ಶುಕ್ರವಾರ, ಜೂನ್ 18, 2021
22 °C

ಫುಟ್‌ಬಾಲ್‌: ಸೆಮಿಗೆ ರಾಜೀವ್‌ ಐಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಹಾಸನದ ರಾಜೀವ್‌ ಐಟಿ ತಂಡ ಇಲ್ಲಿ  ಬುಧವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಧ್ಯಕರ್ನಾಟಕ ಅಂತರಕಾಲೇಜು ಫುಟ್‌ಬಾಲ್‌ ಟೂರ್ನಿಯಲ್ಲಿ  ಸೆಮಿಫೈನಲ್‌ ಪ್ರವೇಶಿಸಿತು.ಬಿಐಇಟಿ  ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜೀವ್‌ ಐಟಿ ತಂಡ ಚಿಕ್ಕಮಗಳೂರಿನ ಎಐಟಿ ಕಾಲೇಜು ತಂಡವನ್ನು 6–5ಗೋಲುಗಳಿಂದ ಮಣಿಸಿತು. ಶಿವಮೊಗ್ಗದ ಐಎನ್‌ಎನ್‌ಸಿಇ ತಂಡ ದಾವಣಗೆರೆಯ ಬಿಐಇಟಿ ತಂಡವನ್ನು 1–0ಗೋಲಿನಿಂದ ಸೋಲಿಸಿ ನಾಲ್ಕರ ಘಟ್ಟ ಪ್ರವೇಶಿಸಿತು.ಯುಬಿಡಿಟಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಯುಬಿಡಿಟಿ ತಂಡ ತುಮಕೂರಿನ ಗುಬ್ಬಿ ತಂಡವನ್ನು 3–1 ಗೋಲುಗಳಿಂದ ಮಣಿಸಿ ಸೆಮಿಫೈನಲ್‌ ಪ್ರವೇಶಿಸಿತು. ಯುಬಿಡಿಟಿ ತಂಡದ ಪರ ಮಿಕ್ಕಿಂ 2 ಹಾಗೂ ಸಚಿನ್‌ 1 ಗೋಲು ಗಳಿಸಿದರು. ಗುಬ್ಬಿ ತಂಡದ ಪರ ರೋಬಿನ್ 1 ಗೋಲು ಗಳಿಸಿದರು.ತುಮಕೂರಿನ ಎಸ್‌ಐಟಿ ತಂಡ ಶಿವಮೊಗ್ಗದ ಪಿಎಸ್ಇಟಿ ತಂಡವನ್ನು 2–0ಗೋಲುಗಳಿಂದ ಮಣಿಸಿ ಮುನ್ನಡೆ ಸಾಧಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.