ಶನಿವಾರ, ಫೆಬ್ರವರಿ 27, 2021
19 °C

ಪ್ರೀತಿಸುವುದನ್ನು ಯಶ್‌ ಹೇಳಿಕೊಟ್ಟರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರೀತಿಸುವುದನ್ನು ಯಶ್‌ ಹೇಳಿಕೊಟ್ಟರು

ಪ್ರೀತಿಸುವುದೆಂದರೆ ಪ್ರೀತಿಯ ನೋಟ ಅಥವಾ ಮಾತಲ್ಲ... ಮಾತಿಗೆ ಸಿಗದ ಶಬ್ದಗಳಿಗೆ ನಿಲುಕದ, ಭಾವತೀವ್ರತೆ. ಅದನ್ನು ಅನುಭವಿಸಿಯೇ ಅರಿಯಬೇಕು.ಯಶ್‌ ಚೋಪ್ರಾ ಬಗ್ಗೆ ಮಾತನಾಡುವುದೆಂದರೆ... ಶಬ್ದಗಳೇ ಬಾರವು... ಆದರೆ ನನಗೆ ಪ್ರೀತಿಸಲು ಕಲಿಸಿಕೊಟ್ಟದ್ದು ಯಶ್‌ ಚೋಪ್ರಾ ಎಂದು ಮಾತ್ರ ಹೇಳಬಲ್ಲೆ. ಪ್ರೀತಿಸುವುದೆಂದರೆ ಅವರ ಚಿತ್ರಗಳನ್ನು ನೋಡಿ... ಓಹ್‌ ಇದೇ ಇರಬಹುದಾ ಎಂದೆನಿಸುತ್ತದಲ್ಲ ಅದಲ್ಲ. ಪ್ರೀತಿಸುವುದೆಂದರೆ ಪ್ರೀತಿಯ ನೋಟ ಅಥವಾ ಮಾತಲ್ಲ... ಮಾತಿಗೆ ಸಿಗದ ಶಬ್ದಗಳಿಗೆ ನಿಲುಕದ, ಭಾವತೀವ್ರತೆ. ಅದನ್ನು ಅನುಭವಿಸಿಯೇ ಅರಿಯಬೇಕು. ಆ ಅನುಭವದ ಅಭಿವ್ಯಕ್ತಿಯನ್ನು ಹೇಳಿಕೊಟ್ಟಿದ್ದು ಯಶ್‌ ಚೋಪ್ರಾ...

ನಿರ್ದೇಶಕ ಯಶ್‌ ಚೋಪ್ರಾ ಸ್ಮರಣಾರ್ಥದ ಯಶ್‌ಚೋಪ್ರಾ ಮೆಮೊರಿಯಲ್‌ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡುತ್ತ ರೇಖಾ ಹೇಳಿದರು. ‘ಯಶ್‌ ಅವರ ಚಿತ್ರಗಳಲ್ಲಿ ಅಭಿನಯಿಸಿರುವ ರೇಖಾ, ಅವರ ಮೆಚ್ಚುಗೆಯ ನಟಿ ಎಂದೂ ಹೆಸರಾಗಿದ್ದರು. ಪ್ರೀತಿ ಪಡೆಯುವುದು ಮಾತ್ರವಲ್ಲ, ನಮ್ಮಲ್ಲಿರುವ ಎಲ್ಲ ಪ್ರೀತಿಯನ್ನೂ ಧಾರೆ ಎರೆಯುವುದು ಹಾಗೂ ಹಂಚುವುದು ಎಂದು ತಿಳಿದಿದ್ದು ಅವರ ಒಡನಾಟದಿಂದ’.ಅವರು ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದರು. ಅವರ ಪ್ರೇರಣೆಯಿಂದಲೇ ನನ್ನೊಳಗಿನ ಕವಿಯೂ ಹೊರಬಂದ. ಒಂದಷ್ಟು ಕವಿತೆಗಳನ್ನು ಬರೆಯುವಂತಾದೆ. ನನ್ನೊಳಗಿನ ಭಾವತೀವ್ರತೆಗೆ ಶಬ್ದಗಳ ಎರಕ ಹೊಯ್ಯುವುದನ್ನೂ ಅವರೇ ಕಲಿಸಿಕೊಟ್ಟರು’ ರೇಖಾ ಯಶ್‌ ಚೋಪ್ರಾ ಅವರ ‘ಫಾಸ್ಲೆ’ ಹಾಗೂ ‘ಸಿಲ್‌ಸಿಲಾ’ ಚಿತ್ರಗಳಲ್ಲಿ ಅಮಿತಾಭ್‌ ಜೊತೆಗೆ ನಟಿಸಿದ್ದರು.ಈ ಪ್ರಶಸ್ತಿಯನ್ನು ಟಿ. ಸುಬ್ಬರಾಮಿ ರೆಡ್ಡಿ ಪ್ರತಿಷ್ಠಾನವು ಕಳೆದ ಮೂರು ವರ್ಷಗಳಿಂದ ನೀಡುತ್ತಿದೆ. ಈ ಪ್ರಶಸ್ತಿಯು ಚಿನ್ನದ ಪದಕ ಹಾಗೂ 10 ಲಕ್ಷ ರೂಪಾಯಿಗಳ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.