ಬುಧವಾರ, ಮೇ 18, 2022
25 °C

ಫೆ. 9ರಿಂದ ಜನಗಣತಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಫೆ.9ರಿಂದ 28ರವರೆಗೆ ಗದಗ ಜಿಲ್ಲೆಯಾದ್ಯಂತ ಜನಗಣತಿ-2011 ನಡೆಯಲಿದೆ.‘ಗಣತಿ ಕಾರ್ಯಕ್ಕಾಗಿ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ 1919 ಸಿಬ್ಬಂದಿಯನ್ನು ಗಣತಿದಾರರನ್ನಾಗಿ ನೇಮಕ ಮಾಡಲಾಗಿದೆ. ಇವರಲ್ಲಿ 175 ಮಂದಿ ಕಾಯ್ದಿರಿಸಿದ ಗಣತಿದಾರರಾಗಿದ್ದಾರೆ. 314 ಮೇಲ್ವಿಚಾರಕರನ್ನು ನೇಮಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.‘ಫೆ.9 ರಿಂದ 28ರವರೆಗೆ ಜನಗಣತಿ ನಡೆಯಲಿದೆ. 28ರ ಮಧ್ಯರಾತ್ರಿ ವಸತಿ ರಹಿತ ಜನರ ಗಣತಿ ಮಾಡಲಾಗುತ್ತದೆ. ಮತ್ತೆ ಮಾರ್ಚ್ 1ರಿಂದ 5ರವರೆಗೆ ಪುನರ್ ಸಂದರ್ಶನ ಮಾಡಲಾಗುತ್ತದೆ. ಈ ಸಮಯದಲ್ಲಿ ಗಣತಿಗೆ ಒಳಪಡದೆ ಇರುವ ವ್ಯಕ್ತಿಗಳ, ಜನನ-ಮರಣಗಳನ್ನು ಗಣನೆಗೆ ತಗೆದುಕೊಂಡು ಗಣತಿ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.‘ಜನಗಣತಿ ಕಾರ್ಯಾಚರಣೆಗಾಗಿ ಗ್ರಾಮೀಣ ಭಾಗದಲ್ಲಿ-5, ಶಹರ ಭಾಗದಲ್ಲಿ -13 ಜನಗಣತಿ ಚಾರ್ಚ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಅಲ್ಲದೆ 1910 ಜನಸಂಖ್ಯಾ ಬ್ಲಾಕುಗಳನ್ನು ರಚಿಸಲಾಗಿದೆ. 18 ಚಾರ್ಚ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಗಣತಿಯು ಸುಗಮ ಹಾಗೂ ವ್ಯವಸ್ಥಿತವಾಗಿ ನಡೆಯಲು ಪ್ರತಿ ತಾಲ್ಲೂಕಿಗೆ ಒಬ್ಬರಂತೆ 5 ಜನ ಜಿಲ್ಲಾಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.‘ಪ್ರತಿಯೊಬ್ಬ ಗಣತಿದಾರರಿಗೆ 800 ಮಂದಿ ಅಥವಾ 200 ಕುಟುಂಬಗಳನ್ನು ಗಣತಿ ಮಾಡುವಂತೆ ಸೂಚನೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ಸಿಬ್ಬಂದಿ ಬೆಳಿಗ್ಗೆ ಹಾಗೂ ಸಂಜೆ ಯಾವುದಾದರೂ ಒಂದು ಸಮಯದಲ್ಲಿ ನಿಗದಿತ ಮನೆಗಳಿಗೆ ಹೋಗಿ ಗಣತಿ ಮಾಡಲಿದ್ದಾರೆ.ಗಣತಿದಾರರು ಜನಗಣತಿ ನಿರ್ದೇಶನಾಲಯದಿಂದ ಅಧಿಕೃತವಾಗಿ ಕೊಟ್ಟಿರುವ ಬ್ಯಾಡ್ಜ್ ಧರಿಸಿರುತ್ತಾರೆ. ಅಂತಹವರಿಗೆ ಮಾತ್ರ ಜನರು ಸಮರ್ಪಕ ಮಾಹಿತಿ ನೀಡಬೇಕು ಎಂದು ತಿಳಿಸಿದರು.ಗಣತಿ ಕಾರ್ಯದ ಬಗ್ಗೆ ಅನುಮಾನ, ದೂರು ಇದ್ದರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆಯಲಾಗಿರುವ ಸಹಾಯವಾಣಿ ದೂ: 08372-232413 ಸಂಪರ್ಕಿಸಬಹುದು’ ಎಂದು ಎಸ್.ಶಂಕರನಾರಾಯಣ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಿಇಓ ವೀರಣ್ಣ ಜಿ.ತುರಮರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಟಿ. ರುದ್ರೇಗೌಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.