ಫಾರ್ಮುಲಾ ಕಾರ್ ಕಸರತ್ತು

ಭಾನುವಾರ, ಮೇ 26, 2019
32 °C

ಫಾರ್ಮುಲಾ ಕಾರ್ ಕಸರತ್ತು

Published:
Updated:

ಫಾರ್ಮುಲಾ ಒನ್ ಕಾರ್ ನೋಡುವುದೇ ಒಂದ ಕೌತುಕ. ಅದರಲ್ಲೂ ಕಣ್ಣು ಮಿಟಕಿಸುವುದರೊಳಗಾಗಿ ಮಿಂಚಿ ಮರೆಯಾಗುವ ಆ ದೃಶ್ಯ ಮೈನವಿರೇಳಿಸುವಂತದ್ದು. ಇಂಥದ್ದೊಂದು ಸನ್ನಿವೇಶಕ್ಕೆ ಇದೀಗ ಬೆಂಗಳೂರು ಸಾಕ್ಷಿಯಾಗಲಿದೆ.

 

ವೊಡಾಫೋನ್ ಮಕ್‌ಲರ್ನ್ ಮರ್ಸಿಡಿಸ್ ಕಾರ್ ಬೆಂಗಳೂರಿನ ನೈಸ್ ರಸ್ತೆಯಲ್ಲಿ ಚಲಿಸಲಿದೆ.ಈಗಾಗಲೇ ಮಂತ್ರಿ ಮಾಲ್‌ನಲ್ಲಿ ಕಾರಿನ ಪ್ರತಿಕೃತಿಯನ್ನು ಅನೇಕರು ನೋಡಿರಬಹುದು.ಆದರೆ ಅದರ ನೈಜ ರೂಪ, ಹೂಂಕರಿಸುತ್ತಾ ಸಾಗುವ ಧೈತ್ಯ ಓಟ ನೋಡಬೇಕೆಂದರೆ ಸೆ. 27ರಂದು ಬೆಳಿಗ್ಗೆ 10.30ಕ್ಕೆ ನೈಸ್ ರಸ್ತೆ ಬಳಿ ಬರಬೇಕಷ್ಟೇ. ಆದರೆ ಇದಕ್ಕಾಗಿ 56300 ಸಂಖ್ಯೆಗೆ  LEWIS ಎಂದು ಎಸ್‌ಎಂಎಸ್ ಕಳುಹಿಸಿದರೆ ಕೆಲವೇ ಕ್ಷಣಗಳಲ್ಲಿ ಮರು ಸಂದೇಶ ರೂಪದಲ್ಲಿ ಮೊಬೈಲ್ ಪ್ರವೇಶ ಪತ್ರ ಲಭಿಸುತ್ತದೆ. ನೆನಪಿರಲಿ ಎರಡೂವರೆ ಸಾವಿರ ಮಂದಿಗೆ ಮಾತ್ರ ಇಲ್ಲಿ ಪ್ರವೇಶ.ಮಕ್‌ಲರ್ನ್ ಮರ್ಸಿಡಿಸ್ ಫಾರ್ಮುಲಾ ಒನ್ ಕಾರನ್ನು ಚಾಲನೆ ಮಾಡುವವರು ಈಗಾಗಲೇ ಚಾಂಪಿಯನ್ ಆಗಿರುವ ಲೆವಿಸ್ ಹಾಮಿಲ್ಟನ್ ಅವರು. ಬೆಂಗಳೂರಿನ ರಸ್ತೆಯಲ್ಲಿ ಹಾಮಿಲ್ಟನ್ ಚಾಲನೆ ಮಾಡಲಿರುವ ಆ ರೋಚಕ ಕ್ಷಣಕ್ಕೆ ನೀವೂ ಸಾಕ್ಷಿಯಾಗಬಹುದು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry