ಮಂಗಳೂರು: ಕದ್ರಿ ಶಿವಭಾಗ್ನಲ್ಲಿರುವ ಖಾಸಗಿ ಬ್ಯಾಂಕ್ನ ಸಾಲ ವಸೂಲಿ ಅಧಿಕಾರಿಯೊಬ್ಬರನ್ನು ಅಪಹರಿಸಿದ 45 ನಿಮಿಷಗಳೊಳಗೇ ಮೂವರು ಆರೋಪಿಗಳನ್ನು ಪಡೀಲ್ ವೀರನಗರದಲ್ಲಿ ಬಂಧಿಸುವ ಮೂಲಕ ನಗರ ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಯಶ ಕಂಡಿದ್ದಾರೆ.

ಬೆಳಿಗ್ಗೆ 10.30ಕ್ಕೆ ಬ್ಯಾಂಕ್ಗೆ ಆಗಮಿಸಿದ ಮೂರ್ನಾಲ್ಕು ಮಂದಿಯ ತಂಡ, ಅಧಿಕಾರಿ ತಿಲಕರಾಜ್ ಅವರಿಗೆ ಥಳಿಸಿ ಬಲವಂತವಾಗಿ ಹೊರಗೆಳೆದುಕೊಂಡು ಹೋಯಿತು. ನಂತರ ಆಟೊದಲ್ಲಿ ಕರೆದೊಯ್ದಿತು. ಇದೊಂದು ಅಪಹರಣ ಕೃತ್ಯ ಎಂಬುದನ್ನು ಅರಿತ ಬ್ಯಾಂಕಿನ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.

ಸಿಸಿಬಿ ಇನ್ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ನೇತೃತ್ವದ ಪೊಲೀಸ್ ತಂಡ ತಕ್ಷಣ ಕಾರ್ಯಪ್ರವೃತ್ತವಾಯಿತು. ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸಹ ಧಾವಿಸಿ ಬಂದರು. ಅಪಹರಣಕ್ಕೆ ಬಳಸಿದ ರಿಕ್ಷಾ ತೆರಳಿರಬಹುದಾದ ದಿಕ್ಕನ್ನು ಅಂದಾಜಿಸುತ್ತ ಕಾರ್ಯಾಚರಣೆ ತೀವ್ರಗೊಳಿಸಲಾಯಿತು.

ಪಡೀಲ್ ವೀರಮಂಗಲದ ಅಂಗನವಾಡಿ ಸಮೀಪದ ಮನೆಯೊಂದರಲ್ಲಿ ಅಪಹರಣಕಾರರು ಅಧಿಕಾರಿಯನ್ನು ಕೂಡಿಹಾಕಿದ್ದಾರೆ ಎಂಬ ಖಚಿತ ಮಾಹಿತಿ ಲಭಿಸುತ್ತಿದ್ದಂತೆ ಆಯುಕ್ತ ಸಿಂಗ್ ಅವರು ಅದೇ ಸ್ಥಳ ತಲುಪಿದರು. ಅಲ್ಲಿ ತಿಲಕರಾಜ್ ಮತ್ತು ಮೂವರು ಆರೋಪಿಗಳು ಇದ್ದರು. ಜತೆಗೆ ಯುವತಿ, ರಿಕ್ಷಾ ಚಾಲಕ ಮತ್ತು ಇನ್ನೊಬ್ಬರು ಸಹ ಇದ್ದರು.

ಅವರೆಲ್ಲರನ್ನೂ ತಕ್ಷಣ ಗ್ರಾಮಾಂತರ ಠಾಣೆಗೆ ಕರೆತರಲಾಯಿತು. ಅಲ್ಲಿ ವಿಚಾರಿಸಿದಾಗ ಇದೊಂದು ಪ್ರೇಮ ಪ್ರಕರಣ ಎಂಬ ವಿಚಾರ ಬೆಳಕಿಗೆ ಬಂದಿತು. ಯುವತಿಯನ್ನು ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ತಿಲಕರಾಜ್ ಮದುವೆಯಾಗುವುದಿಲ್ಲ ಎಂದಿದ್ದರು. ಇದರಿಂದ ಸಿಟ್ಟಿಗೆದ್ದ ಯುವತಿಯ ಅಣ್ಣಂದಿರೇ ತಿಲಕರಾಜ್ ಅವರನ್ನು ಮದುವೆಗೆ ಬಲವಂತವಾಗಿ ಒಪ್ಪಿಸಲು ಅಪಹರಣ ಕೃತ್ಯ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸಂಧಾನ, ಮನವೊಲಿಕೆ ಮಾರ್ಗ ಬಿಟ್ಟು ಬಲಪ್ರಯೋಗಿಸಿ ಕರೆದೊಯ್ದ ಈ ಘಟನೆಯನ್ನು ಕದ್ರಿ ಪೊಲೀಸರು `ಅಪಹರಣ~ ಎಂದೇ ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೀಪಕ್, ಉದಯ್ ಮತ್ತು ಪ್ರವೀಣ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ತಪ್ಪು ಸಂದೇಶ ಹೋಗುತ್ತಿತ್ತು: `ಅಪಹರಣದ ಸುದ್ದಿ ಸಿಗುತ್ತಿದ್ದಂತೆಯೇ ನಾವು ಎಚ್ಚೆತ್ತೆವು. ತಕ್ಷಣ ಈ ಪ್ರಕರಣ ಬಗೆಹರಿಸದಿದ್ದರೆ ಹಲವು ತಿರುವು ಸಿಗುವುದು ನಿಶ್ಚಿತ ಎಂಬುದು ಗೊತ್ತಿತ್ತು. ಅಲ್ಲದೆ, ಅಪಹರಣಕಾರರು ತಿಲಕರಾಜ್ ಅವರನ್ನು ಕರೆದೊಯ್ದಿದ್ದು ಒಂದು ಸಮುದಾಯ ಬಹುಸಂಖ್ಯೆಯಲ್ಲಿರುವ ಪ್ರದೇಶಕ್ಕೆ ಎಂಬ ವಿಚಾರ ತಿಳಿದಾಗ ಆತಂಕ ಹೆಚ್ಚಿತ್ತು.

ಆದರೆ 45 ನಿಮಿಷದೊಳಗೆ ಅಪಹರಣ ಪ್ರಕರಣ ಕೊನೆಗೊಂಡಿತು~ ಎಂದು ಸೀಮಾಂತ್ ಕುಮಾರ್ ಸಿಂಗ್ ಸೋಮವಾರ ಸಂಜೆ `ಪ್ರಜಾವಾಣಿ~ಗೆ ತಿಳಿಸಿದರು.ನಗರದ ಹಲವೆಡೆ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಒಂದಿಲ್ಲೊಂದು ರೀತಿಯಲ್ಲಿ ಪೊಲೀಸರ ಕಾರ್ಯಾಚರಣೆಗೆ ನೆರವಿಗೆ ಬರುತ್ತಿವೆ. ಅಪಹರಣ ಸಹಿತ ದುಷ್ಕರ್ಮಿಗಳ ಚಲನವಲನದ ಸೂಕ್ಷ್ಮ ಮಾಹಿತಿ ತಿಳಿಯಲೂ ನೂತನ ತಂತ್ರಜ್ಞಾನದಿಂದ ಸಾಧ್ಯವಾಗಿದೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.