ಬೆಂಗಳೂರು: ಕರ್ನಾಟಕದ ಬಿ.ಆರ್. ನಿಕ್ಷೇಪ್ ಮತ್ತು ರಶ್ಮಿಕಾ ರಾಜನ್ ಇಲ್ಲಿ ನಡೆಯುತ್ತಿರುವ ಕೆಟಿಟಿಪಿಎ, ಎಂ.ಪಿ. ಪ್ರಕಾಶ್ ಸ್ಮಾರಕ ಎಐಟಿಎ ಟೆನಿಸ್ ಚಾಂಪಿಯನ್ಷಿಪ್ನ 18 ವರ್ಷದೊಳಗಿನವರ ಬಾಲಕ ಹಾಗೂ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಫೈನಲ್ ಪ್ರವೇಶಿಸಿದರು. ಶ್ರೇಯಾಂಕ ರಹಿತ ಆಟಗಾರ್ತಿ ರಶ್ಮಿಕಾ 16 ವರ್ಷದೊಳಗಿನವರ ವಿಭಾಗದಲ್ಲೂ ಅಂತಿಮ ಘಟ್ಟ ತಲುಪಿದರು.

ಟಾಪ್ಸ್ಪಿನ್ ಟೆನಿಸ್ ಅಕಾಡೆಮಿ ಕೋರ್ಟ್ನಲ್ಲಿ ಗುರುವಾರ ನಡೆದ ಸೆಮಿಫೈನಲ್ನಲ್ಲಿ ನಿಕ್ಷೇಪ್ 7-5, 6-3ರಲ್ಲಿ ತಮಿಳುನಾಡಿನ ಅಖಿಲ್ ಕನಕರಾಜ್ ಅವರನ್ನು ಮಣಿಸಿದರು. ಮೊದಲ ಸೆಟ್ನಲ್ಲಿ ಆತಿಥೇಯ ಆಟಗಾರನಿಗೆ ಪ್ರತಿರೋಧ ವ್ಯಕ್ತವಾಯಿತು. ಆದರೆ ಎರಡನೇ ಸೆಟ್ನಲ್ಲಿ ಸುಲಭವಾಗಿ ಗೆಲುವು ಲಭಿಸಿತು.

ನಿಕ್ಷೇಪ್ ಫೈನಲ್ನಲ್ಲಿ ತಮ್ಮದೇ ರಾಜ್ಯದವರಾದ ವಶಿಷ್ಠ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್ನಲ್ಲಿ ವಶಿಷ್ಟ 6-4, 6-1ರಲ್ಲಿ ಮೂರನೇ ಶ್ರೇಯಾಂಕದ ಆಟಗಾರ ತಮಿಳುನಾಡಿನ ಐ.ಬಿ.ಅಕ್ಷಯ್ ಅವರನ್ನು ಸೋಲಿಸಿದರು.

16 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಮಹಾರಾಷ್ಟ್ರದ ಆದಿತ್ಯ ಅನಂತ್ ಗೋಖಲೆ ಹಾಗೂ ನಿಹಿತ್ ರಾವಲ್ ಅಂತಿಮ ಘಟ್ಟ ಪ್ರವೇಶಿಸಿದರು. ಆದಿತ್ಯ 6-4, 6-3ರಲ್ಲಿ ತಮಿಳುನಾಡಿನ ಪ್ರಣಾಶ್ ಬಾಬು ಎದುರೂ, ನಿಹಿತ್ 2-6, 6-3, 7-5ರಲ್ಲಿ ಆಂಧ್ರಪ್ರದೇಶದ ಮೊಹಮ್ಮದ್ ತಾಕುದ್ದೀನ್ ವಿರುದ್ಧವೂ ಜಯ ಗಳಿಸಿದರು.

18 ವರ್ಷದೊಳಗಿನವರ ಬಾಲಕಿಯರ ವಿಭಾಗದ ನಾಲ್ಕರ ಘಟ್ಟದ ಪಂದ್ಯದಲ್ಲಿ ರಶ್ಮಿಕಾ ಅಮೋಘ ಪ್ರದರ್ಶನದ ಮೂಲಕ ಗಮನ ಸೆಳೆದರು. ಅವರು 6-4, 7-6ರಲ್ಲಿ ಎರಡನೇ ಶ್ರೇಯಾಂಕದ ಆಂಧ್ರಪ್ರದೇಶದ ಮೌಲಿಕಾ ರೆಡ್ಡಿ ಅವರಿಗೆ ಆಘಾತ ನೀಡಿದರು.

13 ವರ್ಷ ವಯಸ್ಸಿನ ರಶ್ಮಿಕಾ ಫೈನಲ್ನಲ್ಲಿ ತಮಿಳುನಾಡಿನ ಪ್ರಗತಿ ನಟರಾಜನ್ ಅವರನ್ನು ಎದುರಿಸಲಿದ್ದಾರೆ. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪ್ರಗತಿ 6-4, 3-6, 7-6ರಲ್ಲಿ ಕರ್ನಾಟಕದ ನಿಶಾ ಶೆಣೈ ಅವರನ್ನು ಸೋಲಿಸಿದರು.

ರಶ್ಮಿಕಾ 16 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್ನಲ್ಲಿ 6-1, 6-3ರಲ್ಲಿ ಆರುಷಿ ಅವರನ್ನು ಮಣಿಸಿದರು. ಈ ಪಂದ್ಯದ ವೇಳೆ ಅವರು ಕಾಲಿಗೆ ಪೆಟ್ಟು ಮಾಡಿಕೊಂಡರು.

ಆದರೆ ಆ ನೋವಿನಿಂದ ಚೇತರಿಸಿಕೊಂಡು ಕಣಕ್ಕಿಳಿದ ರಶ್ಮಿಕಾ ಪಂದ್ಯ ತಮ್ಮದಾಗಿಸಿಕೊಂಡರು. ಅವರು ಈ ವಿಭಾಗದ ಫೈನಲ್ನಲ್ಲಿ ಅಭಿನಿಕಾ ಅವರನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.