ಶನಿವಾರ, ಜೂನ್ 19, 2021
28 °C

ಫೈನಲ್‌ಗೆ ಶಿವ, ವಿಕಾಸ್‌ಗೆ ಕಂಚು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಶಿವ ಥಾಪಾ ಅವರು ಜೆಕ್ ಗಣರಾಜ್ಯದ ಉಸ್ತಿ ನಾದ್ ಲಬೆಮ್‌ನಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಪ್ರಿ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಪುರುಷರ 56 ಕೆ.ಜಿ. ವಿಭಾಗದಲ್ಲಿ ಫೈನಲ್‌ಗೆ ಪ್ರವೇಶ ಪಡೆದಿದ್ದಾರೆ.

ಭಾರತದ ಇನ್ನೊಬ್ಬ ಬಾಕ್ಸರ್ ವಿಕಾಸ್ ಕೃಷ್ಣನ್ ಅವರು 69 ಕೆ.ಜಿ. ವಿಭಾಗದ ಸೆಮಿಫೈನಲ್‌ನಲ್ಲಿ ನಿರಾಸೆ ಹೊಂದಿ ಕಂಚಿನ ಪದಕಕ್ಕೆ ಸಮಾಧಾನಪಟ್ಟರು.ಮುಂದಿನ ತಿಂಗಳು ಕಜಕಿಸ್ತಾನದಲ್ಲಿ ನಡೆಯಲಿರುವ ಒಲಿಂಪಿಕ್ ಅರ್ಹತಾ ಚಾಂಪಿಯನ್‌ಷಿಪ್‌ಗೆ ಆಯ್ಕೆಯಾಗಿರುವ ಶಿವ ಅವರು ಶನಿವಾರ ನಡೆದ ಸೆಮಿಫೈನಲ್ ಕಾದಾಟದಲ್ಲಿ 9-5ರಲ್ಲಿ ಆತಿಥೇಯ ಜೆಕ್ ಗಣರಾಜ್ಯದ ಪ್ಯಾಟ್ರಿಕ್ ವೆಲ್ಕಿ ವಿರುದ್ಧ ವಿಜಯ ಸಾಧಿಸಿ, ಅಂತಿಮ ಹಣಾಹಣಿಗೆ ಸಜ್ಜಾದರು.ಶಿವಗೆ ಒಲಿದ ಫೈನಲ್ ಅದೃಷ್ಟ ವಿಕಾಸ್ ಅವರಿಗೂ ಒಲಿಯಲಿಲ್ಲ. ಅವರು 9-14ರಲ್ಲಿ ಕ್ಯೂಬಾದ ಡೆಪೈಗ್ನೊ ಅರಿಸ್ನೊಯಿಡ್ ಎದುರು ಪರಾಭವಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.