ಶನಿವಾರ, ಮೇ 8, 2021
26 °C

ಪ್ರೆಸ್‌ಕ್ಲಬ್ ಭವನ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಮಾಹಿತಿ ನೀಡುವ ಭರಾಟೆಯಲ್ಲಿ ಈ ದಿನ ಬೇರೆಯವರಿಗೆ ನೋವಾಗುವಂತಹ ಸುದ್ದಿಗಳು ಪ್ರಸಾರವಾಗುತ್ತಿವೆ. ಈ ರೀತಿ ಆಗಬಾರದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಹೇಳಿದರು.

ಶುಕ್ರವಾರ ಪ್ರೆಸ್‌ಕ್ಲಬ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ `ಪ್ರೆಸ್‌ಕ್ಲಬ್ ಭವನ~ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಈ ಪ್ರೆಸ್‌ಕ್ಲಬ್ ಭವನ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ಹಣ ವೆಚ್ಚವಾಗಿದೆ~ ಎಂದು ಹೇಳಿದರು.

ಗೃಹ ಮತ್ತು ಸಾರಿಗೆ ಸಚಿವ ಆರ್. ಅಶೋಕ ಮಾತನಾಡಿ, 24 ಗಂಟೆಯೂ ಪತ್ರಕರ್ತರಾಗಿರಬಾರದು. ಏಕೆಂದರೆ, ಅವರಿಗೂ ಒಂದು ಜೀವನವಿದೆ. ಮಾನಸಿಕವಾಗಿ, ದೈಹಿಕವಾಗಿ ಕುಗ್ಗುವಂತಹ ಕೆಲಸವನ್ನು ಮಾಡಬಾರದು. ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಬೇಕು~ ಎಂದು ಸಲಹೆ ನೀಡಿದರು.`ಮಳೆ ಬಂದರೆ ಈ ಸ್ಥಳದಿಂದ ಹೋಗೋದಕ್ಕೆ ಆಗಲ್ಲ ಎಂದು ಪ್ರೆಸ್‌ಕ್ಲಬ್ ಸಿಬ್ಬಂದಿ ಹೇಳುತ್ತಿದ್ದರು. ಅವತ್ತು ನೋಡಿ ಏನಾದರೂ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದಾಗ, ಎಲ್ಲರೂ ಹೇಳಿ ಹೋದರು ಇವರೂ ಸಹ ಹಾಗೇ ಆಶ್ವಾಸನೆ ನೀಡಿ ಮರೆಯುತ್ತಾರೆ ಎಂದು ಸ್ವಲ್ಪ ಜನ ಮಾತನಾಡಿಕೊಂಡಿದ್ದರು.ಅವರ ಮಾತಿಗೆ ಇಂದು ಉತ್ತರ ಸಿಕ್ಕಿರಬೇಕು~ ಎಂದರು. `ಪ್ರೆಸ್‌ಕ್ಲಬ್ ಅಧ್ಯಕ್ಷ ಎಂ.ಎ.ಪೊನ್ನಪ್ಪ, ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್, ಮೇಯರ್ ಶಾರದಮ್ಮ, ಪ್ರಧಾನ ಕಾರ್ಯದರ್ಶಿ ಕೆ.ಸದಾಶಿವ ಶೆಣೈ, ಉಪ ಮೇಯರ್ ಎಸ್.ಹರೀಶ್ ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.