ಫೈನಲ್‌ನಲ್ಲಿ ಎಡವಿದ ಭಾರತ ಮಹಿಳೆಯರು

7

ಫೈನಲ್‌ನಲ್ಲಿ ಎಡವಿದ ಭಾರತ ಮಹಿಳೆಯರು

Published:
Updated:

ಪರ್ತ್ (ಪಿಟಿಐ): ಭಾರತ ಮಹಿಳಾ ಹಾಕಿ ತಂಡದವರು ಇಲ್ಲಿ ನಡೆದ ಲಾನ್ಸೊ ಅಂತರರಾಷ್ಟ್ರೀಯ ಸೂಪರ್ ಸರಣಿ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿಯ ಪದಕಕ್ಕೆ ತೃಪ್ತಿಪಟ್ಟುಕೊಂಡರು.ಭಾನುವಾರ ನಡೆದ ಫೈನಲ್‌ನಲ್ಲಿ ಭಾರತದ ವಿರುದ್ಧ 4-1 ಗೋಲುಗಳ ಗೆಲುವು ಪಡೆದ ಅತಿಥೇಯ ಆಸ್ಟ್ರೇಲಿಯ ಚಿನ್ನದ ಪದಕ ಗೆದ್ದುಕೊಂಡಿತು.ಸೌಂದರ್ಯ ಅವರು 9ನೇ ನಿಮಿಷದಲ್ಲಿ ತಂದಿತ್ತ ಗೋಲಿನ ನೆರವಿನಿಂದ ಭಾರತ ಮೇಲುಗೈ ಪಡೆಯಿತು. ಬಳಿಕ ತಿರುಗೇಟು ನೀಡಿದ ಆಸ್ಟ್ರೇಲಿಯಾ ಭರ್ಜರಿ ಜಯ ಗಳಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry