ಫೇಸ್‌ಬುಕ್‌ನ ನಿಗೂಢ ನಡೆ!

7

ಫೇಸ್‌ಬುಕ್‌ನ ನಿಗೂಢ ನಡೆ!

Published:
Updated:
ಫೇಸ್‌ಬುಕ್‌ನ ನಿಗೂಢ ನಡೆ!

ಜನಪ್ರಿಯತೆಯ ಉತ್ತುಂಗದಲ್ಲಿರುವ ಸಾಮಾಜಿಕ ಜಾಲ ತಾಣ `ಫೇಸ್‌ಬುಕ್~ ಇತ್ತೀಚೆಗೆ ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದೆ.`ಡಾರ್ಕ್ ಪ್ರೊಫೈಲ್~ (Dark Profiles) ಅರ್ಥಾತ್ ಬಳಕೆದಾರರ `ರಹಸ್ಯ ಖಾತೆ~ ಸೃಷ್ಟಿಸುವುದು ಈ ನಿಗೂಢ ಯೋಜನೆ. `ಡಾರ್ಕ್ ಪ್ರೊಫೈಲ್ ಎಂದರೆ ಇಲ್ಲಿ  `ವ್ಯಕ್ತಿ ಚಿತ್ರ~  ಗುಪ್ತವಾಗಿರುತ್ತದೆ.

 

ಉದಾಹರಣೆಗೆ ಸ್ವಿಸ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದವರ ವಿವರಗಳು ಹೇಗೆ ರಹಸ್ಯ ವಾಗಿರುತ್ತದೆಯೋ ಹಾಗೆಯೇ ಇಲ್ಲಿ ಕೂಡ `ವ್ಯಕ್ತಿಚಿತ್ರ~ ನಿಗೂಢವಾಗಿರುತ್ತದೆ!

ಇನ್ನೂ   ವಿಶೇಷವೆಂದರೆ, ಇಂತಹ ಖಾತೆಗಳಿಗೆ ಬಳಕೆದಾರರ ಲಾಗಿನ್ ಆಗುವ ಅಗತ್ಯ ಕೂಡ ಇಲ್ಲ. ಕಂಪೆನಿಯೇ ಇದನ್ನು ನಿರ್ವಹಿಸುತ್ತದೆ. ಫೇಸ್‌ಬುಕ್‌ನಿಂದ ನಿವೃತ್ತಿಯಾದ ಉದ್ಯೋಗಿಯೊಬ್ಬರು ಇತ್ತೀಚೆಗೆ ಬರೆದಿರುವ ಪುಸ್ತಕದಲ್ಲಿ `ಡಾರ್ಕ್ ಪ್ರೊಫೈಲ್~ ಪರಿಕಲ್ಪನೆ ಬಹಿರಂಗಪಡಿಸಿದ್ದಾರೆ.ಈ ಪುಸ್ತಕದ ಹೆಸರು `ದ ಬಾಯ್ ಕಿಂಗ್ಸ್; ಎ ಜರ್ನಿ ಇನ್ ಟು ದ  ಹಾರ್ಟ್ ಆಫ್ ಸೋಷಿಯಲ್ ನೆಟ್‌ವರ್ಕ್~. ಲೇಖಕಿ `ಕ್ಯಾಥರಿನ್ ಲ್ಯೂಸ್~.2005ರಿಂದ 2010ರವರೆಗೆ `ಫೇಸ್‌ಬುಕ್~ನ ಗ್ರಾಹಕ ವ್ಯವಹಾರಗಳ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕ್ಯಾಥರಿನ್, ಕೆಲಕಾಲ ಮಾರ್ಕ್ ಜುಕರ್‌ಬರ್ಗ್ ಅವರಿಗೆ ಭಾಷಣ ಬರೆದುಕೊಡುವ `ಸ್ಪೀಚ್ ರೈಟರ್~ ಆಗಿಯೂ  ಕೆಲಸ ಮಾಡಿದವರು. ಸದ್ಯ ಅವರ ಪುಸ್ತಕ `ಫೇಸ್‌ಬುಕ್~ಗಿಂತಲೂ ಹೆಚ್ಚು ಸುದ್ದಿ ಮಾಡುತ್ತಿದೆ.ಪರದೆ ಮೇಲೆ ಕಾಣಿಸಿಕೊಳ್ಳದೆ, ತೆರೆಮರೆಯಲ್ಲಿ ಇದ್ದುಕೊಂಡೇ ಸಾಮಾಜಿಕ ಜಾಲ ತಾಣಗಳ ಚಟುವಟಿಕೆಗಳಲ್ಲಿ ಭಾಗವಹಿಸಲು ಇಷ್ಟಪಡುವವರಿಗಾಗಿ ಇಂತಹ `ಷಾಡೊ ಪೇಜ್~ (shadow pa­ges)  ಸಿದ್ಧಪಡಿಸಲು  `ಫೇಸ್‌ಬುಕ್~ ಎಂಜಿನಿಯರ್‌ಗಳ ತಂಡ ಶ್ರಮಿಸುತ್ತಿದೆ. ಇಂತಹ ರಹಸ್ಯ ಖಾತೆಗಳನ್ನು ಹೊಂದಿರುವ ವ್ಯಕ್ತಿಗಳು ಇತರೆ ಬಳಕೆದಾರರಂತೆಯೇ ಗೋಡೆ ಮೇಲೆ ಗೀಚಬಹುದು.ಚಿತ್ರ, ಸಂಗೀತ, ದೃಶ್ಯ ತುಣುಕುಗಳನ್ನು ಅಪ್‌ಲೋಡ್ ಮಾಡಬಹುದು. ಕ್ಷಣ ಕ್ಷಣದಲ್ಲಿ ತಮಗೆ ಏನು ಅನಿಸುತ್ತಿದೆಯೋ ಅದನ್ನೆಲ್ಲಾ ಬರೆದುಕೊಳ್ಳಬಹುದು. ಆದರೆ, ಇಂತಹ ಪ್ರೊಫೈಲ್‌ಗಳು ಮಾತ್ರ ರಹಸ್ಯವಾಗಿರುತ್ತವೆ. `ನೀರಿನಲ್ಲಿ ಮೀನಿನ ಹೆಜ್ಜೆ ಗುರುತು ಹುಡುಕಿದಂತೆ~ ಇತರೆ ಬಳಕೆದಾರರಿಗೆ ಇವರು ಸದಾ ಅನಾಮಿಕರಾಗಿಯೇ ಇರುತ್ತಾರೆ ಎನ್ನುತ್ತಾರೆ ಕ್ಯಾಥರಿನ್.`ಫೇಸ್‌ಬುಕ್~ನ ಇಂತಹ `ರಹಸ್ಯ~ ನಡೆಗಳು ಒಂದೆರಡಲ್ಲ. 2007ರಲ್ಲಿ  ಸಂಸ್ಥೆಯ ತಂತ್ರಜ್ಞರ ತಂಡ `ಜಡ್ಜ್ ಬಾಕ್ಸ್~ (Judgebox) ಎನ್ನುವ ಪ್ರೋಗ್ರಾಂ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಈ ಪ್ರೊಗ್ರಾಂ ಬಳಸಿ ಮಹಿಳೆಯರ ಧ್ವನಿ ಅನುಕರಿಸಬಹುದಿತ್ತು ಮತ್ತು ಅವರ ಲೈಂಗಿಕ ಸಾಮರ್ಥ್ಯದ ಕುರಿತು ರೇಟಿಂಗ್ ನೀಡಬಹುದಿತ್ತು!ಫೇಸ್‌ಬುಕ್ ಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹಾರ್ವಡ್‌ನಲ್ಲಿದ್ದಾಗ ಅಭಿವೃದ್ಧಿಪಡಿಸಿದ್ದ `ಫೇಸ್‌ಮಾಷ್~ (Facemash)  ಎನ್ನುವ ಅಪ್ಲಿಕೇಷನ್‌ನಂತೆಯೇ (hot or not)ಇದು ಕೂಡ ರಹಸ್ಯ ಕಾರ್ಯಾಚರಣೆ ಉದ್ದೇಶ ಹೊಂದಿತ್ತು ಎನ್ನುತ್ತಾರೆ ಲೇಖಕಿ.ಆರಂಭದಲ್ಲಿ ಫೇಸ್‌ಬುಕ್ ತನ್ನ ಸಿಬ್ಬಂದಿಗಾಗಿಯೇ `ಸ್ಟಾಕರ್~ (Fac­e­book Stalker)  ಎನ್ನುವ ಪ್ರೊಗ್ರಾಂ ಅಭಿವೃದ್ಧಿಪಡಿಸಿತ್ತು. ಈ ಪ್ರೊಗ್ರಾಂ ಬಳಸಿ, ಸಿಬ್ಬಂದಿಗಳು ತಮ್ಮ ಖಾತೆಗೆ ಭೇಟಿ ನೀಡಿದ ಇತರೆ ಬಳಕೆದಾರರ ಮಾಹಿತಿಗಳನ್ನು ಪಡೆಯಬಹುದಿತ್ತು ಮತ್ತು ಮೂರನೇ ವ್ಯಕ್ತಿಯ ಖಾತೆಗಳ ಮೇಲೆ ನಿಗಾ ಇಡಬಹುದಿತ್ತು. ಈ ನಿಗೂಢ ಕಾರ್ಯಾಚರಣೆ ಬಗ್ಗೆ `ಡೈಲಿ ಮೇಲ್~ ವರದಿ ಮಾಡಿತ್ತು.ಫೇಸ್‌ಬುಕ್ ಆರಂಭದಲ್ಲಿ ತನ್ನ ಬಳಕೆದಾರರಿಗೆ `ಮಾಸ್ಟರ್ ಪಾಸ್‌ವರ್ಡ್~ ನೀಡುತ್ತಿತ್ತು. ಇದು ಎಷ್ಟು ದುರ್ಬಲವಾಗಿತ್ತು ಎಂದರೆ, ಇದಕ್ಕೆ ಯಾವುದೇ ಭದ್ರತೆ ಇರಲಿಲ್ಲ. ಸ್ವಲ್ಪ ಗಣಕ ಜ್ಞಾನ ಇದ್ದ ಯಾರು ಬೇಕಾದರೂ ಸುಲಭವಾಗಿ ಇದನ್ನು ಹ್ಯಾಕ್ ಮಾಡಬಹುದಿತ್ತು ಎನ್ನುವ ಕ್ಯಾಥರಿನ್, `ಡಾರ್ಕ್  ಪ್ರೊಫೈಲ್~ ಸೃಷ್ಟಿಸುವ ಯತ್ನ 2006ರಲ್ಲೇ ನಡೆದಿತ್ತು ಎನ್ನುತ್ತಾರೆ.ಇತ್ತೀಚೆಗೆ ತನ್ನ 90 ಕೋಟಿಗೂ ಹೆಚ್ಚಿನ ಬಳಕೆದಾರರು ಫೇಸ್‌ಬುಕ್ ಇ-ಮೇಲ್ ಖಾತೆಯನ್ನೇ ಹೊಂದಬೇಕು  ಎಂದು ಹೇಳಿ ತೀವ್ರ ಮುಜುಗರಕ್ಕೆ ಒಳಗಾಗಿದ್ದ ಈ ಸಾಮಾಜಿಕ ಜಾಲ ತಾಣ, ಈಗ ಕ್ಯಾಥರಿನ್ ಆರೋಪವನ್ನೂ ಮೈಮೇಲೆ ಎಳೆದುಕೊಂಡಿದೆ. ಸಾಮಾಜಿಕ ಜಾಲ ತಾಣಗಳ ನಿಗೂಢ ನಡೆ ಬಲ್ಲವರ‌್ಯಾರು?

    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry