ಗುರುವಾರ , ಏಪ್ರಿಲ್ 15, 2021
23 °C

ಫುಟ್‌ಬಾಲ್: ಕೆಜಿಎಫ್ ಅಕಾಡೆಮಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಕೆಜಿಎಫ್ ಸ್ಪೋರ್ಟ್ಸ್ ಅಕಾಡೆಮಿ ತಂಡದವರು ಇಲ್ಲಿ ನಡೆಯುತ್ತಿರುವ ಸೂಪರ್ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಭಾನುವಾರದ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಅಶೋಕ ನಗರದಲ್ಲಿರುವ ಬಿಡಿಎಫ್‌ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೆಜಿಎಫ್ ಅಕಾಡೆಮಿ 2-0 ಗೋಲುಗಳಿಂದ ಹಾಲಿ ಚಾಂಪಿಯನ್ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (ಎಂಇಜಿ) ತಂಡವನ್ನು ಸೋಲಿಸಿತು.ವಿಜಯಿ ತಂಡದ ಅಮೋಸ್ ಕೆಜಿಎಫ್ ತಂಡದ ಗೆಲುವಿನ ರೂವಾರಿ ಎನಿಸಿದರು. ಈ ಆಟಗಾರ 24 ಹಾಗೂ 30ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿದರು. 22ನೇ ನಿಮಿಷದಲ್ಲಿ ಅಮೋಸ್‌ಗೆ ಗೋಲು ಗಳಿಸಲು ಅವಕಾಶವಿತ್ತು. ಆದರೆ, ಎದುರಾಳಿ ತಂಡದ ರಕ್ಷಣಾ ವಿಭಾಗ ಇದಕ್ಕೆ ಅವಕಾಶ ನೀಡಲಿಲ್ಲ. ಮಧು             ಕಿರಣ್ ನೀಡಿದ ಪಾಸ್‌ನ ನೆರವು    ಪಡೆದು ಅಮೋಸ್ ಎರಡನೆ ಗೋಲು ಗಳಿಸಿದರು.ಆರು ಪಂದ್ಯಗಳನ್ನಾಡಿರುವ ಕೆಜಿಎಫ್ ಒಟ್ಟು 13 ಪಾಯಿಂಟ್ಸ್ ಕಲೆ ಹಾಕಿ ಪಾಯಿಂಟ್ ಪಟ್ಟಿಯಲ್ಲಿ ಎರಡನೆ ಸ್ಥಾನದಲ್ಲಿದೆ. ಒಂಬತ್ತು ಪಂದ್ಯಗಳಿಂದ 20 ಪಾಯಿಂಟ್ಸ್ ಹೊಂದಿರುವ ಹಿಂದೂಸ್ತಾನ್ ಏರೋನಾಟಿಕ್ ಸ್ಪೋರ್ಟ್ಸ್ ಕ್ಲಬ್ (ಎಚ್‌ಎಎಸ್‌ಸಿ) ಅಗ್ರಸ್ಥಾನ ಹೊಂದಿದೆ. ಆದರೆ, ಎಂಇಜಿ ಆರು ಪಂದ್ಯಗಳನ್ನಾಡಿ 10 ಪಾಯಿಂಟ್ಸ್ ಮಾತ್ರ ಗಳಿಸಿದೆ.`ಎ~ ಡಿವಿಷನ್ ವಿಭಾಗದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಹಾಗೂ ಆರ್‌ಡಬ್ಲ್ಯುಎಫ್ ತಂಡಗಳ ನಡುವಿನ ಪಂದ್ಯವು ಗೋಲು ರಹಿತವಾಗಿ ಡ್ರಾದಲ್ಲಿ ಅಂತ್ಯ ಕಂಡಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.