ಬುಧವಾರ, ಮೇ 12, 2021
19 °C

ಫಲಾನುಭವಿಗಳಿಗೆ ಕುರಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾಳಕೊಪ್ಪ: ತಾಲ್ಲೂಕಿನ ಗಡಿಗ್ರಾಮ ಶಿರಿಹಳ್ಳಿಯಲ್ಲಿ ಬುಧವಾರ ಸುಜಲಾ ಯೋಜನೆ ಅಡಿಯಲ್ಲಿ ಜಿ.ಪಂ. ಸದಸ್ಯ ದಾನಿ ರುದ್ರಪ್ಪ ಕುರಿಗಳನ್ನು ವಿತರಿಸಿದರು.ಪ.ಜಾ., ಪ.ಪಂ. ಸೇರಿದ ಜನರು ಆರ್ಥಿಕವಾಗಿ ಸದೃಢರಾಗಲು, ಸ್ವಾವಲಂಬನೆಯಿಂದ ಸ್ವಾಭಿಮಾನದ ಬದುಕು ಸಾಗಿಸಲು ಈ ಯೋಜನೆ ಸಹಕಾರಿ ಆಗಿದೆ ಎಂದ ಅವರು, ಕುರಿ ಮಾರಾಟ ಮಾಡಬಾರದು ಎಂದು ವಿನಂತಿಸಿದರು.ಬಿಳಿಕಿ ಉಪ ಜಲಾನಯನ ವಿಭಾಗದಲ್ಲಿ ಪ.ಜಾತಿ., ಪ.ಪಂಗಡಗಳಿಗೆ ಸೇರಿದ 32 ಫಲಾನುಭವಿಗಳಿಗೆ, ಆದಾಯ ಉತ್ಪನ್ನಗಳಾಗಿ ತಲಾ 6 ಕುರಿ ನೀಡಲಾಯಿತು. ಫಲಾನುಭವಿಗಳಿಂದ ರೂ 6,386 ಮತ್ತು ಸರ್ಕಾರದ ರೂ 19,159 ಅನುದಾನದಲ್ಲಿ ಒಟ್ಟು ರೂ 25,545 ಮೊತ್ತದ, 5 ಹೆಣ್ಣು ಕುರಿ, 1 ಗಂಡು ಕುರಿ ವಿತರಿಸಲಾಯಿತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.