`ನನ್ನ ದಿನದ ಸಂಪಾದನೆ ಒಂದೂವರೆ ಸಾವಿರ, ತಿಂಗಳಿಗೆ ನಲವತ್ತೈದು ಸಾವಿರ, ವರ್ಷಕ್ಕೆ ಐದೂವರೆ ಲಕ್ಷ ರೂಪಾಯಿ. ಯಾವ ಗೌರ್ಮೆಂಟ್ ಆಫೀಸರ್ಗಿಂತ ಕಡಿಮೆ ಇದ್ದೀನಿ; ನೀವೇ ಹೇಳಿ~-ಆಟೊ ನಾಗರಾಜ್ ಸಣ್ಣದೊಂದು ಲೆಕ್ಕವನ್ನು ನನ್ನ ಮುಂದಿಟ್ಟರು. ಅವರ ಮಾತಿನಲ್ಲಿ ಅಹಂ ಇರಲಿಲ್ಲ.

ನೇಗಿಲು ಹಿಡಿದು ಹೊಲದಲ್ಲಿ ಉಳುಮೆ ಮಾಡುವಾಗ, ಸಸಿಗಳನ್ನು ನೆಟ್ಟು ಪೋಷಿಸುವಾಗ, ಫಸಲನ್ನು ತೆಗೆಯುವಾಗ ಮುಖದ ಮೇಲೆ ಮೂಡುತ್ತಿದ್ದ ಬೆವರ ಹನಿಗಳು ಮಣ್ಣಲ್ಲಿ ಬಿದ್ದು ಮುತ್ತಾದ ಯಶಸ್ಸಿನ ಕಥೆ ಇತ್ತು.
ಆಟೊ ನಾಗರಾಜ್ ಈಗ ಅಪ್ಪಟ ನೇಗಿಲ ಯೋಗಿ.

ಇವರ ಹೆಸರಿನ ಜೊತೆಗೆ `ಆಟೊ~ ಸೇರಿಕೊಂಡಿರುವುದರ ಹಿಂದೆಯೂ ಕಥೆ ಇದೆ. ಇವರು ಮೈಸೂರು ತಾಲ್ಲೂಕು ದುದ್ದಗೆರೆಯವರು. ಇವರೇ ಮನೆಯ ಹಿರಿಯ ಮಗ. ಮೂವರು ತಂಗಿಯರು, ತಮ್ಮನನ್ನು ಸಾಕುವ ಭಾರ ಹೆಗಲೇರಿತು. ಮಳೆಯನ್ನೇ ನಂಬಿ ಕೃಷಿ ಮಾಡಿ ಬದುಕುವುದು ಕಷ್ಟವಾಯಿತು.

ತೀವ್ರವಾಗಿ ಹತಾಶೆಗೊಂಡ ನಾಗರಾಜ್ ಕೃಷಿಗೆ `ಸಲಾಂ~ ಹೇಳಿ ಮೈಸೂರಿನತ್ತ ಮುಖ ಮಾಡಿದರು. ಅಲ್ಲಿ ಗಾರೆ ಹೊತ್ತರು, ತಾವೇ ಗಾರೆ ಕೆಲಸ ಮಾಡುವುದನ್ನು ಕಲಿತರು, ಇದೇ ಅನುಭವ ಬಳಸಿಕೊಂಡು ಮೇಸ್ತ್ರಿಯಾದರು. ಆದರೂ ಮನೆಯ ಕಷ್ಟ ನೀಗಲಿಲ್ಲ. ಕಟ್ಟಡ ನಿರ್ಮಾಣ ಗುತ್ತಿಗೆದಾರ ಕೂಡ ಆದರು.

ಊಹೂಂ, ಇದರಿಂದಲೂ ಜೀವನ ಮಟ್ಟ ಸುಧಾರಿಸಲೇ ಇಲ್ಲ. ತಂಗಿಯರನ್ನು ಮದುವೆ ಮಾಡಿ ಕಳುಹಿಸುವಷ್ಟರಲ್ಲೇ ಸುಸ್ತಾಗಿ ಹೋಗಿದ್ದರು. ಮೈಸೂರು ಬಿಟ್ಟು ಊರಿಗೆ ಬಂದು ತೆಂಗಿನಕಾಯಿ ವ್ಯಾಪಾರ ಶುರು ಮಾಡಿದರು.

ಇದೂ ಕೈ ಕಚ್ಚಿತು. ರೇಷ್ಮೆ ಬೆಳೆದರು, ಇದು ಇನ್ನೆಂದಿಗೂ ಕೃಷಿ ಸಹವಾಸವೇ ಬೇಡ ಎನ್ನುವಂತಹ ಹೊಡೆತ ಕೊಟ್ಟಿತು. ಇನ್ನು ಬದುಕು ಬೇಡವೆನಿಸಿತು. ಆದರೆ ತನ್ನನ್ನೇ ನಂಬಿರುವ ಜೀವಗಳನ್ನು ನೆನೆದು ಕೆಟ್ಟ ಯೋಚನೆಯನ್ನು ಬಿಟ್ಟು `ಜೀವನ್ಮುಖಿ~ಯಾದರು.

ಆಟೊ ನಾಗರಾಜ್
ನಾಗರಾಜ್ಗೆ ಸೆಕೆಂಡ್ ಹ್ಯಾಂಡ್ ಆಪೆ ಆಟೊ ಖರೀದಿಸುವ ಯೋಚನೆ ಬಂದಿತು. ಆಗ ಹೆಂಡತಿಯ ತವರು ಮನೆಯವರು ಕೊಟ್ಟಿದ್ದ ಒಡವೆಗಳು ನೆನಪಿಗೆ ಬಂದವು. ಹೆಂಡತಿಯನ್ನು ಪುಸಲಾಯಿಸಿ ಅವುಗಳನ್ನು ಪಡೆದು ಗಿರವಿ ಇಟ್ಟು 50 ಸಾವಿರ ರೂಪಾಯಿ ಸಾಲ ಪಡೆದರು. 50 ಸಾವಿರ ಬಾಕಿ ಉಳಿಸಿಕೊಂಡು ಆಟೊ ಖರೀದಿಸಿ ಹೊಸ ಜೀವನ ಆರಂಭಿಸಿದರು.

ರೈತರು ಬೆಳೆಯುವ ತರಕಾರಿಯನ್ನು ಮೈಸೂರಿನ ಮಾರುಕಟ್ಟೆಗೆ ಸಾಗಿಸುವುದು ನಿತ್ಯ ಕಾಯಕವಾಯಿತು. ಹೀಗಾಗಿ ನಾಗರಾಜ್ ಹೆಸರಿನ ಹಿಂದೆ `ಆಟೊ~ ಸೇರಿಕೊಂಡಿತು. ಹಗಲು-ರಾತ್ರಿ ದುಡಿದರೂ ದಿನದ ಸಂಪಾದನೆ 500 ರೂಪಾಯಿ ಮೀರುತ್ತಿರಲಿಲ್ಲ. ಎಲ್ಲ ಸೇರಿದರೆ ತಿಂಗಳಿಗೆ 15 ಸಾವಿರ. ಖರ್ಚು ಕಳೆದರೆ ಉಳಿಯುತ್ತಿದ್ದದ್ದು 6 ಸಾವಿರ.

ಬಂಗಾರದ ಮನುಷ್ಯ
ನಿತ್ಯ ತರಕಾರಿಯನ್ನು ಮಾರುಕಟ್ಟೆಗೆ ಸಾಗಿಸುತ್ತಿದ್ದರಿಂದ ತರಕಾರಿ ರೈತರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನ್ನುವುದು ಖಾತ್ರಿ ಆಯಿತು. ಆ ದಿನ ರಾತ್ರಿ ನಾಗರಾಜ್ಗೆ ನಿದ್ದೆ ಬರಲೇ ಇಲ್ಲ. ರಾತ್ರಿಪೂರ ಯೋಚಿಸಿದಾಗ ಆಟೊ ಓಡಿಸುವಾಗ ಕಷ್ಟಕಾಲಕ್ಕೆ ಇರಲಿ ಎಂದು ಹಾಕಿದ್ದ ಚೀಟಿ ನೆನಪಿಗೆ ಬಂದಿತು. ಅದು 1 ಲಕ್ಷವಾಗಿತ್ತು. ಮುಂಜಾನೆ ಎದ್ದು ನೇರ ಹೊಲದ ಬಳಿ ಹೋದರು. ತನ್ನ ಹೊಲ ಯಾವುದು ಎನ್ನುವುದು ತಿಳಿಯಲೇ ಇಲ್ಲ! ಏಕೆಂದರೆ ಹೊಲದಲ್ಲಿ ಪಾರ್ಥೇನಿಯಂ ಕಳೆ ಆಳೆತ್ತರಕ್ಕೆ ಬೆಳೆದುನಿಂತಿತ್ತು.

ನಾಗರಾಜ್ ಕುಡುಗೋಲು ಹಿಡಿದು ಹೊಲವನ್ನು ಸ್ವಚ್ಛಗೊಳಿಸಿ ಉಳುಮೆ ಆರಂಭಿಸಿದರು. ಪತ್ನಿ ಸಾವಿತ್ರಿ, ತಮ್ಮ ಶಿವಲಿಂಗ ಜೊತೆಯಾದರು. ನೋಡ ನೋಡುತ್ತಿದ್ದಂತೆ ಹೊಲದಲ್ಲಿ ನೇಗಿಲಿನಿಂದ ಉಳುಮೆ ಮಾಡಿದ ಸಾಲುಗಳು ಮೂಡತೊಡಗಿದವು. ಲಕ್ಷ ರೂಪಾಯಿಗಳನ್ನೇ ಮೂಲ ಬಂಡವಾಳವಾಗಿಕೊಂಡು ಬೋರ್ವೆಲ್ ಹಾಕಿಸಿದರು.

ಒಳ್ಳೆಯ ನೀರು ಬಂದಿತು. ಮೂರು ಎಕರೆಯಲ್ಲಿ `ಅಂತರ ಬೇಸಾಯ~ ಆರಂಭಿಸಿದರು.
ಒಂದು ಎಕರೆಯಲ್ಲಿ 70 ಟನ್ ಕಬ್ಬು ಬೆಳೆದು 1 ಲಕ್ಷ ಆದಾಯ, ಇನ್ನೊಂದು ಎಕರೆಯಲ್ಲಿ ಆರು ತಿಂಗಳಲ್ಲಿ ಎರಡು ಬ್ಯಾಚ್ನಲ್ಲಿ 35 ಟನ್ ಟೊಮೆಟೊ ಬೆಳೆದು 2 ಲಕ್ಷ, ಮತ್ತೊಂದು ಎಕರೆಯಲ್ಲಿ 10 ಟನ್ ಬಾಳೆ ಬೆಳೆದು 3.5 ಲಕ್ಷ ರೂಪಾಯಿ ಸಂಪಾದಿಸಿದರು. ಕೃಷಿ ಆರಂಭಿಸಿದ ಒಂದೇ ವರ್ಷದಲ್ಲಿ 6.5 ಲಕ್ಷ ಸಂಪಾದಿಸಿದರು.

ಇದರಲ್ಲಿ 1ಲಕ್ಷ ಖರ್ಚು ಮಾಡಿದ್ದರು. ಉಳಿದ 5.5 ಲಕ್ಷದಲ್ಲಿ ಮನೆ ಹತ್ತಿರವೇ ಇದ್ದ ಹೊಲದಲ್ಲಿ ಬೋರ್ವೆಲ್ ಕೊರೆಸಿದರು. ವಿದ್ಯುತ್ ಸಂಪರ್ಕ, ಹನಿ ನೀರಾವರಿ, ಮಲ್ಚಿಂಗ್ ಪೇಪರ್, ಕೊಟ್ಟಿಗೆ ಗೊಬ್ಬರ, ರಸಗೊಬ್ಬರ, ಕ್ರಿಮಿನಾಶಕ, ಕಾರ್ಮಿಕರ ಕೂಲಿ, ಕೃಷಿ ಪರಿಕರಗಳನ್ನು ಇಡಲು ಪುಟ್ಟ ಮನೆ ನಿರ್ಮಾಣ ಸೇರಿ 6.5 ಲಕ್ಷ ಖರ್ಚಾಯಿತು.

ಮೂರೂವರೆ ಎಕರೆಯಲ್ಲಿ ಕಲ್ಲಂಗಡಿ ನೆಟ್ಟರು. ಫಸಲು ದೃಷ್ಟಿ ತೆಗೆಯುವ ಹಾಗೆ ಬಂದಿತು. ಜೊತೆಗೆ ಬೋರ್ವೆಲ್ನಲ್ಲಿ ಎರಡೂವರೆ ಇಂಚು ನೀರು ಚಿಮ್ಮಿತು. ಹೆಚ್ಚುವರಿ ನೀರನ್ನು ಪಕ್ಕದ ಹೊಲದವರಿಗೆ ಮಾರಿ 50 ಸಾವಿರ ಗಳಿಸಿದರು. ಕೇವಲ ಆರು ತಿಂಗಳಲ್ಲಿ ಐದು ಲಕ್ಷ ಸಂಪಾದಿಸಿದರು!

ಕಲ್ಲಂಗಡಿ ಫಸಲು ತೆಗೆದ ಬಳಿಕ 3 ಎಕರೆಯಲ್ಲಿ ಟೊಮೆಟೊ ಸಸಿಗಳನ್ನು ನೆಟ್ಟರು. ಆರು ತಿಂಗಳಲ್ಲಿ 100 ಟನ್ ಇಳುವರಿ ಬಂದಿತು. ಇದರಿಂದ 10 ಲಕ್ಷ ರೂಪಾಯಿ ಕೈ ಸೇರಿತು. ಇದಕ್ಕಾಗಿ ಖರ್ಚಾಗಿದ್ದು 3 ಲಕ್ಷ.

ಕಳೆದ ತಿಂಗಳು ಒಂದು ಎಕರೆಯಲ್ಲಿ ಸಾಂಬಾರ್ ಸೌತೆ, ಇನ್ನೊಂದು ಎಕರೆ ಸಿಹಿ ಕುಂಬಳ ಹಾಕಿದ್ದಾರೆ. ಇನ್ನೊಂದು ತಿಂಗಳಲ್ಲಿ ಈ ಫಸಲಿನಿಂದ ಕನಿಷ್ಠ ಒಂದೂವರೆ ಲಕ್ಷ ಲಾಭವನ್ನು ನಿರೀಕ್ಷಿಸಿದ್ದಾರೆ. ಮತ್ತೊಂದು ಕಡೆ ಇರುವ ಎರಡೂವರೆ ಎಕರೆಯಲ್ಲಿ ಟೊಮೆಟೊ, ಕಬ್ಬು, ಬಾಳೆ ಇದೆ.

ದುಡಿಮೆಯ ನಂಬಿ ಬದುಕು
ನಾಗರಾಜ್ ದುಡಿಮೆಯನ್ನು ನಂಬಿದವರು. ಸೋಮಾರಿಯಾಗಿ ಕುಳಿತವರೇ ಅಲ್ಲ. ಪತ್ನಿ ಸಾವಿತ್ರಿ ಬೆಂಗಳೂರಿನವರಾದರೂ ಹೊಲದಲ್ಲಿ ಗಂಡನಿಗೆ ಜೊತೆಯಾಗುತ್ತಾರೆ. ಪುತ್ರಿಯರಾದ ರಂಜಿತ, ಐಶ್ವರ್ಯ ಶಾಲೆ ಮುಗಿಸಿ ಹೊಲದತ್ತ ಹೆಜ್ಜೆ ಹಾಕುತ್ತಾರೆ. ಎಲ್ಲರೂ ದುಡಿಯುತ್ತಿದ್ದಾರೆ. ಇವರಂತೆ ಬೇಕಾದಷ್ಟು ರೈತರು ದುಡಿಯುತ್ತಿದ್ದಾರೆ.

ಆದರೆ ನಾಗರಾಜ್ ಮಾತ್ರ ಏಕೆ ಯಶಸ್ವಿಯಾದರು? ಇವರು ತಮ್ಮ ಕೃಷಿಯಲ್ಲಿ ವೈಜ್ಞಾನಿಕ ವಿಧಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ. ಪ್ರಗತಿಪರ ರೈತರ ಹೊಲಗಳಿಗೆ ಹೋಗಿ ಅನುಮಾನಗಳನ್ನು ಪರಿಹರಿಸಿಕೊಳ್ಳುತ್ತಾರೆ. ಜತೆಗೆ ಅನುಭವವನ್ನೂ ಸೇರಿಸಿ ಬೇಸಾಯ ಮಾಡುತ್ತಿದ್ದಾರೆ.

`ನಾವು ಉತ್ತಮ ಗುಣಮಟ್ಟದ ಬೀಜವನ್ನೇ ಬಿತ್ತಬೇಕು. ಯಾವುದೇ ಕಾರಣಕ್ಕೂ ಕಳೆ ಬೆಳೆಯಲು ಬಿಡಲೇಬಾರದು. ರೋಗಗ್ರಸ್ತ ಸಸಿಗಳನ್ನು ಮುಲಾಜಿಲ್ಲದೆ ಕಿತ್ತು ಹಾಕಬೇಕು. ಮಕ್ಕಳಂತೆ ಮಮತೆಯಿಂದ ಸಸಿಗಳನ್ನು ಪೋಷಿಸಬೇಕು. ಆಗ ಮಾತ್ರ ಕೈತುಂಬ ನೋಟು ಎಣಿಸಲು ಸಾಧ್ಯ~ ಎನ್ನುತ್ತಾರೆ ನಾಗರಾಜ್.

ತೋಟಗಾರಿಕೆ ಇಲಾಖೆ `ಆಟೊ ನಾಗರಾಜ್~ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಿದೆ. ಇದನ್ನು ರೈತರಿಗೆ ತೋರಿಸಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಉತ್ತೇಜಿಸುತ್ತಿದೆ. 4ನೇ ತರಗತಿ ಓದಿರುವ ನಾಗರಾಜ್ ರಾಜ್ಯದ ಮೂಲೆ ಮೂಲೆಯಿಂದ ಬರುವ ರೈತರಿಗೆ ಹೊಲದಲ್ಲಿ ಪಾಠ ಹೇಳುತ್ತಾರೆ. ಎರಡು ವರ್ಷಗಳಲ್ಲಿ 80 ಬಸ್ಸುಗಳಲ್ಲಿ ರೈತರು ಇವರ ಹೊಲಕ್ಕೆ ಬಂದು ಬೆಳೆಯನ್ನು ಕಂಡು ಸ್ಫೂರ್ತಿಗೊಂಡಿದ್ದಾರೆ.

ಲಕ್ಷ, ಲಕ್ಷ ಕಟ್ಟುಗಳು!
ನಾಗರಾಜ್ ಬಳಿ ಎರಡು ಆಪೆ ಆಟೊಗಳಿವೆ. ಊರಿನಲ್ಲಿ 13 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸುತ್ತಿದ್ದಾರೆ. ಹೆಣ್ಣು ಮಕ್ಕಳಿಗಾಗಿ ಚಿನ್ನ ಖರೀದಿಸಿದ್ದಾರೆ. ತಮ್ಮ ಶಿವಲಿಂಗುವಿಗೂ ತನ್ನಂತೆಯೇ ಬದುಕುವ ದಾರಿ ತೋರಿಸಿಕೊಟ್ಟಿದ್ದಾರೆ. `ನಾನು ತರಕಾರಿ ಬೆಳೆಯಲು ಶುರು ಮಾಡಿದ ಮೇಲೆ ಲಕ್ಷ ಲಕ್ಷ ರೂಪಾಯಿಗಳ ನೋಟಿನ ಕಂತೆಗಳನ್ನು ನೋಡಿದ್ದು~ ಎಂದು ನಾಗರಾಜ್ ಭಾವುಕರಾದರು.

ಕೇವಲ ಮೂರು ವರ್ಷಗಳಲ್ಲಿ ಕೃಷಿಯಿಂದ ತನ್ನ ಬದುಕಿನ ದಿಕ್ಕನ್ನೇ ಬದಲಿಸಿಕೊಂಡಿರುವ ನಾಗರಾಜ್ ಬಾಯಿಂದ ಒಮ್ಮೆಯೂ `ನಷ್ಟ~ ಎನ್ನುವ ಪದ ಹೊರಬೀಳಲೇ ಇಲ್ಲ. ಕೆಲವೊಮ್ಮೆ `ಲಾಭ ಕುಸಿತ~ ಎನ್ನುತ್ತಿದ್ದರು, ಅಷ್ಟೆ.

`ನಷ್ಟ~ ಎಂಬ ಚರ್ವಿತ ಚರ್ವಣವಾದ ಮಾತಿನಿಂದ `ಲಾಭ ಕುಸಿತ~ದೆಡೆಗಿನ ನಾಗರಾಜ್ ಅವರ ಪ್ರಯಾಣ ಸಣ್ಣದೇನೂ ಅಲ್ಲ. ನಷ್ಟವಾಯಿತೆಂದು ಆತ್ಮಹತ್ಯೆಗೆ ಮುಂದಾಗುವ ರೈತರಿಗೆ ಅವರು ನೀಡುವ ಸಲಹೆಯೂ ಅದುವೇ. `ಭೂಮಿತಾಯಿ ಕಷ್ಟಪಡುವವರಿಗೆ ಎಂದಿಗೂ ಮೋಸ ಮಾಡುವುದಿಲ್ಲ. ಆದರೆ ನಮ್ಮ ರೈತರು ಶೋಕಿಗೆ ಬಿದ್ದಿದ್ದಾರೆ.

ಬೋರ್ವೆಲ್ ಚಾಲೂ ಮಾಡಿ ಪೇಟೆ ಸುತ್ತಲು ಹೋಗಿ ಕುಡಿದು ಬರುತ್ತಾರೆ. ಕಾಲಕಾಲಕ್ಕೆ ನೀರು, ಗೊಬ್ಬರ, ಔಷಧಿ ಕೊಡುವುದಿಲ್ಲ. ಅಂದಮೇಲೆ ಫಸಲು ಹೇಗೆ ತಾನೆ ಚೆನ್ನಾಗಿ ಬರುತ್ತದೆ? ಒಂದೇ ಎಕರೆ ಇದ್ದರೂ ಸಾಕು, ಐದಾರು ಮಂದಿ ನೆಮ್ಮದಿ ಜೀವನ ನಡೆಸಬಹುದು~.

ಕೂಲಿ ಕಾರ್ಮಿಕರಿಗೆ ಬೋನಸ್!
ನಾಗರಾಜ್ ಕೃಷಿಯಲ್ಲಿ ಸಂಪಾದಿಸಿದ್ದೆಲ್ಲ ತನಗೇ ಇರಲಿ ಎನ್ನುವ ಆಸೆಬುರುಕರಲ್ಲ. ತಮ್ಮ ಬಳಿ ವರ್ಷಪೂರ್ತಿ ಕೆಲಸ ಮಾಡುವ ಇಬ್ಬರು ಪುರುಷರು, ಮೂವರು ಮಹಿಳಾ ಕೂಲಿ ಕಾರ್ಮಿಕರಿಗೆ ಪ್ರತಿ ಬೆಳೆ ಬಂದಾಗಲೂ 500 ರಿಂದ 1 ಸಾವಿರ ತನಕ ಪ್ರತಿಯೊಬ್ಬರಿಗೂ ಬೋನಸ್ ಕೊಡುತ್ತಾರೆ. ವರ್ಷಕ್ಕೊಮ್ಮೆ ಐದು ಕುಟುಂಬದವರಿಗೆ ಹೊಸ ಬಟ್ಟೆಯನ್ನು ಕೊಡಿಸುತ್ತಾರೆ.

`ನೀವು ಬೋನಸ್ ಕೊಡ್ತೀರಾ!~ ಅಂತ ಕೇಳಿದರೆ, `ಯಾಕಾಗಬಾರದು? ಬರುವ ಆದಾಯದಲ್ಲಿ ನಾನೊಬ್ಬನೇ ಖುಷಿ ಪಡಬೇಕಾ? ನನ್ನಸಂಪಾದನೆಯಲ್ಲಿ ಅವರ ಶ್ರಮವೂ ಇದೆ. ಅವರೆಲ್ಲ ನನ್ನದು ಎನ್ನುವ ಭಾವನೆಯಿಂದ ಕೆಲಸ ಮಾಡಿದ್ದರಿಂದಲೇ ತಾನೆ ನಾನು ಲಕ್ಷ ಲಕ್ಷ ಎಣಿಸುತ್ತಿರುವುದು? ಎಂದು ಕೇಳಿದರು.

(ಆಟೊ ನಾಗರಾಜ್ ಅವರನ್ನು 9901261505ರಲ್ಲಿ ಸಂಪರ್ಕಿಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.