ಫ್ರಾನ್ಸ್ ಮಾದರಿಯಿಂದ ದೇಶದ ಪ್ರಗತಿ

ಶುಕ್ರವಾರ, ಮೇ 24, 2019
30 °C

ಫ್ರಾನ್ಸ್ ಮಾದರಿಯಿಂದ ದೇಶದ ಪ್ರಗತಿ

Published:
Updated:

ಸಂಡೂರು: ದೇಶದ ಸಂಸದೀಯ ವ್ಯವಸ್ಥೆಯ ಬದಲಾಗಿ ಫ್ರಾನ್ಸ್ ಮಾದರಿ ಅಧ್ಯಕ್ಷೀಯ ಸರ್ಕಾರ ಜಾರಿಗೆ ತಂದಲ್ಲಿ ದೇಶದ ಹೆಚ್ಚಿನ ಪ್ರಗತಿ ಸಾಧ್ಯವೆಂದು ರಾಜ್ಯ ಸರ್ಕಾರಿ ಭೂಸಂರಕ್ಷಣೆ ಟಾಸ್ಕ್ ಪೋರ್ಸ್ ಸಮಿತಿಯ ಮಾಜಿ ಅಧ್ಯಕ್ಷ ವಿ.ಬಾಲಸುಬ್ರಮಣಿಯನ್ ಅಭಿಪ್ರಾಯ ಪಟ್ಟರು.ಮಾಜಿ ಸಚಿವ ಎಂ.ವೈ.ಘೋರ್ಪಡೆ ಅಧ್ಯಕ್ಷತೆಯ ಕರ್ನಾಟಕ ಸೇವಾ ಸಂಘ ಶನಿವಾರ ಆಯೋಜಿಸಿದ್ದ 6ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು, `ಭಾರತ ಮತ್ತು ಚೀನಾ ವಿಕಾಸದ ಎರಡು ವಿವಿಧ ಪಥಗಳು~ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ಚೀನಾ ದೇಶ ಕೆಲವೊಂದು ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದು ಭಾರತ ಬಹುದೂರದಲ್ಲಿದೆ,ವಾಕ್ ಸ್ವಾತಂತ್ರ್ಯ ಭಾರತದಲ್ಲಿ ದುರುಪಯೋಗ ಆಗುತ್ತಿದೆ. ನಿರುದ್ಯೋಗ ಭಾರತದಲ್ಲಿ ಶೇಕಡ 43ರಷ್ಟಿದ್ದರೆ ಚೀನಾದಲ್ಲಿ ಶೇಕಡ 11ರಷ್ಟಿದೆ ಕೃಷಿ, ಕೈಗಾರಿಕೆ, ಆರ್ಥಿಕ ವಲಗಳಲ್ಲಿ ಎರಡೂ ರಾಷ್ಟ್ರಗಳು ಪೈಪೋಟಿಗೆ ಬಿದ್ದು ಬೆಳವಣಿಗೆ ಆಗುತ್ತಿದ್ದು, ಭಾರತ ಮತ್ತು ಚೀನಾ ಏಷ್ಯಾ ಖಂಡದ ಅಭಿವೃದ್ಧಿ ಹೊಂದುತ್ತಿ ರುವ ದೇಶಗಳಾಗಿವೆ ಎಂದರು.ಎಂ.ವೈ. ಘೋರ್ಪಡೆ ಮಾತನಾಡಿ ಪ್ರಜಾಪ್ರಭುತ್ವದ ಕೆಳಹಂತದ ವ್ಯವಸ್ಥೆ ಯಲ್ಲೂ ಭ್ರಷ್ಟಾಚಾರ ಮಿತಿ ಮೀರು ತ್ತಿರುವ ಬಗ್ಗೆ ಆತಂಕ ವ್ಯಕ್ತ ಪಡಿಸಿದರು.ಸ್ಮಯೋರ್ ಸಂಸ್ಥೆಯ ಮುಖ್ಯಸ್ಥರಾದ ಎಸ್.ವೈ. ಘೋರ್ಪಡೆ, ನಾಜೀಮ್ ಶೇಖ್, ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆಯ ಅಧಿಕಾರಿ ವರ್ಗದವರು ಶಿಕ್ಷಕರು, ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry