ಸೋಮವಾರ, ಮೇ 17, 2021
28 °C

ಫಲಭರಿತ ಮಾವು ತುಂಬಿದ ತೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಗಿರಿ:  ತಾಲ್ಲೂಕಿನ ದೇವರಹಳ್ಳಿ ಗ್ರಾಮದಲ್ಲಿರುವ ಜವಾಹರ್ ನವೋದಯ ವಿದ್ಯಾಲಯದ ತೋಟದಲ್ಲಿ ಮಾವು, ಹಲಸಿನ ಮರಗಳಲ್ಲಿ ಗೊಂಚಲು, ಗೊಂಚಲು ಹಣ್ಣು ಬಿಟ್ಟು ಕಂಗೊಳಿಸುತ್ತಿವೆ.2004 ರಲ್ಲಿ ಈ ವಿದ್ಯಾಲಯದಲ್ಲಿ ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ನೆಡಲಾಗಿತ್ತು.100 ಮಾವು, 75 ಹಲಸು, 25 ನೇರಳೆ ಹಾಗೂ 25 ಸಸಿ ಬೆಟ್ಟದ ನೆಲ್ಲಿಕಾಯಿ ಸಸಿಗಳನ್ನು ಹಾಕಲಾಗಿತ್ತು. ಇದರ ಜತೆಗೆ ತೇಗ, ಬೇವು ಮುಂತಾದ 2000 ಕ್ಕಿಂತ ಹೆಚ್ಚು ಸಸಿಗಳನ್ನು ನೆಡಲಾಗಿತ್ತು. ಅಂದರೆ ಈ ವಿದ್ಯಾಲಯದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ತಲಾ ಒಂದು ಸಸಿ ನೆಟ್ಟು ಪಾಲನೆ ಫೋಷಣೆ ಮಾಡುವ ಜವಾಬ್ದಾರಿಯನ್ನು ನೀಡಲಾಗಿರುತ್ತದೆ. ಈ ತೋಟದಲ್ಲಿ ಸಂಪೂರ್ಣವಾಗಿ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಕೊಳ್ಳಲಾಗಿದೆ. ಇದುವರೆಗೂ ಯಾವುದೇ

ರಾಸಾಯನಿಕಗಳನ್ನು ಬಳಸಿರುವುದಿಲ್ಲ.ಈಗ ಮಾವು ಹಾಗೂ ಹಲಸು ಹಣ್ಣು ಬಿಡಲು ಆರಂಭಿಸಿವೆ. ಇದುವರೆಗೆ 500 ಕೆ.ಜಿಗಿಂತಲೂ ಹೆಚ್ಚು ಮಾವಿನ ಹಣ್ಣುಗಳು ಬಿಟ್ಟಿವೆ. ಈ ಎಲ್ಲಾ ಮಾವಿನ ಹಣ್ಣುಗಳನ್ನು ಹಣ್ಣು ಮಾಡಿ, ನಂತರ ವಿದ್ಯಾಲಯದಲ್ಲಿರುವ 480 ವಿದ್ಯಾರ್ಥಿಗಳಿಗೆ ತಿನ್ನಲು ವಿತರಣೆ ಮಾಡಲಾಗಿದೆ.ಅದೇ ರೀತಿ ಹಲಸಿನ ಹಣ್ಣನ್ನು ಕೂಡ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಮತ್ತೆ ಈ ಬಾರಿ ಸಪೋಟ, ತೆಂಗು, ಮಾವು, ನಿಂಬೆ, ನೆಲ್ಲಿ ಸಸಿಗಳನ್ನು ಅರಣ್ಯ ಇಲಾಖೆಯವರ ಸಹಯೋಗದೊಂದಿಗೆ ಬೆಳೆಸಲು ತೀರ್ಮಾನಿಸಲಾಗಿದೆ.ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸುವುದು ಹೇಗೆ ಎಂಬುದನ್ನು ಪ್ರಾತ್ಯಕ್ಷಿತೆಯ ಮೂಲಕ ತೋರಿಸಲಾಗುತ್ತದೆ. ಈ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆಲ್ಲಾ ಪ್ರಾಂಶುಪಾಲ ಹಾಗೂ ಸಿಬ್ಬಂದಿ ಸಹಕಾರವೇ ಕಾರಣವಾಗಿದೆ. ಒಟ್ಟಾರೆ ಹಲವಾರು ಜಾತಿಯ ಸಸಿಗಳನ್ನು ಬೆಳೆಸಿ ವಿದ್ಯಾಲಯದಲ್ಲಿ ಉತ್ತಮ ಪರಿಸರವನ್ನು ರೂಪಿಸಲಾಗಿದೆ ಎನ್ನುತ್ತಾರೆ ವಿಜ್ಞಾನ ಶಿಕ್ಷಕ ಎ.ರವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.