ಶುಕ್ರವಾರ, ಮಾರ್ಚ್ 31, 2023
31 °C

ಪ್ರಿಯಾ ಯುಗಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಿಯಾ ಯುಗಳ

ಬಿಂದಾಸ್ ಹುಡುಗಿ ಗೆದ್ದಿದೆ. ಬಿಂದಾಸ್ ಹುಡುಗಿ ಐವತ್ತು ದಿನ ಪೂರೈಸಿದೆ. ನೂರು ದಿನ ಪೂರೈಸುವ ವಿಶ್ವಾಸವಿದೆ. ಮತ್ತೆರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಲು ಒಪ್ಪಿಕೊಂಡಿರುವೆ. -ಹೀಗೆ ನಾಲ್ಕು ಮಾತುಗಳಲ್ಲಿ ಪ್ರಿಯಾ ಹಾಸನ್‌ರ ಹೊಸ ವರ್ಷದ ಸಂತಸ-ಸಂಕಲ್ಪಗಳನ್ನು ಪಟ್ಟಿಮಾಡಿಬಿಡಬಹುದು. ಆದರೆ, ಅವರ ಉತ್ಸಾಹ ಚೌಕಟ್ಟುಗಳಿಗೆ ಸಿಗದಷ್ಟು ಚಲನಶೀಲವಾದುದು.ಪ್ರಿಯಾ ಮಾತು ಆರಂಭವಾದುದು ಗಾಂಧಿನಗರದ ತಾರತಮ್ಯ ನಡವಳಿಕೆಯ ನಡುವೆಯೂ ‘ಬಿಂದಾಸ್ ಹುಡುಗಿ’ ಐವತ್ತು ದಿನಗಳನ್ನು ಪೂರೈಸಿದೆ ಎನ್ನುವ ಸಂತಸದೊಂದಿಗೆ.ಮಾತು ಮುಂದುವರಿದದ್ದು ಹೊಸ ಅವಕಾಶಗಳ ಬಗ್ಗೆ. ಮೊದಲನೆಯ ಚಿತ್ರ ಎ.ಗಣೇಶ್ ನಿರ್ಮಿಸುತ್ತಿರುವ ‘ರೆಬೆಲ್’. ಧನುರ್ಮಾಸ ಮುಗಿಯಲು ಕಾಯುತ್ತಿರುವ ಗಣೇಶ್, ಜನವರಿಯಲ್ಲಿ ‘ರೆಬೆಲ್’ ಆರಂಭಿಸುತ್ತಾರಂತೆ. ಪ್ರಿಯಾ ಒಪ್ಪಿಕೊಂಡಿರುವ ಇನ್ನೊಂದು ಚಿತ್ರ ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕರ ನಿರ್ಮಾಣದ್ದು. ಈ ಎರಡೂ ಚಿತ್ರಗಳೂ ಎಂದಿನಂತೆ ನಾಯಕಿ ಪ್ರಧಾನ, ಸಾಹಸ ಪ್ರಧಾನ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.