ಸೋಮವಾರ, ಮೇ 10, 2021
26 °C

ಬಂಡುಕೋರರ ಬಲೆಯೊಳಗೆ ಗಡಾಫಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟ್ರಿಪೋಲಿ (ಎಪಿ): ಲಿಬಿಯಾದ ಸರ್ವಾಧಿಕಾರಿ ಮುಅಮ್ಮರ್ ಗಡಾಫಿ ಅವರನ್ನು ಸುತ್ತುವರೆದಿರುವುದಾಗಿ ಬಂಡುಕೋರರು ಹೇಳಿಕೊಂಡಿದ್ದಾರೆ.ಇನ್ನು ಕೆಲವೇ ಸಮಯದಲ್ಲಿ ಅವರನ್ನು ಸೆರೆ ಹಿಡಿಯಲಾಗುವುದು ಇಲ್ಲವೇ ಕೊಲ್ಲಲಾಗುವುದು ಎಂದು ಟ್ರಿಪೋಲಿಯ ಹೊಸ ಮಿಲಿಟರಿ ಕೌನ್ಸಿಲ್ ಹೇಳಿದೆ.  ಇಲ್ಲಿಂದ ಕೇವಲ 40 ಮೈಲು ಅಂತರದಲ್ಲಿ ಗಡಾಫಿ ಇದ್ದು,  ಬಂಡುಕೋರರು ಸುತ್ತುವರೆದಿದ್ದಾರೆ. ಹಾಗಾಗಿ ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ.ಗಡಾಫಿ ಪತ್ತೆಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಬೇಹುಗಾರಿಕೆ ಸಂಸ್ಥೆಯ ನೆರವು ಪಡೆಯಲಾಗಿದೆ ಎಂದೂ ಕೌನ್ಸಿಲ್ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.