ಬುಧವಾರ, ಜೂನ್ 23, 2021
22 °C
ಏಷ್ಯಾಕಪ್‌ ಕ್ರಿಕೆಟ್‌: ಆಫ್ಘಾನಿಸ್ತಾನ ಎದುರು ಭರ್ಜರಿ ಗೆಲುವು

ಫೈನಲ್‌ ಪ್ರವೇಶಿಸಿದ ಶ್ರೀಲಂಕಾ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ):  ಆಫ್ಘಾನಿಸ್ತಾನ ಎದುರು 129 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ ತಂಡ ದವರು ಇಲ್ಲಿ ನಡೆಯುತ್ತಿರುವ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದಾರೆ.



ಷೇರ್‌ ಎ ಬಾಂಗ್ಲಾ ನ್ಯಾಷನಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿಂಹಳೀಯ ಪಡೆ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 253 ರನ್‌ ಗಳಿಸಿತು. ಸವಾಲಿನ ಗುರಿ ಎದುರು ಆಫ್ಘಾನಿಸ್ತಾನ 38.4 ಓವರ್‌ಗಳಲ್ಲಿ 124 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು.



ಸಂಗಕ್ಕಾರ ಆಸರೆ: ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಲಂಕಾ ತಂಡ ಲಾಹಿರು ತಿರಿಮಾನೆ ಅವರ ವಿಕೆಟ್‌ ಬೇಗನೇ ಕಳೆದುಕೊಂಡಿತು. ಆದರೆ ಕುಮಾರ ಸಂಗಕ್ಕಾರ ಅವರ ಎಚ್ಚರಿಕೆ ಆಟ ತಂಡಕ್ಕೆ ಆಸರೆಯಾಯಿತು. 102 ಎಸೆತ ಎದುರಿಸಿದ ಸಂಗಾ ಒಂದು ಸಿಕ್ಸರ್‌ ಹಾಗೂ ಆರು ಬೌಂಡರಿ ಸಮೇತ 76 ರನ್‌ ಗಳಿಸಿದರು. ನಾಯಕ ಏಂಜೆಲೊ ಮ್ಯಾಥ್ಯೂಸ್‌ ಬಿರುಸಿನ ಆಟದ ಮೂಲಕ ತಂಡದ ಮೊತ್ತವನ್ನು 250 ರನ್‌ಗಳ ಗಡಿ ಮುಟ್ಟಿಸಿದರು. ಅವರು 41 ಎಸೆತಗಳಲ್ಲಿ ಅಜೇಯ 45 ರನ್‌ ಗಳಿಸಿದರು.



ಆಫ್ಘಾನಿಸ್ತಾನ ಬೌಲರ್‌ಗಳು ಬಲಿಷ್ಠ ಲಂಕಾವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಶಾಪೂರ್‌ ಜದ್ರಾನ್‌ ಹಾಗೂ ಮಿರ್ವಾಯಿಸ್‌ ಅಶ್ರಫ್‌ ಎದುರಾಳಿ ಮೇಲೆ ಒತ್ತಡ ಹೇರಿದರು.



ಪ್ರಭಾವಿ ಬೌಲಿಂಗ್‌: ಬಾಂಗ್ಲಾದೇಶ ಎದುರು ಗೆಲುವು ಸಾಧಿಸಿದ್ದ ಖುಷಿಯಲ್ಲಿದ್ದ ಆಪ್ಘಾನಿಸ್ತಾನ ಈ ಬಾರಿ ಗುರಿ ಮುಟ್ಟುವಲ್ಲಿ ಎಡವಿತು. ಲಂಕಾದ ಪ್ರಭಾವಿ ಬೌಲಿಂಗ್‌ ದಾಳಿಗೆ ಸಿಲುಕಿದ ಈ ತಂಡ ಕ್ರಮೇಣ ವಿಕೆಟ್‌ ಕಳೆದುಕೊಳ್ಳುತ್ತಾ ಹೋಯಿತು. ನಾಯಕ ಮೊಹಮ್ಮದ್‌ ನಬಿ (37) ಈ ತಂಡದ ಗರಿಷ್ಠ ಸ್ಕೋರರ್‌.



ಲಂಕಾದ ಸುರಂಗ ಲಕ್ಮಲ್‌, ಚತುರಂಗ ಡಿಸಿಲ್ವಾ ತಲಾ ಎರಡು ವಿಕೆಟ್‌, ಅಜಂತ ಮೆಂಡಿಸ್‌ ಹಾಗೂ  ತಿಸ್ಸಾರ ಪೆರೇರಾ ತಲಾ ಮೂರು ವಿಕೆಟ್‌ ಕಬಳಿಸಿದರು. ಈ ಗೆಲುವಿನಿಂದ ಲಂಕಾ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.



ಸ್ಕೋರ್ ವಿವರ:

ಶ್ರೀಲಂಕಾ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 253


ಕುಶಾಲ್‌ ಪೆರೇರಾ ಬಿ ಮಿರ್ವಾಯಿಸ್‌ ಅಶ್ರಫ್‌  33

ಲಾಹಿರು ತಿರಿಮಾನೆ ಬಿ ಶಾಪೂರ್‌ ಜರ್ದಾನ್‌  05

ಕುಮಾರ ಸಂಗಕ್ಕಾರ ರನ್‌ಔಟ್‌ (ಜದ್ರಾನ್‌/ನಬಿ)  76

ಮಾಹೇಲ ಜಯವರ್ಧನೆ ಸಿ ಮೊಹಮ್ಮದ್‌ ನಬಿ ಬಿ ಮಿರ್‌ವಾಯಿಸ್‌ ಅಶ್ರಫ್‌  14

ದಿನೇಶ್‌ ಚಾಂಡಿಮಾಲ್‌ ಬಿ ಹಮ್ಜಾ ಹೋತಕ್‌  26

ಏಂಜೆಲೊ ಮ್ಯಾಥ್ಯೂಸ್‌ ಔಟಾಗದೆ  45

ಚತುರಂಗ ಡಿ ಸಿಲ್ವಾ ಸಿ ಮಿರ್ವಾಯಿಸ್‌ ಅಶ್ರಫ್‌ ಬಿ ದೌಲತ್‌ ಜದ್ರಾನ್‌  17

ತಿಸ್ಸಾರ ಪೆರೇರಾ ಔಟಾಗದೆ  19



ಇತರೆ (ಲೆಗ್‌ಬೈ–6, ವೈಡ್‌–6, ನೋಬಾಲ್‌–6)  18

ವಿಕೆಟ್ ಪತನ: 1–14 (ತಿರಿಮಾನೆ; 5.4); 2–50 (ಕುಶಾಲ್‌; 15.1); 3–83 (ಜಯವರ್ಧನೆ; 21.2); 4–157 (ಚಾಂಡಿಮಾಲ್‌; 36.5); 5–158 (ಸಂಗಕ್ಕಾರ; 37.2); 6–184 (ಡಿಸಿಲ್ವಾ; 41.5)

ಬೌಲಿಂಗ್‌: ನಜಿಬುಲ್ಲಾ ಜದ್ರಾನ್‌ 3–0–9–0, ಶಾಪೂರ್‌ ಜದ್ರಾನ್‌ 9–1–46–1 (ವೈಡ್‌–3), ದೌಲತ್‌ ಜದ್ರಾನ್‌ 9.2–0–60–1 (ನೋಬಾಲ್‌–2, ವೈಡ್‌–1), ಮಿರ್‌ವಾಯಿಸ್‌ ಅಶ್ರಫ್‌ 8–1–29–2, ಮೊಹಮ್ಮದ್‌ ನಬಿ 6.4–1–23–0, ಹಮ್ಜಾ ಹೋತಕ್‌ 7–1–43–1 (ವೈಡ್‌–1), ಸಮಿಯುಲ್ಲಾ ಶೆನ್ವಾರಿ 4–0–20–0, ನವ್ರೋಜ್‌ ಮಂಗಲ್‌ 3–0–17–0



ಆಫ್ಘಾನಿಸ್ತಾನ 38.4 ಓವರ್‌ಗಳಲ್ಲಿ 124

ಮೊಹಮ್ಮದ್‌ ಶಹ್ಜಾದ್‌ ಬಿ ಸುರಂಗ ಲಕ್ಮಲ್‌  07

ನೂರ್‌ ಅಲಿ ಜದ್ರಾನ್‌ ಸಿ ಚತುರಂಗ ಡಿಸಿಲ್ವಾ ಬಿ ಅಜಂತ ಮೆಂಡಿಸ್‌  21

ಅಸ್ಗರ್‌ ಸ್ಟಾನಿಕ್‌ಜಾಯಿ ಬಿ ತಿಸ್ಸಾರ ಪೆರೇರಾ  27

ನವ್ರೋಜ್‌ ಮಂಗಲ್‌ ಸಿ ಕುಮಾರ ಸಂಗಕ್ಕಾರ ಬಿ ತಿಸ್ಸಾರ ಪೆರೇರಾ  04

ಸಮಿಯುಲ್ಲಾ ಶೆನ್ವಾರಿ ಸಿ ತಿರಿಮಾನೆ ಬಿ ಸುರಂಗ ಲಕ್ಮಲ್‌  06

ಮೊಹಮ್ಮದ್‌ ನಬಿ ಎಲ್‌ಬಿಡಬ್ಲ್ಯು ಬಿ ಚತುರಂಗ ಡಿಸಿಲ್ವಾ  37

ನಜಿಬುಲ್ಲಾ ಜದ್ರಾನ್‌ ಸಿ ಏಂಜೆಲೊ ಮ್ಯಾಥ್ಯೂಸ್‌ ಬಿ ತಿಸ್ಸಾರ ಪೆರೇರಾ  11

ಮಿರ್ವಾಯಿಸ್‌ ಅಶ್ರಫ್‌ ಸಿ ತಿಸ್ಸಾರ ಪೆರೇರಾ ಬಿ ಚತುರಂಗ ಡಿಸಿಲ್ವಾ  01

ಹಮ್ಜಾ ಹೋತಕ್‌ ಎಲ್‌ಬಿಡಬ್ಲ್ಯು ಬಿ ಅಜಂತ ಮೆಂಡಿಸ್‌  01

ದೌಲತ್‌ ಜದ್ರಾನ್‌ ಬಿ ಅಜಂತ ಮೆಂಡಿಸ್‌  00

ಶಾಪೂರ್‌ ಜದ್ರಾನ್‌ ಔಟಾಗದೆ  00



ಇತರೆ (ಲೆಗ್‌ಬೈ–2, ವೈಡ್‌–7)  09

ವಿಕೆಟ್‌ ಪತನ: 1–8 (ಮೊಹಮ್ಮದ್‌ ಶೆಹ್ಜಾದ್‌; 1.4); 2–53 (ಅಸ್ಗರ್‌; 12.3); 3–59 (ನೂರ್‌ ಅಲಿ; 15.1); 4–61 (ನವ್ರೋಜ್‌; 16.1); 5–73 (ಸಮಿಯುಲ್ಲಾ; 20.2); 6–121 (ನಜುಬುಲ್ಲಾ; 31.3); 7–121 (ಎಂ.ನಬಿ; 32.3); 8–122 (ಹಮ್ಜಾ; 35.5); 9–124 (ಜದ್ರಾನ್‌; 37.6); 10–124 (ಮಿರ್‌ವಾಯಿಸ್‌; 38.4)

ಬೌಲಿಂಗ್‌: ಲಸಿತ್‌ ಮಾಲಿಂಗ 5–0–23–0 (ವೈಡ್‌–4), ಸುರಂಗ ಲಕ್ಮಲ್‌ 7–2–30–2, ತಿಸ್ಸಾರ ಪೆರೇರಾ 10–2–29–3, ಚತುರಂಗ ಡಿಸಿಲ್ವಾ 9.4–1–29–2, ಅಜಂತ 7–2–11–3 (ವೈಡ್‌–1)

ಫಲಿತಾಂಶ: ಶ್ರೀಲಂಕಾಕ್ಕೆ 129 ರನ್‌ ಗೆಲುವು ಹಾಗೂ ಫೈನಲ್‌ ಪ್ರವೇಶ. ಪಾಯಿಂಟ್‌: ಬೋನಸ್‌ ಸೇರಿ 5 ಪಾಯಿಂಟ್. ಪಂದ್ಯ ಶ್ರೇಷ್ಠ: ಕುಮಾರ ಸಂಗಕ್ಕಾರ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.