ಬುಧವಾರ, ಜೂನ್ 23, 2021
22 °C

ಫುಟ್‌ಬಾಲ್‌: ಭಾರತದ ಬಾಲಕಿಯರಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲಂಬೊ (ಐಎಎನ್‌ಎಸ್‌): ಸುಮನಾ ಮಹಾಪಾತ್ರ ಬಾರಿಸಿದ ಮೂರು ಗೋಲುಗಳ ಸಹಾಯದಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ಎಎಫ್‌ಸಿ 14 ವರ್ಷದೊಳಗಿನ ಬಾಲಕಿಯರ ಪ್ರಾದೇಶಿಕ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಗೆಲುವು ಕಂಡಿದೆ.ಇಲ್ಲಿನ ಸಿಟಿ ಫುಟ್‌ಬಾಲ್‌ ಸಂಕೀರ್ಣದಲ್ಲಿ ಗುರುವಾರ ನಡೆದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ 7–1 ಗೋಲುಗಳಿಂದ ಆತಿಥೇಯ ಶ್ರೀಲಂಕಾ ತಂಡವನ್ನು ಮಣಿಸಿತು.ಹಾಕಿ: ಕರ್ನಾಟಕ ತಂಡಕ್ಕೆ ಗೆಲುವು

ಭೋಪಾಲ್‌ (ಪಿಟಿಐ): ಕರ್ನಾಟಕ ಮಹಿಳಾ ತಂಡದವರು ಭೋಪಾಲ್‌ನಲ್ಲಿ ನಡೆಯುತ್ತಿರುವ 4ನೇ ಹಾಕಿ ಇಂಡಿಯಾ ರಾಷ್ಟ್ರೀಯ ಸೀನಿಯರ್‌ ಮಹಿಳಾ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.ಗುರುವಾರ ನಡೆದ ‘ಡಿ’ ಗುಂಪಿನ ಪಂದ್ಯದಲ್ಲಿ ಕರ್ನಾಟಕ 5–2 ಗೋಲುಗಳಿಂದ ಕೇರಳ ತಂಡವನ್ನು ಸೋಲಿಸಿತು.ಕರ್ನಾಟಕದ ಪರ ಪಿ.ಜಿ.ಮುತ್ತಮ್ಮ (32ನೇ ನಿ), ಕೆ.ಆರ್‌.ಟೀನಾ (34 ನಿ), ಎಸ್‌.ಪಿ.ಕಾವ್ಯಶ್ರೀ (40ನಿ), ಎ.ಕೆ.ರಂಜಿತಾ (49ನಿ) ಹಾಗೂ ಬಿ.ಪಿ.ನಂದಿನಿ (51ನಿ) ತಲಾ ಒಂದು ಗೋಲು ಬಾರಿಸಿ ತಂಡಕ್ಕೆ ಗೆಲುವು ತಂದಿತ್ತರು.ಸೆಮಿಗೆ ರೈಲ್ವೇಸ್‌, ಹರಿಯಾಣ: ರೈಲ್ವೇಸ್‌ ಮತ್ತು ಹರಿಯಾಣ  ತಂಡಗಳು ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.