ಬುಧವಾರ, ಜನವರಿ 29, 2020
27 °C

ಫುಟ್‌ಬಾಲ್: ಕ್ವಾರ್ಟರ್‌ ಫೈನಲ್‌ಗೆ ಗಜಾನನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀಗಜಾನನ ತಂಡ ಬಿಯುಎಫ್‌ಸಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಗದೀಶ್ವರಾಚಾರ್‌ ಸ್ಮಾರಕ ಫುಟ್‌ಬಾಲ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಗಜಾನನ 3–1 ಗೋಲುಗಳಿಂದ ಮಿನರ್ವ ಎದುರು ಗೆಲುವು ಸಾಧಿಸಿತು.ಸೂರನ್‌ 36 ಮತ್ತು 40ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ವಿಕ್ರಮ್‌ 39ನೇ ನಿಮಿಷದಲ್ಲಿ ಗೋಲು ತಂದಿತ್ತು ಗೆಲುವಿನ ರೂವಾರಿ ಎನಿಸಿದರು. ಮಿನರ್ವ ತಂಡದ ಏಕೈಕ ಗೋಲನ್ನು ಕಿಶೋರ್ ಗಳಿಸಿ ಸೋಲಿನ ಅಂತರ ತಗ್ಗಿಸಿದರು. ಜುಪಿಟರ್‌ ತಂಡದ ಎದುರು ವಾಕ್‌ ಓವರ್‌ ಪಡೆದ ಧರ್ಮರಾಜ್‌ ಯೂನಿಯನ್‌ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿತು.

ಪ್ರತಿಕ್ರಿಯಿಸಿ (+)