ಶುಕ್ರವಾರ, ಮೇ 7, 2021
20 °C

ಫುಟ್‌ಬಾಲ್: ಬೆಂಗಳೂರು ರೆಡ್ಸ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಬೆಂಗಳೂರು ರೆಡ್ಸ್ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ `ಸಿ' ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಭಾನುವಾರ 10-0 ಗೋಲುಗಳಿಂದ ಯಂಗ್ ಬ್ಲೂಸ್ ಎದುರು ಗೆಲುವು ಸಾಧಿಸಿತು.ಅಶೋಕನಗರದಲ್ಲಿರುವ ರಾಜ್ಯ ಫುಟ್‌ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಚಂದ್ರಶೇಖರ (12, 28ನೇ ನಿಮಿಷ), ರೈನಾಲ್ಡ್ (17 ಹಾಗೂ 35ನೇ ನಿ.), ರಾಹುಲ್ (19ನೇ ನಿ.), ಶರತ್ (24, 26,34 ಮತ್ತು 79) ಹಾಗೂ ಆಕಾಶ್ (57ನೇ ನಿ.) ಗೋಲು ಗಳಿಸಿದರು.ದಿನದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಈಗಲ್ಸ್ ತಂಡ 2-0ಗೋಲುಗಳಿಂದ ಮಹಮ್ಮಡನ್ ಸ್ಪೋರ್ಟಿಂಗ್ ಎದುರು ಗೆಲುವಿನ ನಗೆ ಬೀರಿತು. ಸಿ. ಸುನಿಲ್ (14ನೇ ನಿಮಿಷ) ಮತ್ತು ಪಿ. ಡೇವಿಡ್ (29ನೇ ನಿ.) ಗೋಲು ಕಲೆ ಹಾಕಿದರು. ಸೋಮವಾರ ಪಂದ್ಯಗಳು ನಡೆಯುವುದಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.