಣ್ಣ, ವಿನ್ಯಾಸ ನೋಡಿ ಟೇಲರ್ ಖುಷಿಯಾಗಿದ್ದಾರಂತೆ.ಟೇಲರ್ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುವುದಲ್ಲದೇ ಇನ್ನೂ ಹಲವು ಯೋಜನೆಗಳನ್ನು ಗಾಗಾ ಹಾಕಿಕೊಂಡಿದ್ದಾರೆ. ಚಿಕಾಗೋದಲ್ಲಿರುವ ಟೇಲರ್ ಕುಟುಂಬವನ್ನು ಭೇಟಿಯಾಗಲು ಜೆಟ್ ವಿಮಾನವನ್ನು ಕೂಡ ಬುಕ್ ಮಾಡಿದ್ದಾರಂತೆ. ಟೇಲರ್ ಕುಟುಂಬದ ಸದಸ್ಯರೊಂದಿಗೆ ಹಾಯಾಗಿರಲಿ ಎಂಬುವುದು ಈ ಪ್ರೇಮಿಯ ಬಯಕೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry