ಗುರುವಾರ , ಮೇ 6, 2021
27 °C

ಫೋರ್ಬ್ಸ್ ದಾನಿಗಳ ಪಟ್ಟಿಯಲ್ಲಿ ಪಿಎನ್‌ಸಿ ಮೆನನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶೋಭಾ ಡೆವಲಪರ್ಸ್‌ ಸಂಸ್ಥೆಯ ಚೇರ್‌ಮನ್ ಎಮಿರೇಟ್ಸ್ ಆಗಿರುವ ಪಿಎನ್‌ಸಿ ಮೆನನ್ ಅವರು ಫೋರ್ಬ್ಸ್ ಏಷ್ಯ ನಿಯತಕಾಲಿಕೆ ರೂಪಿಸಿರುವ `ಹೀರೋಸ್ ಆಫ್ ಫಿಲಾಂತರಪಿ' ದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಈ ಪಟ್ಟಿಯಲ್ಲಿ ಭಾರತ, ಚೀನಾ , ಸಿಂಗಾಪುರ, ಹಾಂಗ್‌ಕಾಂಗ್, ಇಂಡೋನೇಷ್ಯ ಸೇರಿದಂತೆ ವಿವಿಧ ರಾಷ್ಟ್ರಗಳ 48 ಮಂದಿ ಪ್ರಮುಖರ ಹೆಸರುಗಳು ಸೇರಿವೆ. ಮೆನನ್ ಅಲ್ಲದೆ ಕಿರಣ್ ಮುಜುಂದಾರ್ ಷಾ, ವಿನೀತ್ ನಾಯರ್, ರಾನಿ ಸ್ಕ್ರೂವಾಲಾ ಸೇರಿದ್ದಾರೆ.ಮೆನನ್ ಅವರು ಕುರುಂಬಾ ಟ್ರಸ್ಟ್ ರೂಪಿಸಿದ್ದ `ಗ್ರಾಮಶೋಭಾ' ಹೆಸರಿನ ವಿಭಿನ್ನ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮದಡಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ವಡ್ಡಕ್ಕೆಚೆರಿ ಮತ್ತು ಕಿಜಾಕ್ಕೆಚರಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 2,500 ಬಿಪಿಎಲ್ ಕುಟುಂಬಗಳನ್ನು ದತ್ತು ಪಡೆದು 2020ರ ಒಳಗೆ ಸಂಪೂರ್ಣ ಅಭಿವೃದ್ಧಿಪಡಿಸುವ ಕಾರ್ಯ ಕೈಗೊಂಡಿದ್ದಾರೆ.ಅರ್ಹ ಬಡ ಕುಟುಂಬಗಳ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಗೆ ಒತ್ತು ನೀಡುವುದು, ಶಿಕ್ಷಣ ,ಆರೋಗ್ಯ, ಉದ್ಯೋಗ, ನೀರು, ಒಳಚರಂಡಿ, ವಸತಿ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.