`ಬಂಗಾ ಬೀಟ್ಸ್' ಲಾಂಛನ ಬಿಡುಗಡೆ
ಬೆಂಗಳೂರು: ಆಗಸ್ಟ್ 14ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನ (ಐಬಿಎಲ್) ಫ್ರಾಂಚೈಸ್ ಆಗಿರುವ ಬೆಂಗಳೂರಿನ `ಬಂಗಾ ಬೀಟ್ಸ್' ತಂಡ ಶುಕ್ರವಾರ ತನ್ನ ಲಾಂಛನ ಬಿಡುಗಡೆಗೊಳಿಸಿತು.
ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಲಿಂಪಿಯನ್ ಅಶ್ವಿನಿ ಪೊನ್ನಪ್ಪ ಹಾಗೂ ನಟ ಪುನೀತ್ ರಾಜಕುಮಾರ್ ಬಂಗಾ ಬೀಟ್ಸ್ ತಂಡದ ಲಾಂಛನ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅಶ್ವಿನಿ ಅವರು `ಐಪಿಎಲ್ನಂತೆ ಐಬಿಎಲ್ ಕೂಡ ಉದಯೋನ್ಮುಖ ಆಟಗಾರರಿಗೆ ಉತ್ತಮ ವೇದಿಕೆಯಾಗುವ ವಿಶ್ವಾಸವಿದೆ' ಎಂದು ಅಭಿಪ್ರಾಯ ಪಟ್ಟರು.
ನಟ ಪುನೀತ್ ಮಾತನಾಡಿ `ಬ್ಯಾಡ್ಮಿಂಟನ್ ಅಂದ್ರೆ ಇಷ್ಟ. ನಾನೂ ಆಡುತ್ತಿದ್ದೆ. ಇದೀಗ ಬ್ಯಾಡ್ಮಿಂಟನ್ ಲೀಗ್ ಶುರುವಾಗುತ್ತಿರುವುದು ಸಂತಸ ತಂದಿದೆ' ಎಂದರು. ಮೂಲತಃ ರಿಯಲ್ ಎಸ್ಟೇಟ್ ಕಂಪೆನಿಯಾಗಿರುವ ಬಿಒಪಿ, ಬೆಂಗಳೂರಿನ `ಬಂಗಾ ಬೀಟ್ಸ್' ತಂಡದ ಫ್ರಾಂಚೈಸ್ ಪಡೆದಿದೆ.
ತಂಡದ ಕೋಚ್ ಯು. ವಿನಯ್ ಕುಮಾರ್, ಸಿಇಒ ವಿಜಯ್ ಲ್ಯಾನ್ಸಿ, ರಾಜ್ಯ ಬ್ಯಾಡ್ಮಿಂಟನ್ ಸಂಸ್ಥೆ ಅಧ್ಯಕ್ಷ ಜಿ. ಜೈರಾಜ್, ಸಂಸ್ಥೆಯ ಕಾರ್ಯದರ್ಶಿ ಎನ್.ಸಿ. ಸುಧೀರ್ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.