ನವದೆಹಲಿ (ಪಿಟಿಐ): ಒಲಿಂಪಿಕ್ಸ್ ಒಳಗೊಂಡಂತೆ ಅಂತರರಾಷ್ಟ್ರೀಯ ಕೂಟಗಳಲ್ಲಿ ಭಾರತದ ಅಥ್ಲೀಟ್ಗಳು ಯಶಸ್ಸು ಸಾಧಿಸದೇ ಇರುವುದು ನಿರಾಸೆಯ ವಿಚಾರ ಎಂದಿರುವ ಮಿಲ್ಖಾ ಸಿಂಗ್, `ಉತ್ತಮ ಫಲಿತಾಂಶ ನೀಡಬಲ್ಲಂತಹ ಕೋಚ್ಗಳನ್ನು ನೇಮಿಸುವುದು ಅಗತ್ಯ' ಎಂದಿದ್ದಾರೆ.

`ಶ್ರೇಷ್ಠ ಫಲಿತಾಂಶ ತಂದುಕೊಡಬಲ್ಲಂತಹ ಕೋಚ್ಗಳನ್ನು ನಾವು ಹುಡುಕಬೇಕು. ಮಾತ್ರವಲ್ಲ, ಗುತ್ತಿಗೆ ಆಧಾರದಲ್ಲಿ ಕೋಚ್ಗಳನ್ನು ನೇಮಿಸಿ ಅವರಿಗೆ ಒಂದು ನಿರ್ದಿಷ್ಟ ಗುರಿಯನ್ನು ನೀಡಬೇಕು' ಎಂದು ಗುರುವಾರ ಇಲ್ಲಿ ಹೇಳಿದ್ದಾರೆ.

`ಒಲಿಂಪಿಕ್ಸ್ನಲ್ಲಿ ಪದಕ ಗೆದ್ದುಕೊಡಬಲ್ಲಂತಹ ಅಥ್ಲೀಟ್ಗಳು ನಮಗೆ ಬೇಕು. ಒಬ್ಬ ಉಸೇನ್ ಬೋಲ್ಟ್ ಜಮೈಕಾ ಎಂಬ ಪುಟ್ಟ ರಾಷ್ಟ್ರದ ಕೀರ್ತಿಯನ್ನು ಜಗತ್ತಿನ ಎಲ್ಲೆಡೆ ಪಸರಿಸುವಂತೆ ಮಾಡಿದ್ದಾನೆ. 1960 ರ ಬಳಿಕ ಭಾರತ ಮತ್ತೊಬ್ಬ ಮಿಲ್ಖಾ ಸಿಂಗ್ಅನ್ನು ಬೆಳೆಸಿಲ್ಲ ಏಕೆ? ಶತಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ ಇನ್ನೊಬ್ಬಳು ಪಿ.ಟಿ. ಉಷಾ ಬಂದಿಲ್ಲ ಏಕೆ?' ಎಂದು `ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್ ನುಡಿದಿದ್ದಾರೆ.

ತನ್ನ ಜೀವನವನ್ನು ಆಧರಿಸಿ ನಿರ್ಮಿಸಿರುವ `ಬಾಗ್ ಮಿಲ್ಖಾ ಬಾಗ್' ಸಿನಿಮಾ ಯಶಸ್ವಿಯಾಗಿ ಪ್ರದರ್ಶಗೊಳ್ಳುತ್ತಿರುವುದು 77 ವರ್ಷ ವಯಸ್ಸಿನ ಮಿಲ್ಖಾ ಅವರಿಗೆ ಸಂತಸ ಉಂಟುಮಾಡಿದೆ. ಅಮೆರಿಕ ಕಂಡಂತಹ ಶ್ರೇಷ್ಠ ಅಥ್ಲೀಟ್ ಕಾರ್ಲ್ ಲೂಯಿಸ್ ಈ ಸಿನಿಮಾ ಕುರಿತು ಮಾತನಾಡಲು ಕರೆ ಮಾಡಿದ್ದರಲ್ಲದೆ, ಅಭಿನಂದನೆಯನ್ನೂ ಸಲ್ಲಿಸಿದರು ಎಂದು ಮಿಲ್ಖಾ ಇದೇ ವೇಳೆ ತಿಳಿಸಿದರು.

`1956ರ ಮೆಲ್ಬರ್ನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ಮರಳಿದ ಬಳಿಕ ನಾನು ಕೋಚ್ ಅವರನ್ನುದ್ದೇಶಿಸಿ, 400 ಮೀ. ಓಟದಲ್ಲಿ ವಿಶ್ವದಾಖಲೆಯ ಸಮಯ ಯಾವುದು ಎಂದು ಕೇಳಿದೆ. ಅದಕ್ಕೆ ಅವರು 45.9 ಸೆಕೆಂಡ್ ಎಂದು ಉತ್ತರಿಸಿದರು. ಆ ಬಳಿಕ ನಿರಂತರ ಅಭ್ಯಾಸ ನಡೆಸಿದೆ. ನಾನು ಟ್ರ್ಯಾಕ್ನಲ್ಲಿ ಸುರಿಸಿದ ಬೆವರಿಗೆ ಲೆಕ್ಕವಿಲ್ಲ. ಅತಿಯಾದ ಅಭ್ಯಾಸದಿಂದ ಕೆಲವೊಮ್ಮೆ ಮೂತ್ರದ ಜೊತೆ ರಕ್ತವೂ ಬರುತ್ತಿತ್ತು'
-ಮಿಲ್ಖಾ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.