ಫ್ಯಾಷನ್ ಡಿಸೈನ್: ಪ್ರಗ್ಯಾನ್ಗೆ ಪ್ರಶಸ್ತಿ

ಹೊಲಿಗೆ ಯಂತ್ರಗಳಿಗೆ `ಉಷಾ~ ಹೆಸರುವಾಸಿ. ಅದು ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಫ್ಯಾಷನ್ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ಫ್ಯಾಷನ್ ಉಡುಪು ವಿನ್ಯಾಸ ಸ್ಪರ್ಧೆ ನಡೆಸಿ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿದೆ.
ಈ ವರ್ಷದ ಉಷಾ ನಿಫ್ಟ್ `ಬೆಸ್ಟ್ ಕನ್ಸ್ಟ್ರಕ್ಟೆಡ್ ಡಿಸೈನ್ ಕಲೆಕ್ಷನ್~ ಪ್ರಶಸ್ತಿಗೆ ಪಾತ್ರರಾದವರು ಬೆಂಗಳೂರು ನಿಫ್ಟ್ ವಿದ್ಯಾರ್ಥಿ ಪ್ರಗ್ಯಾನ್ ಹೈದರ್. ಅವರಿಗೆ 10 ಸಾವಿರ ರೂ ನಗದು, ಉಷಾ ಜನೋಮ್ ಸ್ವಯಂಚಾಲಿತ ಹೊಲಿಗೆ ಯಂತ್ರ, ಟ್ರೋಫಿ ಮತ್ತು ಪ್ರಮಾಣಪತ್ರವನ್ನು ಉಷಾ ಇಂಟರ್ನ್ಯಾಷನಲ್ನ ... ಪ್ರದಾನ ಮಾಡಿದರು.
1936ರಿಂದ ಅಸ್ತಿತ್ವದಲ್ಲಿರುವ ಉಷಾ, ಜಪಾನ್ ತಂತ್ರಜ್ಞಾನದ `ಜನೋಮ್ ಆಟೋಮೇಟಿಕ್ ಜಿಗ್ಜ್ಯಾಗ್ ಮತ್ತು ಕಂಪ್ಯೂಟರೈಸ್ಡ್ ಕಸೂತಿ ಯಂತ್ರ~ಗಳು, ಸ್ಟ್ರೈಟ್ ಸ್ಟ್ರಿಚ್ ಮತ್ತು ಕೈಗಾರಿಕಾ ಹೊಲಿಗೆ ಯಂತ್ರಗಳನ್ನು ಪೂರೈಸುತ್ತಿದೆ. ನಿಫ್ಟ್ ಜತೆಗೂಡಿ ಪ್ರತಿಭಾಶಾಲಿ ವಿನ್ಯಾಸಕರನ್ನು ಪ್ರೋತ್ಸಾಹಿಸಲು ಉಷಾ ನಿಫ್ಟ್ ಬೆಸ್ಟ್ ಕನ್ಸ್ಟ್ರಕ್ಟಡ್ ಡಿಸೈನ್ ಕಲೆಕ್ಷನ್ ಪ್ರಶಸ್ತಿಯನ್ನು 1998ರಲ್ಲಿ ಸ್ಥಾಪಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.