ಫೇಸ್ಲೆಸ್ ಫೇಸ್ಬುಕ್- ಹೀಗೆಂದು ತಮ್ಮ ಚಿತ್ರ `12 ಎಎಂ~ ಅನ್ನು ಬಣ್ಣಿಸಿದ್ದು ಯುವ ನಿರ್ದೇಶಕ ಕಾರ್ತೀಕ್. ವಿಶ್ಲೇಷಣೆ ವಿಚಿತ್ರವಾಗಿದೆಯಲ್ಲ ಎನ್ನುವ ಪ್ರಶ್ನೆಗೆ ಅವರು ನೀಡಿದ ಉತ್ತರ- `ನಮ್ಮ ಚಿತ್ರದಲ್ಲಿ ಇರುವ ಬಹುತೇಕರು ಹೊಸಬರು. ಅವರ ಮುಖಗಳಿಗೆ ತಾರಾ ವರ್ಚಸ್ಸಿಲ್ಲ. ಆ ಕಾರಣದಿಂದಲೇ ನಮ್ಮ ಸಿನಿಮಾ ಫೇಸ್ಲೆಸ್ ಫೇಸ್ಬುಕ್~.

`12 ಎಎಂ~ ಸಿನಿಮಾದ ಕಥೆಯ ಗುಟ್ಟು ಬಿಟ್ಟುಕೊಡಲು ಒಪ್ಪದ ಕಾರ್ತೀಕ್, ಎಲ್ಲವನ್ನೂ ತೆರೆಯೇ ಮೇಲೆಯೇ ನೋಡಿ ಎಂದರು. ಕಾಶಿನಾಥ್ ಗರಡಿಯಲ್ಲಿ ಪಳಗಿರುವ ಅವರು, ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಶಿಷ್ಯನ ಮೇಲಿನ ಪ್ರೀತಿಯಿಂದ ಕಾಶಿನಾಥ್ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವುದು ಚಿತ್ರದ ವಿಶೇಷಗಳಲ್ಲೊಂದು. ಈ ವಿಷಯವನ್ನು ಹೆಮ್ಮೆಯಿಂದ ತಿಳಿಸಿದ ಕಾಶಿ, `ಚಿತ್ರದಲ್ಲಿ ತಾವೆಲ್ಲೂ ಹಸ್ತಕ್ಷೇಪ ಮಾಡಿಲ್ಲ~ ಎಂದರು.

ಅಂದಹಾಗೆ, `12 ಎಎಂ~ ಕಾಶಿನಾಥ್ರ ಪರಿಕಲ್ಪನೆಯಾದ `ನಿರ್ಮಾಪಕರ ತರಬೇತಿ ಸಂಸ್ಥೆ~ಯಡಿ ಸಿದ್ಧವಾಗುತ್ತಿದೆ. ಚಿತ್ರದ ಮೂಲಕ ವಿಜಯಕುಮಾರ್ ಎನ್ನುವ ಹೊಸ ನಿರ್ಮಾಪಕರು ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ.

ನಿರ್ಮಾಪಕರಿಗೆ ಸಿನಿಮಾ ನಿರ್ಮಾಣದ ಗುಟ್ಟುಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡುವುದು ಈ ಸಂಸ್ಥೆಯ ಉದ್ದೇಶವಂತೆ. ಕಾಶಿನಾಥ್ರ ಸಲಹೆಗಳಿಂದ `12 ಎಎಂ~ ನಿರ್ಮಾಣದಲ್ಲಿ ಸುಮಾರು ಶೇ. 20ರಷ್ಟು ಮಿಗಿತಾಯ ಸಾಧ್ಯವಾಗಬಹುದು ಎನ್ನುವುದು ನಿರ್ಮಾಪಕರ ಅಂದಾಜು.

ಸಲಹೆ-ತರಬೇತಿಯ ಜೊತೆಗೆ ಪುಟ್ಟ ಪಾತ್ರವೊಂದರಲ್ಲಿ ಕಾಶಿನಾಥ್ ನಟಿಸುತ್ತಿದ್ದಾರೆ. ಅವರ ಪುತ್ರ ಅಭಿಮನ್ಯು ಚಿತ್ರದ ನಾಯಕ. `ಬಾಜಿ~ ಚಿತ್ರದಲ್ಲಿ ನಿರ್ಮಾಪಕರ ಸಂಖ್ಯಾಶಾಸ್ತ್ರದ ನಂಬಿಕೆಯ ಮೇರೆಗೆ ಅಲೋಕ್ ಎಂದು ಹೆಸರು ಬದಲಿಸಿಕೊಂಡಿದ್ದ ಅಭಿಮನ್ಯು, ಇದೀಗ ಮೂಲ ಹೆಸರಿಗೆ ಮರಳಿದ್ದಾರೆ. `ಹೆಸರು ಬದಲಿಸಿಕೊಳ್ಳುವುದು ಮುಜುಗರದ ಸಂಗತಿ~ ಎನ್ನುವುದು ಅವರ ಅನುಭವ. ಅಭಿಗೆ ನಾಯಕಿಯಾಗಿ ದಿವ್ಯಾ ಶ್ರೀಧರ್ ನಟಿಸುತ್ತಿದ್ದಾರೆ.

ಚಿತ್ರದಲ್ಲಿ ಅಭಿ-ದಿವ್ಯಾ ಅವರದ್ದು ಕಾಲೇಜು ವಿದ್ಯಾರ್ಥಿಗಳ ಪಾತ್ರ. `ಹಾಗಿದ್ದರೆ ಲವ್ವ-ಸಾವು ಇರಲೇಬೇಕಲ್ಲವಾ? ಚಿತ್ರದ ಶೀರ್ಷಿಕೆ `12 ಎಎಂ~ನೊಂದಿಗೆ ಮಧ್ಯರಾತ್ರಿ ಎನ್ನುವ ವಿಶೇಷಣ ಬೇರೆ ಇದೆ...~ ಎಂದು ಪತ್ರಕರ್ತರು ಎಷ್ಟು ಕೆಣಕಿದರೂ ಹೊಸ ಜೋಡಿ ಬಾಯಿಬಿಡಲಿಲ್ಲ. ಯಾಕೆಂದರೆ ಚಿತ್ರದ ಕಥೆಯನ್ನು ನಿರ್ದೇಶಕರು ಪೂರ್ಣವಾಗಿ ಹೇಳಿಲ್ಲವಂತೆ. ವಿ.ಮನೋಹರ್ ಸಂಗೀತ ನೀಡಿರುವ ಈ ಚಿತ್ರದಲ್ಲಿ ಹಾಡುಗಳಿಲ್ಲ. ಹಾಗಾಗಿ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭವೂ ಇಲ್ಲ.

ಅದರ ಬದಲಿಗೆ ಪ್ರಚಾರ ಸಾಮಗ್ರಿಗಳ ಬಿಡುಗಡೆ ಮಾಡಿದರೆ ಹೇಗೆ ಎಂದು ಕಾಶಿನಾಥ್ರಿಗೆ ಅನ್ನಿಸಿದೆ. ಅದರ ಫಲವಾಗಿ, ಚಿತ್ರತಂಡ ಪ್ರಚಾರದ ಪೋಸ್ಟರ್ಗಳನ್ನು ಬಿಡುಗಡೆ ಮಾಡಿತು. ಈ ಪೋಸ್ಟರ್ಗಳನ್ನು ರಾಜ್ಯದ ಎಲ್ಲ ಭಾಗಗಳಲ್ಲೂ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.