ಹೊಸಕೋಟೆ: ನಂದಗುಡಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿನ ಅಕ್ರಮ ಫಿಲ್ಟರ್ ಮರಳು ತಯಾರಿಕಾ ಘಟಕಗಳ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.

ಪೊಲೀಸರ ನೆರವಿನೊಂದಿಗೆ ಮೂರು ತಂಡಗಳಲ್ಲಿ ಕೊರಠಿ, ಬೈಲನರಸಾಪುರ, ಹೆತ್ತಕ್ಕಿ, ಮಾರ್ಚಾಂಡಹಳ್ಳಿ, ವಡ್ಡಹಳ್ಳಿ, ಸಿದ್ಧನಹಳ್ಳಿ, ಕೆ.ಶೆಟ್ಟಿಹಳ್ಳಿ, ನೆಲವಾಗಿಲು, ಹೆಡಕನಹಳ್ಳಿ, ಕೊಂಡ್ರಹಳ್ಳಿ, ಅಗಸರಹಳ್ಳಿ, ಸತ್ತಿಗಾನಹಳ್ಳಿ, ಓಬಳಹಳ್ಳಿ ಮತ್ತು ದೊಡ್ಡರಾಮನಹಳ್ಳಿಯಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಾಚರಣೆ ನಡೆಯಿತು.

ಈ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಅಕ್ರಮ ಮರಳು ತಯಾರಿಕಾ ವಡ್ಡುಗಳನ್ನು ನಾಶಪಡಿಸಲಾಯಿತು. 10ಕ್ಕೂ ಹೆಚ್ಚು ಡೀಸೆಲ್ ಎಂಜಿನ್ನಂತಹ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಯಿತು.

ತಹಶೀಲ್ದಾರ್ ಬಿ.ಮಲ್ಲಿಕಾರ್ಜುನ, ರಾಜಸ್ವ ನಿರೀಕ್ಷಕ ರಾಮಕೃಷ್ಣ, ಲೋಕೋಪಯೋಗಿ ಇಲಾಖೆ ಅಧಿಕಾರಿ ಗುರುರಾಜ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ನಂದಗುಡಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.